Select Your Language

Notifications

webdunia
webdunia
webdunia
webdunia

ಮತ್ತೊಮ್ಮೆ ಟಿಕ್‍ಟಾಕ್ ಬ್ಯಾನ್!

ಅಶ್ಲೀಲ ವಿಡಿಯೋ; ಮತ್ತೊಮ್ಮೆ ಟಿಕ್ಟಾಕ್ ಬ್ಯಾನ್ ಮಾಡಿದ ಪಾಕಿಸ್ತಾನದ ಸಿಂಧ್ ಹೈ ಕೋರ್ಟ್

ಮತ್ತೊಮ್ಮೆ ಟಿಕ್‍ಟಾಕ್ ಬ್ಯಾನ್!
ನವದೆಹಲಿ , ಶನಿವಾರ, 3 ಜುಲೈ 2021 (09:50 IST)
Tiktak : ಆ್ಯಪ್ ಮೇಲಿನ ನಿಷೇಧವನ್ನು ತೆಗೆದುಹಾಕುವ ಮನವಿಯನ್ನು ಹೈಕೋರ್ಟ್ ಅಂಗೀಕರಿಸಿದ್ದು, ಜುಲೈ 8ರಂದು ಮುಂದಿನ ವಿಚಾರಣೆ ನಡೆಯಲಿದೆ. ಅಲ್ಲಿಯವರೆಗೆ ಪಾಕಿಸ್ತಾನದಲ್ಲಿ ಟಿಕ್ಟಾಕ್ ಬ್ಯಾನ್ ಮಾಡುವಂತೆ ಸೂಚನೆ ನೀಡಲಾಗಿದೆ.

 
ಚೀನಾದ ಜನಮೆಚ್ಚುಗೆ ಪಡೆದಿದ್ದ ಟಿಕ್ಟ್ಯಾಕ್ ಆ್ಯಪ್ ಮೇಲೆ ಎರಡನೇ ಬಾರಿ ನಿಷೇಧ ಹೇರಿ ಪಾಕಿಸ್ತಾನದ ಉನ್ನತ ನ್ಯಾಯಾಲಯ ಆದೇಶ ನೀಡಿದೆ. ಟಿಕ್ಟಾಕ್ ಆ್ಯಪ್ ದೇಶದಲ್ಲಿ ಅನೈತಿಕತೆ ಮತ್ತು ಅಶ್ಲೀಲತೆ ಹರಡುತ್ತಿದೆ ಹರಡಲಾಗಿತ್ತಿದೆ ಎಂದು ಈ ಹಿಂದೆ ನಾಗರೀಕರು ನೀಡಿದ್ದ ದೂರಿನ ಹಿನ್ನಲೆ ಈ ಚೀನಾದ ಟಿಕ್ಟಾಕ್ ಆ್ಯಪ್ ಅನ್ನು ನಿಷೇಧಿಸಲಾಗಿಜe. ಈ ಆದೇಶವನ್ನು ಪುನಃ ಪರಿಶೋಲಿಸಿ ಈ ಆ್ಯಪ್ ಅನ್ನು ಸೇವೆಯನ್ನು ಪುನಃ ಸ್ಥಾಪಿಸಲು ಅವಕಾಶ ನೀಡುವಂತೆ ಸಲ್ಲಿಕೆಯಾದ ಅರ್ಜಿ ವಿಚಾರಣೆ ನಡೆಸಿದ ಸಿಂಧ್ ಹೈ ಕೋರ್ಟ್ ವಿಚಾರಣೆ ಮುಗಿಯುವವರೆಗೂ ದೇಶದಲ್ಲಿ ಟಿಕ್ಟಾಕ್ ಆ್ಯಪ್ ಅನ್ನು ನಿಷೇಧಿಸುವಂತೆ ಪಾಕಿಸ್ತಾನ ಟೆಲಿಕಮ್ಯೂನಿಕೆಷನ್ ಅಥಾರಿಟಿಗೆ ತಿಳಿಸಿತು

