Publish Date: Thu, 08 Jul 2021 (09:35 IST)
Updated Date: Thu, 08 Jul 2021 (10:04 IST)
ಮುಂಬೈ: ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಗಾಯಾಳು ಶುಬ್ನಂ ಗಿಲ್ ಬದಲಿಗೆ ಪೃಥ್ವಿ ಶಾ ಮತ್ತು ದೇವದತ್ತ್ ರನ್ನು ಇಂಗ್ಲೆಂಡ್ ಗೆ ಕರೆಸಿಕೊಳ್ಳಲು ಮನವಿ ಮಾಡಿದ್ದು, ಬಿಸಿಸಿಐ ಆಯ್ಕೆ ಸಮಿತಿಯ ಆಕ್ರೋಶಕ್ಕೆ ಕಾರಣವಾಗಿದೆ.
ಒಬ್ಬ ಆರಂಭಿಕ ಆಟಗಾರ ಗಾಯಗೊಂಡರೆ ಈಗಿರುವ ತಂಡದಲ್ಲೇ ಬದಲಿಯಾಗಿ ಮತ್ತೊಬ್ಬರಿದ್ದಾರೆ. ಹಾಗಿರುವಾಗ ಬೇರೆ ಆಟಗಾರರನ್ನು ಕರೆಸಿಕೊಳ್ಳುವ ಅಗತ್ಯವೇನಿದೆ? ಎಂದು ಈ ಬಗ್ಗೆ ಮನವಿ ಮಾಡಿಕೊಂಡ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಗೆ ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ನಾಯಕ, ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಉಪಸ್ಥಿತಿಯಲ್ಲೇ ತಂಡದ ಆಯ್ಕೆ ನಡೆದಿತ್ತು. ಆಗ ಬ್ಯಾಕಪ್ ಓಪನರ್ ಆಗಿ ಕೆಎಲ್ ರಾಹುಲ್ ರನ್ನು ಆಯ್ಕೆ ಮಾಡಲಾಗಿತ್ತು. ಹೀಗಿರುವಾಗ ಈಗ ಗಿಲ್ ಗಾಯಗೊಂಡರೆ ಬದಲಿ ಇಬ್ಬರು ಆಟಗಾರರನ್ನು ಕರೆಸಿಕೊಳ್ಳುತ್ತಿರುವುದು ಏಕೆ? 24 ಆಟಗಾರರು ಸಾಲದೇ ಎಂದು ಆಯ್ಕೆ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ ಎನ್ನಲಾಗಿದೆ.