Publish Date: Sat, 19 Dec 2015 (08:44 IST)
Updated Date: Sat, 19 Dec 2015 (08:46 IST)
ಈಜಲು ತೆರಳಿದ್ದ ವಿದ್ಯಾರ್ಥಿ ಸಮುದ್ರ ಪಾಲಾಗಿರುವ ಹೃದಯವಿದ್ರಾವಕ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದಲ್ಲಿ ನಡೆದಿದೆ.
ಮೃತಪಟ್ಟ ವಿದ್ಯಾರ್ಥಿಯನ್ನು ಚಿಕ್ಕಬಳ್ಳಾಪುರದ ಮೂಲದ ಗಂಗರಾಜ್ ಎಸ್. ಶಾಮಣ್ಣ (15) ಎಂದು ಗುರುತಿಸಲಾಗಿದೆ. ಈತ ಶಾಮಣ್ಣ ನಗರದ ಕೆ.ಆರ್ ಪಿಯುಸಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ.
ಕಾಲೇಜು ವತಿಯಿಂದ ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಲಾಗಿತ್ತು. ನಿನ್ನೆ ಪ್ರವಾಸಕ್ಕೆಂದು ಮುರುಡೇಶ್ವರದಲ್ಲಿ ಸ್ನೇಹಿತರ ಜತೆ ಗಂಗರಾಜ್ ಕೂಡ ನೀರಿಗಿಳಿದಿದ್ದು ನೀರಿನ ಸೆಳೆತಕ್ಕೆ ಸಿಕ್ಕು ಮುಳುಗಿ ಹೋಗಿದ್ದಾನೆ.
ಗಂಗರಾಜ್‌ಗೆ ಈಜಲು ಬರುತ್ತಿರಲಿಲ್ಲ ಎಂದು ತಿಳಿದು ಬಂದಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.