Select Your Language

Notifications

webdunia
webdunia
webdunia
webdunia

ಟೋಕಿಯೊ ಪ್ಯಾರಾಲಿಂಪಿಕ್ಸ್ ಗೆ ತೆರೆ: ಭಾರತ 19 ಪದಕಗಳ ದಾಖಲೆ!

ಟೋಕಿಯೊ ಪ್ಯಾರಾಲಿಂಪಿಕ್ಸ್ ಗೆ ತೆರೆ: ಭಾರತ 19 ಪದಕಗಳ ದಾಖಲೆ!
bengaluru , ಭಾನುವಾರ, 5 ಸೆಪ್ಟಂಬರ್ 2021 (13:41 IST)
ಟೋಕಿಯೊ ಪ್ಯಾರಾಲಿಂಪಿಕ್ಸ್ ಗೆ ಭಾನುವಾರ ತೆರೆ ಬಿದ್ದಿದ್ದು, ಭಾರತದ ಅಥ್ಲೀಟ್ ಗಳು 19 ಪದಕಗಳ ದಾಖಲೆಯ ಸಾಧನೆಯೊಂದಿಗೆ ತವರಿ
ಗೆ ಮರಳುತ್ತಿದ್ದಾರೆ.
ಭಾರತದ ಅಥ್ಲೀಟ್ ಗಳು 5 ಚಿನ್ನ, 8 ಬೆಳ್ಳಿ ಹಾಗೂ 6 ಕಂಚು ಸೇರಿದಂತೆ ಒಟ್ಟಾರೆ 19 ಪದಕಗಳನ್ನು ಗೆದ್ದಿದ್ದು, ಈ ಹಿಂದಿನ ರಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಗೆದ್ದಿದ್ದ ಒಟ್ಟಾರೆ ಪದಕಗಳಿಂದ ಮೂರು ಪಟ್ಟು ಅಧಿಕ ಪದಕಗಳನ್ನು ಗೆದ್ದು ಸಾರ್ವಕಾಲಿಕ ದಾಖಲೆ ಬರೆದಿದೆ.
1969ರಿಂದ 2016ರವರೆಗಿನ ಪ್ಯಾರಾಲಿಂಪಿಕ್ಸ್ ಗಳಲ್ಲಿ ಭಾರತ ಒಟ್ಟು ಗೆದ್ದಿದ್ದ ಪದಕಗಳ ಸಂಖ್ಯೆಯೇ 12. ಆದರೆ ಈ ಬಾರಿ ಅದಕ್ಕಿಂತ ಹೆಚ್ಚಿನ ಪದಕಗಳನ್ನು ಒಂದೇ ಒಲಿಂಪಿಕ್ಸ್ ನಲ್ಲಿ ಗೆದ್ದು ದಾಖಲೆ ಬರೆದಿದೆ.
ಭಾರತ ಇದೀಗ ಒಟ್ಟಾರೆ 19 ಪದಕಗಳೊಂದಿಗೆ ಪದಕಗಳ ಪಟ್ಟಿಯಲ್ಲಿ ಅಗ್ರ 25ರೊಳಗೆ ಸ್ಥಾನ ಪಡೆದು ದಾಖಲೆ ಬರೆದಿದೆ. ಈ ಬಾರಿ ಪ್ಯಾರಾಲಿಂಪಿಕ್ಸ್ ಗೆ 54 ಅಥ್ಲೀಟ್ ಗಳ ಭಾರತ ತಂಡ ತೆರಳಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಪ್ಯಾರಾಲಿಂಪಿಕ್ಸ್: ಬ್ಯಾಡ್ಮಿಂಟನ್ ನಲ್ಲಿ ಚಿನ್ನ ಗೆದ್ದ ಕೃಷ್ಣ ನಗಾರ್