Select Your Language

Notifications

webdunia
webdunia
webdunia
webdunia

ಹಿಂದೂ ಸಂಸ್ಕ್ರತಿ ಉಳಿವಿಗೆ ಪುರಾತನ ದೇವಾಲಯಗಳ ರಕ್ಷಣೆ ಅತ್ಯಗತ್ಯ- ಯುವಾ ಬ್ರಿಗೇಡ್

ಹಿಂದೂ ಸಂಸ್ಕ್ರತಿ ಉಳಿವಿಗೆ ಪುರಾತನ ದೇವಾಲಯಗಳ ರಕ್ಷಣೆ ಅತ್ಯಗತ್ಯ- ಯುವಾ ಬ್ರಿಗೇಡ್
ಸಿರಸಿ , ಸೋಮವಾರ, 20 ಜೂನ್ 2016 (12:57 IST)
ಸಿರಸಿ ತಾಲೂಕಿನ ಸಮೀಪವಿರುವ ಬೆಡಸಗಾಂವ್ ಗ್ರಾಮದ ಪುರಾತನ ದೇವಾಲಯವಾದ ಶ್ರೀರಾಮಲಿಂಗೇಶ್ವರ ದೇವಸ್ಥಾನದಲ್ಲಿ ಶ್ರಮಾದಾನ ಹಾಗೂ ಗಿಡ ನೆಡುವ ಮೂಲಕ ಯುವಾ ಬ್ರಿಗೇಡ್ ಸಿರಸಿ ಘಟಕದ ಹೃದಯ ಮಂದಿರ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.
ಮೊದಲಿಗೆ ರಾಮಲಿಂಗೇಶ್ವರ ದೇವಸ್ಥಾನದ ಪರಿಸರದಲ್ಲಿ ಅಲ್ಲಲ್ಲಿ ಕಂಡುಬಂದ ಹತ್ತಾರು ಬೃಹತ್ ನಾಗರ ಕಲ್ಲುಗಳನ್ನು ಹಾಗೂ ಭಿನ್ನವಾದ ದೇವರ ವಿಗ್ರಹಗಳನ್ನು ಒಂದು ಸಮರ್ಪಕ ಸ್ಥಳದಲ್ಲಿ ಇರಿಸಲಾಯಿತು. ನಂತರದಲ್ಲಿ ದೇವಳದ ಸುತ್ತ ಇರುವ ಮಣ್ಣಿನ ಜಾಗದಲ್ಲಿ ಬೆಳೆದುಕೊಂಡಿದ್ದ ಅನವಶ್ಯಕ ಕಳೆಗಿಡಗಳನ್ನು ತೆಗೆದು, ಮಣ್ಣಿಗೆ ಸಾವಯುವ ಗೊಬ್ಬರ ಮಿಶ್ರಣ ಮಾಡಿ ಗಾರ್ಡನ್ ಗಿಡಗಳನ್ನು ನೆಡಲಾಯಿತು.
 
ದೇವಸ್ಥಾನದ ಆವಾರದಲ್ಲಿ ಕಸದ ಬಿಟ್ಟಿ ಇಲ್ಲದುದ್ದನ್ನು ಗಮನಿಸಿದ ಯುವಾ ಬ್ರಿಗೇಡ್ ಕಾರ್ಯಕರ್ತರು, ಒಂದು ತಾತ್ಕಾಲಿಕ ಕಸದ ಬುಟ್ಟಿಯನ್ನು ನಿರ್ಮಿಸಿದರು.
webdunia
ದೇವಸ್ಥಾನದ ಸಮಿತಿಯ ಶ್ರೀ ದೇವೆಂದ್ರರವರು ಮಾತನಾಡಿ ಮುಂದಿನ ಪೀಳಿಗೆಗಳಿಗೆ ಹಿಂದೂ ಸಂಸ್ಕೃತಿಯ ಕುರಿತು ನಾವು ತೋರಿಸಬಹುದಾದ ಏಕೈಕ ಪುರಾವೆ ಅಂದ್ರೆ ಯಥೇಚ್ಛವಾದ ಕೆತ್ತನೆ - ಶಾಸನಗಳಿಂದ ಕೂಡಿದ ಪುರಾತನ ದೇವಾಲಯಗಳು, ಅವುಗಳನ್ನು ರಕ್ಷಿಸುವುದು ನಮ್ಮ ಆದ್ಯ ಕರ್ತವ್ಯವಾಗಬೇಕು ಎಂದರು.  ಈಗಾಗಲೇ ಅದೆಷ್ಟೋ ವಿಗ್ರಹಗಳು, ದೇವಸ್ಥಾನಗಳು ಭಿನ್ನವಾಗಿ ನಾಶವಾಗಿದೆ. ಇನ್ನಾದರೂ ನಾವು ಹಳೆಯ ದೇವಾಲಯಗಳ ಕುರಿತು ಕಾಳಜಿ ವಹಿಸಬೇಕು ಎಂದರು.
 
