Australian Open: ದೀರ್ಘ ಕಾಯುವಿಕೆಯ ಬಳಿಕ ಕೊನೆಗೂ ಕಿರೀಟ ಗೆದ್ದ ಲಕ್ಷ್ಯ ಸೇನ್

Sampriya
ಭಾನುವಾರ, 23 ನವೆಂಬರ್ 2025 (13:05 IST)
Photo Credit X
ಸಿಡ್ನಿ: ಭಾರತದ ಅಗ್ರಮಾನ್ಯ ಸಿಂಗಲ್ಸ್‌ ಆಟಗಾರ ಲಕ್ಷ್ಯ ಸೇನ್ ಅವರು ಕೊನೆಗೂ ಪ್ರಶಸ್ತಿಯ ಬರವನ್ನು ನೀಗಿಸಿಕೊಂಡರು. ಆಸ್ಟ್ರೇಲಿಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ದಾರೆ. 

ಸಿಡ್ನಿಯಲ್ಲಿ ಭಾನುವಾರ ನಡೆದ ಸೂಪರ್ 500 ಟೂರ್ನಮೆಂಟ್‌ನ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಲಕ್ಷ್ಯ ಸೇನ್ ವಿಶ್ವದ 14ನೇ ಶ್ರೇಯಾಂಕಿತ ಆಟಗಾರ ಜಪಾನ್‌ನ ಯುಶಿ ತನಕಾ ಅವರನ್ನು 21–15, 21–11 ಅಂತರದಿಂದ ಸೋಲಿಸಿದರು.

ಮೊದಲ ಪಾಯಿಂಟ್‌ನಿಂದಲೂ ಚುರುಕಾಗಿ ಕಾಣುತ್ತಿದ್ದ ಲಕ್ಷ್ಯ ತನಗಿಂತ ಕೆಳ ಶ್ರೇಯಾಂಕದ ಎದುರಾಳಿಯನ್ನು ಸೋಲಿಸಲು ಕೇವಲ 38 ನಿಮಿಷಗಳನ್ನು ತೆಗೆದುಕೊಂಡರು. ಸೆಮಿಫೈನಲ್‌ನಲ್ಲಿ ಎರಡನೇ ಶ್ರೇಯಾಂಕಿತ ಚೌ ಟಿಯೆನ್ ಚೆನ್ ವಿರುದ್ಧದ 86 ನಿಮಿಷಗಳ ಪಂದ್ಯದಲ್ಲಿ ಗೆದ್ದು ಬೀಗಿದ್ದರು.

ಲಕ್ಷ್ಯ ತನ್ನ ಎರಡೂ ಬೆರಳುಗಳನ್ನು ಕಿವಿಯಲ್ಲಿ ಇಟ್ಟು ವಿಜಯೋತ್ಸವವನ್ನು ಆಚರಿಸಿದರು. ಹೊರಗಿನ ಟೀಕೆ-ಮಾತುಗಳನ್ನು ತನಗೆ ಕೇಳಿಸುತ್ತಿಲ್ಲ ಎಂದು ಸೂಚಿಸುವ ಸನ್ನೆಯ ಮೂಲಕ ಸಂಭ್ರಮಿಸಿದರು.<>

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Australian Open: ದೀರ್ಘ ಕಾಯುವಿಕೆಯ ಬಳಿಕ ಕೊನೆಗೂ ಕಿರೀಟ ಗೆದ್ದ ಲಕ್ಷ್ಯ ಸೇನ್

ಪಲಾಶ್‌ ಜೊತೆ ಸ್ಮೃತಿ ಮಂದಾನ ಹೊಸ ಇನಿಂಗ್ಸ್‌: ಕುಣಿದು ಕುಪ್ಪಳಿಸಿದ ಕ್ಯೂಟ್‌ ಜೊಡಿ

IND vs SA: ಸ್ಪಿನ್ನರ್ ಗಳಿಂದ ಬಚಾವ್ ಆದ ಟೀಂ ಇಂಡಿಯಾ

IND vs SA: ಕೊಹ್ಲಿ, ರೋಹಿತ್ ಇಲ್ಲದ ಟೀಂ ಇಂಡಿಯಾ ಟೆಸ್ಟ್ ಮ್ಯಾಚ್ ನೋಡೋರೇ ಇಲ್ಲ

IND vs SA: ಕ್ಯಾಪ್ಟನ್ ಬದಲಾದರೂ ಟೀಂ ಇಂಡಿಯಾದ ಟಾಸ್ ಅದೃಷ್ಟ ಮಾತ್ರ ಬದಲಾಗಿಲ್ಲ

ಮುಂದಿನ ಸುದ್ದಿ
Show comments