Publish Date: Sat, 17 Jul 2021 (11:14 IST)
Updated Date: Sat, 17 Jul 2021 (10:15 IST)
ಕೊಲೊಂಬೋ: ಭಾರತ ಮತ್ತು ಶ್ರೀಲಂಕಾ ನಡುವಿನ ಏಕದಿನ ಸರಣಿ ನಾಳೆಯಿಂದ ಆರಂಭವಾಗಲಿದ್ದು, ರಾಹುಲ್ ದ್ರಾವಿಡ್ ರಾಷ್ಟ್ರೀಯ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವ ಮೊದಲ ಸರಣಿಯಿದು.
ಹೀಗಾಗಿ ರಾಹುಲ್ ದ್ರಾವಿಡ್ ಪಾಲಿಗೂ ಇದು ಮಹತ್ವದ ಸರಣಿಯಾಗಲಿದೆ. ಇದುವರೆಗೆ ಆಟಗಾರನಾಗಿ ಟೀಂ ಇಂಡಿಯಾದ ದಿಗ್ಗಜ ಆಟಗಾರನಾಗಿ ಮೆರೆದ ದ್ರಾವಿಡ್ ಎ ತಂಡದ ಕೋಚ್ ಆಗಿ ರಾಷ್ಟ್ರೀಯ ತಂಡಕ್ಕೆ ಎಷ್ಟೋ ಪ್ರತಿಭೆಗಳನ್ನು ಕೊಡುಗೆಯಾಗಿ ನೀಡಿದ್ದರು.
ಇದೀಗ ಅದೇ ಯುವ ತಂಡಕ್ಕೆ ರಾಷ್ಟ್ರೀಯ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುವ ಪರೀಕ್ಷೆ ದ್ರಾವಿಡ್ ರದ್ದಾಗಿದೆ. ಒಂದು ವೇಳೆ ಅವರು ಈ ಪರೀಕ್ಷೆಯಲ್ಲಿ ಪಾಸಾದರೆ ಅವರೇ ಮುಂದಿನ ಕೋಚ್ ಆಗಬೇಕೆಂಬ ಒತ್ತಾಯವೂ ಹೆಚ್ಚಾಗಿದೆ.