Select Your Language

Notifications

webdunia
webdunia
webdunia
Saturday, 12 April 2025
webdunia

ಆರಂಭಿಕ ಸ್ಥಾನಕ್ಕೆ ಟೀಂ ಇಂಡಿಯಾದಲ್ಲಿ ಈಗ ಮೂವರೊಳಗೆ ಪೈಪೋಟಿ

ಟೀಂ ಇಂಡಿಯಾ
ಲಂಡನ್ , ಸೋಮವಾರ, 5 ಜುಲೈ 2021 (09:11 IST)
ಲಂಡನ್: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆಡಲು ಹೊರಟಿರುವ ಟೀಂ ಇಂಡಿಯಾದಲ್ಲಿ ಈಗ ಗಾಯಗೊಂಡ ಶುಬ್ನಂ ಗಿಲ್ ಸ್ಥಾನಕ್ಕೆ ಯಾರು ಎಂಬ ಪ್ರಶ್ನೆ ಎದ್ದಿದೆ.


ಈ ಆರಂಭಿಕ ಸ್ಥಾನಕ್ಕೆ ಮೂವರ ನಡುವೆ ಪೈಪೋಟಿಯಿದೆ. ಮಯಾಂಕ್ ಅಗರ್ವಾಲ್, ಕೆಎಲ್ ರಾಹುಲ್ ಹಾಗೂ ಯುವ ಕ್ರಿಕಟಿಗ ಅಭಿಮನ್ಯು ಈಶ್ವರನ್ ನಡುವೆ ಪೈಪೋಟಿಯಿದೆ. ಈ ಪೈಕಿ ಮಯಾಂಕ್ ಹಾಗೂ ರಾಹುಲ್ ಗೆ ಈಗಾಗಲೇ ಭಾರತದ ಪರ ಓಪನಿಂಗ್ ಮಾಡಿದ ಅನುಭವವಿದೆ.

ಹಾಗಿದ್ದರೂ ರಾಹುಲ್ ಗೆ ಮಧ್ಯಮ ಕ್ರಮಾಂಕದಲ್ಲಿ ಬಲ ತುಂಬಲು ಅವಕಾಶ ನೀಡಬಹುದು ಎನ್ನಲಾಗುತ್ತಿದೆ. ಹೀಗಾದಲ್ಲಿ ಮಯಾಂಕ್ ಅಥವಾ ಈಶ್ವರನ್ ಒಬ್ಬರು ಆರಂಭಿಕರಾಗಬಹುದು. ಒಂದು ವೇಳೆ ಅನುಭವಕ್ಕೆ ಬೆಲೆ ನೀಡುವುದಾದರೆ ಮಯಾಂಕ್ ಆಯ್ಕೆಯಾಗುತ್ತಾರೆ. ಅಥವಾ ಕೊಹ್ಲಿ ಈ ಮೊದಲು ಹೇಳಿದಂತೆ ಭವಿಷ್ಯದ ದೃಷ್ಟಿಯಿಂದ ತಂಡ ಕಟ್ಟುವುದಿದ್ದರೆ ಅಭಿಮನ್ಯ ಈಶ್ವರನ್ ಗೆ ಮಣೆ ಹಾಕಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ರವಿಶಾಸ್ತ್ರಿ ಕೋಚ್ ಪಟ್ಟ ಕೊನೆಗೊಳ್ಳಲು ಕೆಲವೇ ದಿನ ಬಾಕಿ