Select Your Language

Notifications

webdunia
webdunia
webdunia
webdunia

ರವಿಶಾಸ್ತ್ರಿ ಸ್ಥಾನ ರಾಹುಲ್ ದ್ರಾವಿಡ್ ಗೆ ಕೊಡಬೇಕೇ? ಕಪಿಲ್ ದೇವ್ ಹೇಳಿದ್ದೇನು?

ರವಿಶಾಸ್ತ್ರಿ ಸ್ಥಾನ ರಾಹುಲ್ ದ್ರಾವಿಡ್ ಗೆ ಕೊಡಬೇಕೇ? ಕಪಿಲ್ ದೇವ್ ಹೇಳಿದ್ದೇನು?
ಮುಂಬೈ , ಸೋಮವಾರ, 5 ಜುಲೈ 2021 (12:14 IST)
ಮುಂಬೈ: ಟೀಂ ಇಂಡಿಯಾಗೆ ಶಾಶ್ವತವಾಗಿ ರಾಹುಲ್ ದ್ರಾವಿಡ್ ಕೋಚ್ ಆಗಬೇಕೇ? ಈ ಕುರಿತು ಮಾಜಿ ನಾಯಕ ಕಪಿಲ್ ದೇವ್ ಹೇಳಿದ್ದೇನು ಗೊತ್ತಾ?


ಟೀಂ ಇಂಡಿಯಾಗೆ ಮುಖ್ಯ ಕೋಚ್ ಆಗಿರುವ ರವಿಶಾಸ್ತ್ರಿ ಅವಧಿ ಇನ್ನೇನು ಮುಗಿಯುತ್ತದೆ. ಈಗ ಲಂಕಾ ಸರಣಿಗೆ ತಾತ್ಕಾಲಿಕವಾಗಿ ರಾಹುಲ್ ದ್ರಾವಿಡ್ ಗೆ ಕೋಚ್ ಹುದ್ದೆ ನೀಡಲಾಗಿದೆ. ಮುಂದೆ ದ್ರಾವಿಡ್ ರನ್ನೇ ಶಾಶ್ವತವಾಗಿ ಕೋಚ್ ಆಗಿ ನೇಮಿಸಬೇಕು ಎಂಬ ಮಾತು ಕೇಳಿಬರುತ್ತಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕಪಿಲ್ ದೇವ್ ‘ಲಂಕಾ ಸರಣಿ ಮುಗಿಯುವವರೆಗೂ ಈ ಬಗ್ಗೆ ಚರ್ಚೆ ಬೇಡ. ಹೊಸ ಕೋಚ್ ಗೆ ಹುಡುಕಾಟ ನಡೆಸುವುದು ತಪ್ಪಲ್ಲ. ಒಂದು ವೇಳೆ ರವಿಶಾಸ್ತ್ರಿ ಒಳ್ಳೆಯ ಕೆಲಸ ಮಾಡಿದರೆ ಅವರನ್ನು ಮುಂದುವರಿಸುವುದರಲ್ಲಿ ತಪ್ಪಿಲ್ಲ. ಇದಕ್ಕೆಲ್ಲಾ ಕಾಲವೇ ಉತ್ತರ ಕೊಡಬೇಕು. ಅಲ್ಲಿಯವರೆಗೆ ಕೋಚ್, ಆಟಗಾರರ ಮೇಲೆ ಇಲ್ಲದ ಒತ್ತಡ ಹಾಕುವುದು ಬೇಡ’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಟಿ20 ವಿಶ್ವಕಪ್ ಗೆ ಸ್ಥಾನ ಪಡೆಯಬಹುದಾದ ಟೀಂ ಇಂಡಿಯಾ ಯುವ ಕ್ರಿಕೆಟಿಗರು