Select Your Language

Notifications

webdunia
webdunia
webdunia
webdunia

ಒಂದೇ ಬಾರಿ ಡಬಲ್ ದಾಖಲೆ ಬರೆದ ರೋಹಿತ್ ಶರ್ಮ!

Rohit Sharma
bengaluru , ಶನಿವಾರ, 4 ಸೆಪ್ಟಂಬರ್ 2021 (18:45 IST)
ಭಾರತದ ಹಿಟ್ ಮ್ಯಾನ್ ರೋಹಿತ್ ಶರ್ಮ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ 2ನೇ ಇನಿಂಗ್ಸ್ ನಲ್ಲಿ 2 ದಾಖಲೆಗಳನ್ನು ಬರೆದಿದ್ದಾರೆ.
ಓವಲ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ರೋಹಿತ್ ಶರ್ಮ ಅರ್ಧಶತಕ ಬಾರಿಸುವ ಮೂಲಕ ಎರಡು ದಾಖಲೆಗಳನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡರು. ಟೆಸ್ಟ್ ಕ್ರಿಕೆಟ್ ನಲ್ಲಿ ಆರಂಭಿಕನಾಗಿ 11,000 ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 15,000 ರನ್ ಪೂರೈಸಿದ ದಾಖಲೆಗಳನ್ನು ಬರೆದರು.
2007ರಲ್ಲಿ ಐರ್ಲೆಂಡ್ ವಿರುದ್ಧದ ಪಂದ್ಯದ ಮೂಲಕ ಕ್ರಿಕೆಟ್ ಗೆ ಪಾರ್ದರ್ಪಣೆ ಮಾಡಿದ ರೋಹಿತ್, ನಂತರ ಕೆಲವೇ ಸಮಯದಲ್ಲಿ ಟಿ-20ಗೂ ಕಾಲಿಟ್ಟರು. ಪಿಂಚ್ ಹಿಟ್ಟರ್ ಎಂದೇ ಹೆಸರಾಗಿರುವ ರೋಹಿತ್, 2013ರಲ್ಲಿ ಆರಂಭಿಕನಾಗಿ ಬಡ್ತಿ ಪಡೆದರು.
42 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿರುವ ರೋಹಿತ್ ಶ
ರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಆರಂಭಿಕನಾಗಿ 11 ಸಾವಿರ ರನ್ ಗಳಿಸಿದ ಅಪರೂಪದ ಸಾಧನೆ ಮಾಡಿದರು.

ಈ ಸಾಧನೆ ಮಾಡಿದ ಭಾರತದ ನಾಲ್ಕನೇ ಕ್ರಿಕೆಟಿಗ ಎಂಬ ದಾಖಲೆ ಅವರದ್ದಾಯಿತು. ಆದರೆ ಅತೀ ವೇಗವಾಗಿ ಈ ದಾಖಲೆ ಮಾಡಿದವರು ರೋಹಿತ್. ಮೊದಲ ಸ್ಥಾನದಲ್ಲಿದ್ದ ಸಚಿನ್ ತೆಂಡುಲ್ಕರ್ 246 ಪಂದ್ಯಗಳಿಂದ ಈ ದಾಖಲೆ ಮಾಡಿದ್ದರು. ರೋಹಿತ್ 241 ಪಂದ್ಯಗಳಿಂದ ಈ ದಾಖಲೆ ಮಾಡಿದ್ದಾರೆ. 277 ಏಕದಿನ ಪಂದ್ಯಗಳಲ್ಲಿ 9205 ರನ್ ಗಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಂಪಾಯರ್ ತೀರ್ಪಿನ ವಿರುದ್ಧ ಕೆಎಲ್ ರಾಹುಲ್ ಅಸಮಾಧಾನ