Select Your Language

Notifications

webdunia
webdunia
webdunia
webdunia

ಮುರುಡೇಶ್ವರ ದೇವಾಲಯ ಜನ್ಮತಳೆದ ಕಥೆ

ಮುರುಡೇಶ್ವರ ದೇವಾಲಯ ಜನ್ಮತಳೆದ ಕಥೆ
ಬೆಂಗಳೂರು , ಬುಧವಾರ, 22 ಜೂನ್ 2016 (15:49 IST)
ಮುರುಡೇಶ್ವರ ಉತ್ತರ ಕನ್ನಡದ ಭಟ್ಕಳ ತಾಲೂಕಿನ ಪಟ್ಟಣವಾಗಿದ್ದು, ಹಿಂದು ದೇವತೆ ಶಿವನ ಇನ್ನೊಂದು ಹೆಸರು ಕೂಡ ಆಗಿದೆ.  ಜಗತ್ತಿನ ಅತ್ಯಂತ ಎತ್ತರದ ಶಿವನ ಪ್ರತಿಮೆಗೆ ಪ್ರಖ್ಯಾತವಾಗಿರುವ ಈ ಪಟ್ಟಣವು ಅರಬ್ಬಿ ಸಮುದ್ರದ ತೀರದಲ್ಲಿದ್ದು ಮುರುಡೇಶ್ವರ ದೇವಾಲಯಕ್ಕೆ ಕೂಡ ಹೆಸರಾಗಿದೆ.  ಮಂಗಳೂರು-ಮುಂಬೈ ಕೊಂಕಣ ರೈಲ್ವೆ ಮಾರ್ಗದಲ್ಲಿ ರೈಲ್ವೆ ನಿಲ್ದಾಣವನ್ನೂ ಮುರುಡೇಶ್ವರ ಹೊಂದಿದೆ. 
 
ಮುರುಡೇಶ್ವರ ಹೆಸರಿನ ಮೂಲ ರಾಮಾಯಣದ ಕಾಲದಲ್ಲಿದೆಯೆಂಬ ಪ್ರತೀತಿಯಿದೆ. ಹಿಂದು ದೇವಾನು ದೇವತೆಗಳು ಆತ್ಮ ಲಿಂಗವನ್ನು ಪೂಜಿಸುವ ಮೂಲಕ ಅಮರತ್ವವನ್ನು ಮತ್ತು ಅದೃಶ್ಯ ಶಕ್ತಿಯನ್ನು ಪಡೆದರು. ಲಂಕೆಯ ರಾಜ ರಾವಣ ತಾನೂ ಆತ್ಮಲಿಂಗವನ್ನು ಸಂಪಾದಿಸುವ ಮೂಲಕ ಅಮರತ್ವ ಪಡೆಯಲು ಬಯಸಿದ್ದ. ಆತ್ಮಲಿಂಗ ಶಿವನಿಗೆ ಸೇರಿದ್ದರಿಂದ  ರಾವಣ ಶಿವನನ್ನು ಅತ್ಯಂತ ಭಕ್ತಿಯಿಂದ ಪೂಜಿಸಿದ. ಅವನ ಪ್ರಾರ್ಥನೆಯಿಂದ ಸಂತೃಪ್ತರಾದ ಶಿವ ಅವನ ಮುಂದೆ ಪ್ರತ್ಯಕ್ಷನಾಗಿ ಯಾವ ವರ ಬೇಕೆಂದು ಕೇಳಿದ. ರಾವಣ ಆತ್ಮಲಿಂಗ ಬೇಕೆಂದು ವರ ಬೇಡಿದ. ಆದರೆ ಲಂಕಾವನ್ನು ಮುಟ್ಟುವುದಕ್ಕೆ ಮುಂಚೆ ಆತ್ಮಲಿಂಗವನ್ನು ನೆಲದ ಮೇಲಿರಿಸಬಾರದು ಎಂಬ ಷರತ್ತಿನೊಂದಿಗೆ ಶಿವ ಆತ್ಮಲಿಂಗ ನೀಡಿದ.
 
