Select Your Language

Notifications

webdunia
webdunia
webdunia
webdunia

ರಾಮಮಂದಿರ ವಿಷಯದಲ್ಲಿ ದಂದ್ವ ನೀತಿ ಸಲ್ಲದು: ಅಮಿತ್ ಶಾಗೆ ಕಾಂಗ್ರೆಸ್ ಟಾಂಗ್

ರಾಮಮಂದಿರ ವಿಷಯದಲ್ಲಿ ದಂದ್ವ ನೀತಿ ಸಲ್ಲದು: ಅಮಿತ್ ಶಾಗೆ ಕಾಂಗ್ರೆಸ್ ಟಾಂಗ್
ನವದೆಹಲಿ , ಬುಧವಾರ, 8 ಜೂನ್ 2016 (15:11 IST)
ಅಯೋಧ್ಯೆ ವಿವಾದದ ಕುರಿತಂತೆ ಪಕ್ಷದ ನಾಯಕರು ಕೋಮುವಾದದ ಹೇಳಿಕೆ ನೀಡುತ್ತಿದ್ದರೂ ಬಿಜೆಪಿ ಪಕ್ಷದ ಅಧ್ಯಕ್ಷ ಅಮಿತ್ ಶಾ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡ ಪ್ರಮೋದ್ ತಿವಾರಿ ಗುಡುಗಿದ್ದಾರೆ.
 
ಮುಂದಿನ ವರ್ಷ ಉತ್ತರಪ್ರದೇಶದಲ್ಲಿ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಅಮಿತ್ ಶಾ ರಾಮಮಂದಿರ ವಿವಾದವನ್ನು ಎತ್ತುವುದಿಲ್ಲ. ಅಭಿವೃದ್ಧಿ ಚುನಾವಣೆ ವಿಷಯವಾಗಿರುತ್ತದೆ ಎಂದು ನೀಡಿರುವ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ ತಿವಾರಿ, ಕೇವಲ ರಾಜಕೀಯ ಲಾಭಕ್ಕಾಗಿ ಬಿಜೆಪಿ ರಾಮಮಂದಿರ ವಿವಾದವನ್ನು ಜೀವಂತವಾಗಿಡಲು ಬಯಸಿದೆ ಎಂದು ಆರೋಪಿಸಿದರು.   
 
ಒಂದು ವೇಳೆ ನೀವು ಹೇಳಿದ ನಿಲುವು ಪಕ್ಷದ ನಿಲುವಾಗಿದ್ದರೆ, ಇತರ ಬಿಜೆಪಿ ಮುಖಂಡರು ನೀಡುತ್ತಿರುವ ಕೋಮುವಾದದ ಹೇಳಿಕೆಗಳ ಬಗ್ಗೆ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ. ಇಂತಹ ದಂದ್ವ ನಿಲುವು ನಿಲ್ಲಿಸಿ ಎಂದು ಕಿಡಿಕಾರಿದ್ದಾರೆ. 
 
ಲಕ್ನೋದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಮಿತ್ ಶಾ, ರಾಮಜನ್ಮಭೂಮಿ ಚುನಾವಣೆ ಪ್ರಣಾಳಿಕೆಯಲ್ಲಿದೆ ಎಂದು ಸ್ಪಷ್ಟಪಡಿಸಿರುವುದು, ಇದೀಗ ಕಾಂಗ್ರೆಸ್-ಬಿಜೆಪಿ ಮಧ್ಯದ ಸಮರಕ್ಕೆ ಕಾರಣವಾಗಿದೆ. 
 
ಪರಸ್ಪರ ಸಮ್ಮತಿ.ಯ ಮೇರೆಗೆ ಅಥವಾ ನ್ಯಾಯಾಲಯದ ನಿರ್ದೇಶನದ ಮೇರೆಗೆ ರಾಮಮಂದಿರ ನಿರ್ಮಾಣ ಮಾಡುವುದು ನಮ್ಮ ಸ್ಪಷ್ಟ ನಿಲುವಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಒಂದೇ ಬಾರಿಗೆ ಲೋಕಸಭೆ, ವಿಧಾನಸಭೆ ಚುನಾವಣೆ ನಡೆಸಲು ಸಿದ್ದ: ಚುನಾವಣಾ ಆಯೋಗ