Select Your Language

Notifications

webdunia
webdunia
webdunia
webdunia

ಇತಿಹಾಸಪ್ರಸಿದ್ಧ ಧರ್ಮಸ್ಥಳ ದೇವಾಲಯ

ಇತಿಹಾಸಪ್ರಸಿದ್ಧ ಧರ್ಮಸ್ಥಳ ದೇವಾಲಯ
ಬೆಂಗಳೂರು , ಬುಧವಾರ, 22 ಜೂನ್ 2016 (16:23 IST)
ಬೆಳ್ತಂಗಡಿ ತಾಲೂಕಿನ ನೇತ್ರಾವತಿ ನದಿ ದಂಡೆಯಲ್ಲಿ ಧರ್ಮಸ್ಥಳ ಪಟ್ಟಣವಿದೆ. ಈ ಪಟ್ಟಣದಲ್ಲಿರುವ ಧರ್ಮಸ್ಥಳ ದೇವಾಲಯ ಶಿವ, ಮಂಜುನಾಥ, ಅಮ್ಮನವರು, ಚಂದ್ರನಾಥ ಮತ್ತು ಧರ್ಮ ದೈವಗಳಿಗೆ ಆವಾಸಸ್ಥಾನವಾಗಿದೆ. ಈ ದೈವಗಳನ್ನು ಕಲಾರಾಹು, ಕಲಾರಕಾಯಿ, ಕುಮಾರಸ್ವಾಮಿ ಮತ್ತು ಕನ್ಯಾಕುಮಾರಿ ಎಂದು ಕರೆಯಲಾಗುತ್ತದೆ.
 
ನವೆಂಬರ್-ಡಿಸೆಂಬರ್‌ ವೇಳೆಯಲ್ಲಿ ಧರ್ಮಸ್ಥಳದಲ್ಲಿ ದೀಪಗಳ ಉತ್ಸವ ಲಕ್ಷದೀಪ ನಡೆಯುತ್ತದೆ. ಪ್ರತಿದಿನ 10000ಕ್ಕೂ ಹೆಚ್ಚು ಯಾತ್ರಿಗಳು ಇಲ್ಲಿಗೆ ದರ್ಶನ ನೀಡಿ ಮಂಜುನಾಥನ ಆಶೀರ್ವಾದ ಪಡೆಯುತ್ತಾರೆ. ಯಾಂತ್ರಿಕ ಅಡುಗೆಮನೆ ಎಲ್ಲಾ ಯಾತ್ರಿಗಳಿಗೂ ಉಚಿತ ಆಹಾರ ಒದಗಿಸುತ್ತದೆ ಮತ್ತು ಆಧುನಿಕ ಸೌಲಭ್ಯಗಳೊಂದಿಗೆ ಅತಿಥಿ ಗೃಹಗಳೂ ಇವೆ. 
 
ಸ್ಥಳೀಯ ದಂತಕಥೆಯೊಂದರ ಪ್ರಕಾರ ಧರ್ಮಸ್ಥಳದ ಶಿವಲಿಂಗವನ್ನು ಅಣ್ಣಪ್ಪ ಎಂಬ ದಿವ್ಯಶಕ್ತಿಯನ್ನು ಹೊಂದಿದ್ದ ಸ್ಥಳೀಯ ವ್ಯಕ್ತಿ ತಂದಿದ್ದ. ಅಣ್ಣಪ್ಪ ಹೆಗ್ಗಡೆ ಕುಟುಂಬದಲ್ಲಿ ಕೆಲಸ ಮಾಡುತ್ತಿದ್ದು,  ಹೆಗ್ಗಡೆಯವರು ಭಗವಾನ್ ಶಿವನನ್ನು ಪೂಜಿಸಲು ಬಯಸಿದ್ದರು. ಅಣ್ಣಪ್ಪ ಅವರಿಗೆ ಲಿಂಗವನ್ನು ತಂದುಕೊಡುವ ಭರವಸೆ ನೀಡಿ ಅಲ್ಲಿಂದ ಅದೃಶ್ಯನಾದ.

ಮರುದಿನ ಬೆಳಿಗ್ಗೆ ಹೆಗ್ಗಡೆಯವರ ಮನೆಗೆ ಕೆಲವೇ ಮೀಟರ್ ದೂರದಲ್ಲಿ ಲಿಂಗ ಪ್ರತಿಷ್ಠಾಪನೆಯಾಗಿತ್ತು.  ಈ ಲಿಂಗವು ಮಂಗಳೂರಿನ ಕದ್ರಿ ದೇವಾಲಯಕ್ಕೆ ಸೇರಿದ್ದೆಂದು ನಂತರ ಗೊತ್ತಾಯಿತು. ಅಷ್ಟರಲ್ಲಿ ಅಣ್ಣಪ್ಪ ಮಾಯವಾಗಿದ್ದು, ಮತ್ತೆ ಕಾಣಿಸಲಿಲ್ಲ. ಧರ್ಮಸ್ಥಳದ ಜನರು ಅಣ್ಣಪ್ಪನನ್ನು ಅಣ್ಣಪ್ಪ ಪಂಜುರ್ಲಿ ಎಂದು ಪೂಜಿಸುತ್ತಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

 

Share this Story:

Follow Webdunia kannada

ಮುಂದಿನ ಸುದ್ದಿ

ಮುರುಡೇಶ್ವರ ದೇವಾಲಯ ಜನ್ಮತಳೆದ ಕಥೆ