Select Your Language

Notifications

webdunia
webdunia
webdunia
webdunia

ಪಿವಿ ಸಿಂಧುಗೆ ದುಬಾರಿ ಗಿಫ್ಟ್ ಕೊಟ್ಟ ಅಕ್ಕಿನೇನಿ ನಾಗಾರ್ಜುನ

ಪಿವಿ ಸಿಂಧುಗೆ ದುಬಾರಿ ಗಿಫ್ಟ್ ಕೊಟ್ಟ ಅಕ್ಕಿನೇನಿ ನಾಗಾರ್ಜುನ
ಹೈದರಾಬಾದ್ , ಭಾನುವಾರ, 15 ಸೆಪ್ಟಂಬರ್ 2019 (08:56 IST)
ಹೈದರಾಬಾದ್: ಇತ್ತೀಚೆಗಷ್ಟೇ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಗೆದ್ದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧುಗೆ ನಟ ಅಕ್ಕಿನೇನಿ ನಾಗಾರ್ಜುನ ದುಬಾರಿ ಗಿಫ್ಟ್ ಕೊಟ್ಟು ಅಭಿನಂದಿಸಿದ್ದಾರೆ.


ತೆಲಂಗಾಣ ಬ್ಯಾಡ್ಮಿಂಟನ್ ಅಸೋಸಿಯೇಷನ್ ಉಪಾಧ್ಯಕ್ಷ ಚಾಮುಂಡೇಶ್ವರನಾಥ್ ಕೆಲವು ವರ್ಷಗಳಿಂದಲೂ ಕ್ರೀಡೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದವರಿಗೆ ತಮ್ಮ ಗೆಳೆಯರ ಸಹಯೋಗದೊಂದಿಗೆ ಕಾರು ಕೊಟ್ಟು ಸನ್ಮಾನಿಸುತ್ತಿದ್ದಾರೆ. ಈಗ ಸಿಂಧು ಸಾಧನೆ ಪರಿಗಣಿಸಿ ಚಾಮುಂಡೇಶ್ವರನಾಥ್  ನಟ ನಾಗಾರ್ಜುನ ಮುಖಾಂತರ ದುಬಾರಿ ಬಿಎಂಡಬ್ಲ್ಯು ಕಾರು ಗಿಫ್ಟ್ ಕೊಡಿಸಿದ್ದಾರೆ.

ಈ ಸಂದರ್ಭದಲ್ಲಿ ಸಿಂಧು ಕೋಚ್ ಗೋಪಿಚಂದ್ ಕೂಡಾ ಉಪಸ್ಥಿತರಿದ್ದರು. ಸಿಂಧು ಸಾಧನೆಯನ್ನು ಹೊಗಳಿದ ಅಕ್ಕಿನೇನಿ ಈ ರೀತಿ ಸಾಧಕರನ್ನು ಗುರುತಿಸುತ್ತಿರುವ ಚಾಮುಂಡೇಶ್ವರನಾಥ್ ಮತ್ತು ಸಿಂಧುಗೆ ತರಬೇತು ಕೊಡಿಸಿದ ಕೋಚ್ ಗೋಪಿಚಂದ್ ರನ್ನೂ ಅಭಿನಂದಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾನು ಒಂದು ಫೋಟೋ ಹಾಕಿದ್ದಕ್ಕೇ ಧೋನಿ ನಿವೃತ್ತಿ ಬಗ್ಗೆ ರೂಮರ್ ಹಬ್ಬಿಸಿದ್ರಲ್ಲಾ ಎಂದ ವಿರಾಟ್ ಕೊಹ್ಲಿ