Publish Date: Mon, 05 Jul 2021 (10:45 IST)
Updated Date: Mon, 05 Jul 2021 (10:24 IST)
ಮುಂಬೈ: ಶ್ರೀಲಂಕಾ ಪ್ರವಾಸಕ್ಕೆ ತೆರಳಿರುವ ಶಿಖರ್ ಧವನ್ ನೇತೃತ್ವದ ಟೀಂ ಇಂಡಿಯಾವನ್ನು ಎರಡನೇ ದರ್ಜೆ ತಂಡ ಎಂದು ಲೇವಡಿ ಮಾಡಿದ ಲಂಕಾ ಮಾಜಿ ನಾಯಕ ಅರ್ಜುನ ರಣತುಂಗಗೆ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಈ ರೀತಿ ತಿರುಗೇಟು ಕೊಟ್ಟಿದ್ದಾರೆ.
ಈ ತಂಡದಲ್ಲಿ ಕೊಹ್ಲಿ, ರೋಹಿತ್, ಬುಮ್ರಾರಂತಹ ಪ್ರಮುಖ ಆಟಗಾರರಿಲ್ಲದಿರಬಹುದು. ಹಾಗಂತ ಇದು ಬಿ ತಂಡವೇ? ಶ್ರೀಲಂಕಾ ಮೊದಲು ತನ್ನ ತಂಡವನ್ನು ನೋಡಿಕೊಳ್ಳಬೇಕು. ಅಫ್ಘಾನಿಸ್ತಾನಕ್ಕೂ ಟಿ20 ವಿಶ್ವಕಪ್ ಅರ್ಹತಾ ಪಂದ್ಯವಾಡುವ ಗತಿ ಬಂದಿಲ್ಲ. ಆದರೆ ನಿಮಗೆ ಮುಖ್ಯ ಸುತ್ತಿಗೆ ಪ್ರವೇಶ ಪಡೆಯಬೇಕಾದರೆ ಅರ್ಹತಾ ಸುತ್ತು ಆಡಬೇಕು. ಮೊದಲು ವಾಸ್ತವ ಅರ್ಥಮಾಡಿಕೊಳ್ಳಿ ಎಂದು ಆಕಾಶ್ ಚೋಪ್ರಾ ತಿರುಗೇಟು ನೀಡಿದ್ದಾರೆ.
ಮುಖ್ಯ ಆಟಗಾರರಿಲ್ಲದೇ ಧವನ್ ನೇತೃತ್ವದಲ್ಲಿ ಬಿಸಿಸಿಐ ಶ್ರೀಲಂಕಾಕ್ಕೆ ಎರಡನೇ ಟೀಂ ಇಂಡಿಯಾ ತಂಡ ಕಳುಹಿಸಿದ್ದು, ಲಂಕಾ ಕ್ರಿಕೆಟ್ ಗೆ ಮಾಡಿದ ಅವಮಾನ ಎಂದು ಅರ್ಜುನ ರಣತುಂಗಾ ವ್ಯಂಗ್ಯ ಮಾಡಿದ್ದರು.