ಪಲಾಶ್‌ ಜೊತೆ ಸ್ಮೃತಿ ಮಂದಾನ ಹೊಸ ಇನಿಂಗ್ಸ್‌: ಕುಣಿದು ಕುಪ್ಪಳಿಸಿದ ಕ್ಯೂಟ್‌ ಜೊಡಿ

Sampriya
ಭಾನುವಾರ, 23 ನವೆಂಬರ್ 2025 (11:51 IST)
Photo Credit X
ಮುಂಬೈ: ಮಹಿಳಾ ಏಕದಿನ ವಿಶ್ವಕಪ್‌ ಗೆದ್ದ ಭಾರತ ತಂಡದ ಉಪನಾಯಕಿ ಸ್ಮೃತಿ ಮಂದಾನ ಹೊಸ ಇನಿಂಗ್ಸ್‌ ಆರಂಭಿಸಿದ್ದಾರೆ. ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಜೊತೆಗೆ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕ್ರಿಕೆಟ್ ತಾರೆ ಸ್ಮೃತಿ ಮಂದಾನ ಮದುವೆ ಸಂಭ್ರಮದಲ್ಲಿ ತೇಲುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಅವರ ವಿವಾಹ ಪೂರ್ವ ಕಾರ್ಯಕ್ರಮಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ. ಈಗ ಸ್ಮೃತಿ ಮತ್ತು ಪಲಾಶ್ ಮಸ್ತ್ ಡ್ಯಾನ್ಸ್ ಮಾಡಿರುವ ವಿಡಿಯೋವೊಂದು ವೈರಲ್ ಆಗಿದೆ.

ಅರಿಶಿನ ಶಾಸ್ತ್ರದ ಆಚರಣೆಯ ವೀಡಿಯೊಗಳಿಂದ ಹಿಡಿದು ವರ ಮತ್ತು ವಧುವಿನ ನೇತೃತ್ವದ ತಂಡಗಳ ನಡುವಿನ ಸೌಹಾರ್ದ ಕ್ರಿಕೆಟ್ ಪಂದ್ಯದವರೆಗಿನ ಕೆಲವು ಮೋಡಿಮಾಡುವ ವಿಡಿಯೋಗಳು ಸಾಕಷ್ಟು ಗಮನ ಸೆಳೆದಿವೆ.  

ಪಲಾಶ್ ಅವರ ಕುತ್ತಿಗೆಗೆ ಸ್ಮೃತಿ ಹಾರ ಹಾಕುವುದನ್ನು ವೀಡಿಯೊದಲ್ಲಿ ಕಾಣಬಹುದು. ನಂತರ ಪಲಾಶ್ ಭಾರತೀಯ ಮಹಿಳಾ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಮುಂದೆ ನಮಸ್ಕರಿಸುತ್ತಾರೆ.

ಈಚೆಗೆ ಹಳದಿ ಶಾಸ್ತ್ರದಲ್ಲಿ ಶಫಾಲಿ ವರ್ಮಾ, ರಿಚಾ ಘೋಷ್, ಶ್ರೇಯಾಂಕಾ ಪಾಟೀಲ್, ರೇಣುಕಾ ಸಿಂಗ್, ಶಿವಾಲಿ ಶಿಂಧೆ, ರಾಧಾ ಯಾದವ್ ಮತ್ತು ಜೆಮಿಮಾ ರೊಡ್ರಿಗಸ್ ಸೇರಿದಂತೆ ಹಲವು ಆಟಗಾರ್ತಿಯರು ಭಾಗಿಯಾಗಿ ಡಾನ್ಸ್‌ ಮಾಡಿದ್ದರು.<>

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs SA: ಸ್ಪಿನ್ನರ್ ಗಳಿಂದ ಬಚಾವ್ ಆದ ಟೀಂ ಇಂಡಿಯಾ

IND vs SA: ಕೊಹ್ಲಿ, ರೋಹಿತ್ ಇಲ್ಲದ ಟೀಂ ಇಂಡಿಯಾ ಟೆಸ್ಟ್ ಮ್ಯಾಚ್ ನೋಡೋರೇ ಇಲ್ಲ

IND vs SA: ಕ್ಯಾಪ್ಟನ್ ಬದಲಾದರೂ ಟೀಂ ಇಂಡಿಯಾದ ಟಾಸ್ ಅದೃಷ್ಟ ಮಾತ್ರ ಬದಲಾಗಿಲ್ಲ

IND vs SA: ಕ್ಯಾಪ್ಟನ್ ಆಗಿ ಹೊಸ ದಾಖಲೆ ಮಾಡಲಿದ್ದಾರೆ ರಿಷಭ್ ಪಂತ್

ಹಳದಿ ಸಂಭ್ರಮದಲ್ಲಿರುವ ಸ್ಮೃತಿ ಮಂಧಾನಳನ್ನು ಕುಣಿಸಿದ ಟೀಂ ಇಂಡಿಯಾ ಆಟಗಾರ್ತಿಯರು, video

ಮುಂದಿನ ಸುದ್ದಿ
Show comments