ಪತ್ರಿಕೆಯ ವರದಿ ನೋಡಿ ಸಿರಸಿಯಿಂದ ಬಂದು ಶ್ರಮಾದಾನ ಮಾಡಿ ಅಂದವಾದ ಗಾರ್ಡನ್ ನಿರ್ಮಿಸಲು ಸಹಕರಿಸಿದ್ದಕ್ಕೆ ಯುವಾ ಬ್ರಿಗೇಡಿನ ಯುವಕರನ್ನು ದೇವಸ್ಥಾನದ ಸಮಿತಿಯವರು ಅಭಿನಂದಿಸಿದರು.
 
ಅಷ್ಟೇ ಅಲ್ಲದೇ, ಇದೇ ಗ್ರಾಮದಲ್ಲಿ ಇನ್ನೂ ಮೂರು ಪುರಾತನ ದೇವಾಲಯಗಳಿದ್ದು, ಸಂಪೂರ್ಣ ಶಿಥಿಲಾವಸ್ಥೆಯಲ್ಲಿವೆ ಅದರ ಜೀರ್ಣೋದ್ಧಾರ ಹಾಗೂ ದೇವಸ್ಥಾದ ಪಕ್ಕದಲ್ಲಿರುವ ಕಲ್ಯಾಣಿಯ ಪುನರುತ್ಥಾನ ಕಾರ್ಯಗಳು ಯುವಾ ಬ್ರಿಗೇಡ್ ಕಾರ್ಯಕರ್ತರಿಂದ ಆಗಬೇಕು ಎಂದು ಕೇಳಿಕೊಂಡರು.
 
ಅವಕಾಶ ನೀಡಿದ್ದಕ್ಕಾಗಿ ದೇವಸ್ಥಾನದ ಸಮಿತಿಯವರಿಗೆ ಧನ್ಯವಾದ ಅರ್ಪಿಸಿದ ಯುವಾ ಬ್ರಿಗೇಡ್ ಕಾರ್ಯಕರ್ತರು, ಇವತ್ತಿಗೆ ಇದು ಅಂತ್ಯವಲ್ಲ, ಇದು ಕೇವಲ ಪ್ರಾರಂಭ, ಇನ್ನೂ ಹೆಚ್ಚಿನ ಕೆಲಸಗಳು ಈ ಗ್ರಾಮದಲ್ಲಿ ಆಗಬೇಕಿದೆ. ಅದಕ್ಕೆ ಯುವಾ ಬ್ರಿಗೇಡ್ ಖಂಡಿತ ಕೈಜೋಡಿಸುತ್ತದೆ, ಜೊತೆಗೆ ಊರ ಜನರ ಸಹಕಾರವೂ ಅಗತ್ಯ ಎಂದರು.
 
ನಂತರದಲ್ಲಿ ಕಲ್ಯಾಣಿ ಹಾಗೂ ಶಿಥಿಲಾವಸ್ಥೆಯಲ್ಲಿರುವ ದೇವಸ್ಥಾನಗಳನ್ನು ಯುವಾ ಬ್ರಿಗೇಡ್ ಸಿರಸಿ ಕಾರ್ಯಕರ್ತರು ಪರಿಶೀಲಿಸಿ ಮುಂದಿನ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲಾಯಿತು.
 
ಯುವಾ ಬ್ರಿಗೇಡ್ ಕಾರ್ಯಗಳ ಬಗ್ಗೆ ತಿಳಿದು ಪ್ರೇರಣೆಗೊಂಡ ಗ್ರಾಮಸ್ಥರು ತಮ್ಮಲ್ಲಿಯೂ ಯುವಾ ಬ್ರಿಗೇಡ್ ಘಟಕವನ್ನು ಸ್ಥಾಪಿಸುತ್ತೇವೆ ಎಂದರು
 
ದೇವಸ್ಥಾನ ಸಮಿತಿಯ ಹಾಲಿ ಹಾಗೂ ಮಾಜಿ ಪದಾಧಿಕಾರಿಗಳು, ಗ್ರಾಮಸ್ಥರು ಹಾಗೂ ಯುವಾ ಬ್ರಿಗೇಡ್ ಸಿರಸಿಯ ಸಂಚಾಲಕರು, ಜಿಲ್ಲಾ ಸಹಸಂಚಾಲಕರು ಹಾಗೂ ಕಾರ್ಯಕರ್ತರು ಹಾಜರಿದ್ದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಸಿಎಂ ವಿಫಲ: ಬಿ.ಕೆ.ಹರಿಪ್ರಸಾದ್