Publish Date: Fri, 02 Jul 2021 (09:45 IST)
Updated Date: Fri, 02 Jul 2021 (09:52 IST)
ಲಂಡನ್: ಬಹಳ ದಿನಗಳ ಬ್ರೇಕ್ ನ ಬಳಿಕ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಕಮ್ ಬ್ಯಾಕ್ ಮಾಡಿದ್ದು, ವಿಂಬಲ್ಡನ್ ಟೆನಿಸ್ ಟೂರ್ನಿಯ ಮೊದಲ ಪಂದ್ಯದಲ್ಲೇ ಭರ್ಜರಿ ಕಮ್ ಬ್ಯಾಕ್ ಮಾಡಿದ್ದಾರೆ.
ಮೊದಲ ಸುತ್ತಿನ ಪಂದ್ಯದಲ್ಲಿ ಸಾನಿಯಾ ತಮ್ಮ ಅಮೆರಿಕನ್ ಜೊತೆಗಾತಿ ಮಾಟೆಕ್ ಸ್ಯಾಂಡ್ಸ್ ಜೊತೆಗೂಡಿ ಅಲೆಕ್ಸಾ ಗೌರಾಚೆ- ಡಿಸೈರೆ ಕ್ರಾವ್ ಜಿಕ್ ಅವರನ್ನು 7-5, 6-3 ಅಂತರದಿಂದ ಸೋಲಿಸಿದರು. ಒಂದು ಗಂಟೆ 28 ನಿಮಿಷಗಳ ಕಾಲ ಈ ಹೋರಾಟ ನಡೆಯಿತು.
ಸಾನಿಯಾರ ಈ ಕಮ್ ಬ್ಯಾಕ್ ಪಂದ್ಯವನ್ನು ನೋಡಲು ವಿಶೇಷ ವೀಕ್ಷಕರೊಬ್ಬರು ಬಂದಿದ್ದರು. ಅವರು ಸಾನಿಯಾ ಪುತ್ರ ಇಝಾನ್ ಮಿರ್ಜಾ ಮಲಿಕ್. ತನ್ನ ಮೆಚ್ಚಿನ ಸ್ಪೈಡರ್ ಮ್ಯಾನ್ ಬೊಂಬೆಯನ್ನು ಹಿಡಿದುಕೊಂಡು ಗ್ಯಾಲರಿಯಲ್ಲಿ ಕೂತಿದ್ದ ಇಝಾನ್ ಅಮ್ಮನಿಗೆ ಚಿಯರ್ ಮಾಡಿದ್ದಾನೆ. ಪಂದ್ಯದ ಬಳಿಕ ಮಗನೊಂದಿಗೆ ಫೋಟೋಗೆ ಪೋಸ್ ನೀಡಿರುವ ಸಾನಿಯಾ ತನಗೆ ಬೆಂಬಲಿಸಿದ್ದಕ್ಕೆ ಥ್ಯಾಂಕ್ಸ್ ಹೇಳಿದ್ದಾರೆ.