ಈ ಕುರಿತು ನ್ಯಾಯಾಲಯಕ್ಕೆ ತಿಳಿಸಿರುವ ಪಾಕಿಸ್ತಾನ ಟೆಲಿಕಮ್ಯೂನಿಕೆಷನ್ ಅಥಾರಿಟಿ, ಈ ಅಪ್ಲಿಕೇಶನ್ನ್ನು ಈಗಾಗಲೇ ನಿರ್ಬಂಧಿಸಲಾಗಿದೆ. ಈ ಕುರಿತು ನ್ಯಾಯಾಲಯ ನೀಡಿರುವ ಆದೇಶವನ್ನು ಪರಿಶೀಲಿಸಲು ಮತ್ತು ಸೇವೆಗಳನ್ನು ಪುನಃಸ್ಥಾಪಿಸಲು ಅವಕಾಶ ನೀಡುವಂತೆ ನ್ಯಾಯಾಲಯವನ್ನು ಕೋರಿದೆ. ಟಿಕ್ ಟಾಕ್ ಅಶ್ಲೀಲ ವಿಡಿಯೋಗಳನ್ನು ನಿಯಂತ್ರಣ ಮಾಡಿ. ತೃಪ್ತಿದಾಯಕ ಕಾರ್ಯವಿಧಾನವನ್ನು ಅಳವಡಿಸಿಕೊಂಡರೆ ತಮ್ಮ ನಿರ್ಧಾರವನ್ನು ಪರಿಶೀಲಿಸುವುದಾಗಿ  ಪಾಕ್ ಟೆಲಿಕಾಂ ಅಥಾರಿಟಿ ತಿಳಿಸಿದೆ.

ಆ್ಯಪ್ ಮೇಲಿನ ನಿಷೇಧವನ್ನು ತೆಗೆದುಹಾಕುವ ಮನವಿಯನ್ನು ಹೈಕೋರ್ಟ್ ಅಂಗೀಕರಿಸಿದ್ದು, ಜುಲೈ 8ರಂದು ಮುಂದಿನ ವಿಚಾರಣೆ ನಡೆಯಲಿದ್ದು, ಅಲ್ಲಿಯವರೆಗೆ ಪಾಕಿಸ್ತಾನದಲ್ಲಿ ಟಿಕ್ಟಾಕ್ ಬ್ಯಾನ್ ಮಾಡುವಂತೆ ಸೂಚನೆ ನೀಡಲಾಗಿದೆ.

ಪಾಕಿಸ್ತಾನದಲ್ಲಿ ಎರಡು ಬಾರಿ ಈ ಟಿಕ್ಟ್ಯಾಕ್ ಆ್ಯಪ್ ಮೇಲೆ ನಿಷೇಧವನ್ನು ಹೇರಲಾಗಿತ್ತು. ಈ ವರ್ಷದ ಮಾರ್ಚ್ನಲ್ಲಿ ಪೇಶಾವರ ಹೈ ಕೋರ್ಟ್ ಈ ಆ್ಯಪ್ನ್ನು ನಿಷೇಧಿಸುವ ಕುರಿತು ಆದೇಶಿಸಿತ್ತು. ಹಿಂದಿನ ವರ್ಷದ ಅಕ್ಟೋಬರ್ನಲ್ಲಿಯೂ ಸುಮಾರು 10 ದಿನ ಟಿಕ್ ಟಾಕ್ ಬ್ಯಾನ್ ಆಗಿತ್ತು. ಈ ಆ್ಯಪ್ನಲ್ಲಿ ಸಲಿಂಗ ಕಾಮದ ವಿಷಯ ಪ್ರಸಾರ ವಾಗುತ್ತಿರುವ ಹಿನ್ನಲೆ ಅನೇಕ ವಿರೋಧಗಳು ಕೂಡ ವ್ಯಕ್ತವಾಗಿದ್ದವು. ಅಲ್ಲದೇ ಪಾಶ್ಚತ್ಯ ಉಡುಪುಗಳು ಪೋಸ್ಟ್ಗಳಿಗೂ ಇದರಲ್ಲಿ ವಿರೋಧ ವ್ಯಕ್ತವಾಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಅನ್ ಲಾಕ್ 3.O-ವಿನಾಯಿತಿ