Publish Date: Fri, 09 Jul 2021 (09:30 IST)
Updated Date: Fri, 09 Jul 2021 (09:32 IST)
ಲಂಡನ್: ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಈಗ ಅಭ್ಯಾಸ ಪಂದ್ಯವಾಡಲು ಕೊರೋನಾ ಭೀತಿ ಶುರುವಾಗಿದೆ.
ಪಾಕಿಸ್ತಾನ ವಿರುದ್ಧ ಸೀಮಿತ ಓವರ್ ಗಳ ಸರಣಿಯಲ್ಲಿ ಪಾಲ್ಗೊಂಡಿದ್ದ ಏಳು ಇಂಗ್ಲೆಂಡ್ ಕ್ರಿಕೆಟಿಗರಲ್ಲಿ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಇದೀಗ ಭಾರತದ ಅಭ್ಯಾಸ ಪಂದ್ಯದ ಮೇಲೆ ಪರಿಣಾಮ ಬೀರಲಿದೆ.
ಬಿಸಿಸಿಐ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಅಭ್ಯಾಸ ಪಂದ್ಯವೇರ್ಪಡಿಸಲು ಮನವಿ ಮಾಡಿತ್ತು. ಅದರಂತೆ ಇಂಗ್ಲೆಂಡ್ ಮಂಡಳಿ ಒಂದು ಅಥವಾ ಎರಡು ಅಭ್ಯಾಸ ಪಂದ್ಯ ಆಯೋಜಿಸಲು ತಯಾರಿ ನಡೆಸಿತ್ತು. ಆದರೆ ಈಗ ಇಂಗ್ಲೆಂಡ್ ಕ್ರಿಕೆಟಿಗರಲ್ಲಿ ಕೊರೋನಾ ಕಾಣಿಸಿಕೊಂಡಿರುವುದರಿಂದ ಸುರಕ್ಷತಾ ಕಾರಣದಿಂದ ಅಭ್ಯಾಸ ಪಂದ್ಯ ರದ್ದಾಗುವ ಸಾಧ್ಯತೆ ಹೆಚ್ಚಾಗಿದೆ.