ನಾರದ ಮಹರ್ಷಿಗಳಿಗೆ ಈ ವಿಷಯ ತಿಳಿದು ಆತ್ಮಲಿಂಗದ ನೆರವಿನಿಂದ ಅಮರತ್ವ ಪಡೆಯುವ ರಾವಣ ಭೂಮಿಯಲ್ಲಿ ವಿನಾಶ ಉಂಟುಮಾಡುತ್ತಾನೆಂದು ಭಯಪಟ್ಟರು. ಗಣೇಶನನ್ನು ಸಂಪರ್ಕಿಸಿ ಇದನ್ನು ತಪ್ಪಿಸುವಂತೆ ಕೋರಿಕೊಂಡರು. ರಾವಣ ಅತ್ಯಂತ ದೈವಭಕ್ತನಾಗಿದ್ದು, ಪ್ರತಿ ದಿನ ಸಂಜೆ ಪ್ರಾರ್ಥನೆ ಮಾಡುತ್ತಾನೆಂದು ತಿಳಿದಿದ್ದ. ರಾವಣ ಗೋಕರ್ಣ ಸಮೀಪಿಸುತ್ತಿದ್ದಂತೆ ವಿಷ್ಣು ದೇವರು ಸೂರ್ಯನಿಗೆ ಮರೆಯಾಗಿ ಸಂಜೆಯನ್ನು ಸೃಷ್ಟಿಸಿದರು. ರಾವಣ ತಮ್ಮ ಸಂಜೆಯ ಪ್ರಾರ್ಥನೆ ಸಲ್ಲಿಸಲು ಹೊರಟಾಗ ಆತ್ಮಲಿಂಗ ಅವನ ಕೈಯಲ್ಲಿತ್ತು. ಈ ಸಂದರ್ಭದಲ್ಲಿ ಗಣೇಶ ಬ್ರಾಹ್ಮಣ ಹುಡುಗನ ಸೋಗಿನಲ್ಲಿ ರಾವಣನ ಜತೆ ಬಂದಿದ್ದ.  ನಾನು ದೇವರ ಪ್ರಾರ್ಥನೆ ಸಲ್ಲಿಸುವ ತನಕ ಆತ್ಮಲಿಂಗವನ್ನು ಹಿಡಿದುಕೊಳ್ಳುವಂತೆ, ನೆಲದ ಮೇಲೆ ಇರಿಸದಂತೆಯೂ ರಾವಣ ಸೂಚಿಸಿದ್ದ. ಗಣೇಶ ಒಪ್ಪಂದ ಮಾಡಿಕೊಂಡು ಮೂರು ಸಲ ರಾವಣನನ್ನು ಕರೆಯುವುದಾಗಿ ಬರದಿದ್ದರೆ ನೆಲದ ಮೇಲೆ ಇರಿಸುವುದಾಗಿ ಹೇಳಿ ಅದರಂತೆ ಮಾಡಿದ.
 
ರಾವಣ ಹಿಂತಿರುಗಿ ಆತ್ಮಲಿಂಗವನ್ನು ನೆಲದ ಮೇಲೆ ಇರಿಸಿದ್ದನ್ನು ನೋಡಿ ಆಘಾತಕ್ಕೊಳಗಾದ. ತಾನು ಮೋಸಹೋದೆನೆಂದು ತಿಳಿದ ರಾವಣ ಲಿಂಗವನ್ನು ನಾಶಮಾಡಲು ಯತ್ನಿಸಿದ. ಆತ್ಮಲಿಂಗವನ್ನು ಬಟ್ಟೆಯಿಂದ ಮುಚ್ಚಿದ್ದ ಭಾಗವನ್ನು 
.ಕಾಂಡುಕಾ ಗಿರಿಯ ಮೃದೇಶ್ವರದಲ್ಲಿ ಎಸೆದ. ಮೃದೇಶ್ವರವು ಮುಂದೆ ಮುರ್ಡೇಶ್ವರ ಎಂದು ಮರುನಾಮಕರಣಗೊಂಡು,  ಶಿವನ ಯಾತ್ರಾಸ್ಥಳವಾಗಿ ಜನಪ್ರಿಯವಾಗಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದಲ್ಲಿ ಧಾರ್ಮಿಕ ಅಸಹಿಷ್ಣುತೆ ಹೆಚ್ಚುತ್ತಿದೆಯೇ?