ಕೊಲೊಂಬೊ: ಶ್ರೀಲಂಕಾ ಸರಣಿಯಲ್ಲಿ ಟೀಂ ಇಂಡಿಯಾ ಉಪನಾಯಕನಾಗಿರುವ ವೇಗಿ ಭುವನೇಶ್ವರ್ ಕುಮಾರ್ ಕೋಚ್ ರಾಹುಲ್ ದ್ರಾವಿಡ್ ಜೊತೆ ಕೆಲಸ ಮಾಡುತ್ತಿರುವ ಖುಷಿ ಹಂಚಿಕೊಂಡಿದ್ದಾರೆ.
ರಾಹುಲ್ ದ್ರಾವಿಡ್ ಅವರ ಕೋಚಿಂಗ್ ನಲ್ಲಿ ಆಡಬೇಕೆಂಬುದು ನನ್ನ ಬಹುದಿನದ ಕನಸಾಗಿತ್ತು. ಅದೀಗ ನನಸಾಗಿದೆ ಎಂದು ಭುವಿ ಹೇಳಿಕೊಂಡಿದ್ದಾರೆ.
ಐಪಿಎಲ್ ನಲ್ಲಿ ಅವರ ವಿರುದ್ಧ ಆಡಿದ್ದೆ. ಆದರೆ ನನಗೆ ಅವರ ಜೊತೆ ಆಡಿದ ಹೆಚ್ಚಿನ ನೆನಪುಗಳಿಲ್ಲ. ಆದರೆ ಎನ್ ಸಿಎನಲ್ಲಿ ನಾನು ಅವರ ಜೊತೆ ಸಾಕಷ್ಟು ಮಾತನಾಡಿದ್ದೆ.ಅವರ ಜೊತೆ ಕೆಲಸ ಮಾಡಬೇಕೆಂದುಕೊಂಡಿದ್ದೆ. ಈಗ ಅವರ ಕೋಚ್ ಆಗಿ ಆಡುತ್ತಿರುವುದು ನನ್ನ ಅದೃಷ್ಟ. ಅವರು ಯುವ ಪ್ರತಿಭೆಗಳನ್ನು ಗುರುತಿಸಿ ಹೇಗೆ ಕೋಚ್ ಮಾಡುತ್ತಾರೆ ಎಂದು ತಿಳಿದುಕೊಳ್ಳಬೇಕಿತ್ತು ಎಂದು ಭುವಿ ಸಂತಸ ಹಂಚಿಕೊಂಡಿದ್ದಾರೆ.