Select Your Language

Notifications

webdunia
webdunia
webdunia
webdunia

ವಿಂಬಲ್ಡನ್ ಓಪನ್: ಸಾನಿಯಾ-ರೋಹನ್ ಬೋಪಣ್ಣ ಜೋಡಿಗೆ ಮುನ್ನಡೆ

ವಿಂಬಲ್ಡನ್ ಓಪನ್: ಸಾನಿಯಾ-ರೋಹನ್ ಬೋಪಣ್ಣ ಜೋಡಿಗೆ ಮುನ್ನಡೆ
ಲಂಡನ್ , ಭಾನುವಾರ, 4 ಜುಲೈ 2021 (10:16 IST)
ಲಂಡನ್: ವಿಂಬಲ್ಡನ್ ಓಪನ್ ಟೆನಿಸ್ ಟೂರ್ನಿಯ ಮಿಕ್ಸೆಡ್ ಡಬಲ್ಸ್ ಪಂದ್ಯದಲ್ಲಿ ಭಾರತದ ಸಾನಿಯಾ ಮಿರ್ಜಾ ಮತ್ತು ರೋಹನ್ ಬೋಪಣ್ಣ ಜೋಡಿ ಮೂರನೇ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.


ಶನಿವಾರದ ಪಂದ್ಯದಲ್ಲಿ ಸಾನಿಯಾ-ರೋಹನ್ ಬೋಪಣ್ಣ ಜೋಡಿ ಬ್ರಿಟನ್ ನ ಆಡನ್ ಮೆಕ್ ಹ್ಯೂ-ಎಮಿಲಿ ವೆಬ್ಲೇ ಸ್ಮಿತ್ ಜೋಡಿಯನ್ನು 6-3, 6-1 ಅಂತರದಿಂದ ಸೋಲಿಸಿತು. ಮುಂದಿನ ಪಂದ್ಯದಲ್ಲಿ ಭಾರತೀಯ ಜೋಡಿ ಆಂಡ್ರೆಜಾ ಕ್ಲೆಪಾಕ್-ಜೀನ್ ಜುಲಿಯಾನ್ ರೋಜರ್ ಜೋಡಿಯನ್ನು ಎದರಿಸಲಿದೆ. ಜುಲೈ 6 ರಂದು ಈ ಪಂದ್ಯ ನಡೆಯಲಿದೆ.

ಇನ್ನೊಂದೆಡೆ, ಮಹಿಳೆಯರ ಡಬಲ್ಸ್ ಪಂದ್ಯದಲ್ಲಿ ಎರಡನೇ ಸುತ್ತಿನಲ್ಲಿ ಸಾನಿಯಾ-ಮ್ಯಾಟೆಕ್ ಜೋಡಿ ಸೋಲನುಭವಿಸಿದೆ. ರಷ್ಯಾದ ಜೋಡಿಯೆದುರು ಪ್ರಬಲ ಪೈಪೋಟಿ ನಡೆಸಿ ಸಾನಿಯಾ-ಮ್ಯಾಟೆಕ್ ಸೋಲನುಭವಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ಹುಡುಗರಿಗೆ ನೋ ರೆಸ್ಟ್: ಟ್ರೈನಿಂಗ್ ಶುರು ಮಾಡಿದ ದ್ರಾವಿಡ್