ಸ್ವಾದಿಷ್ಠ ತ್ರಿವರ್ಣ ಬರ್ಫಿ

Webdunia
ಗುರುವಾರ, 28 ಮಾರ್ಚ್ 2019 (17:53 IST)
ಬೇಕಾಗುವ ಸಾಮಗ್ರಿಗಳು: 
1. ಹಾಲು – 1/4 ಲೀಟರ್
2. ಹಾಲಿನ ಪೌಡರ್ – 1/4 ಕೆಜಿ
3. ತುಪ್ಪ – 3-4 ಚಮಚ
4. ಸಕ್ಕರೆ – 1/4 ಕಪ್
5. ಪಿಸ್ತಾ
6. ಕೊಬ್ಬರಿ ತುರಿ
7. ಕೇಸರಿ – ಚಿಟಿಕೆ
 
ಮಾಡುವ ವಿಧಾನ: 
ಒಂದು ನಾನ್‍ಸ್ಟಿಕ್ ಪ್ಯಾನ್‍ಗೆ ಹಾಲು ಹಾಕಿ ಕುದಿಸಿ, ಅದಕ್ಕೆ 3 ಚಮಚ ತುಪ್ಪ ಸೇರಿಸಿರಿ. ಬಳಿಕ ಅದಕ್ಕೆ ಹಾಲಿನ ಪೌಡರ್ ಹಾಕಿ ಗಂಟು ಕಟ್ಟದಂತೆ ತಿರುಗಿಸಿ. ಹಾಲು – ತುಪ್ಪದೊಂದಿಗೆ ಪೌಡರ್ ಮಿಕ್ಸ್ ಆಗುವ ತನಕ ಕೈ ಬಿಡದೆ ತಿರುಗಿಸಿ. ನಂತರ ಸಕ್ಕರೆ ಸೇರಿಸಿ ತಳ ಬಿಡುವ ತನಕ ಕುದಿಸಿರಿ. (ಸೌಟಿನಿಂದ ತಿರುಗಿಸಿ). ಎಲ್ಲಾ ಮಿಶ್ರಣ ಗಟ್ಟಿಯಾದ ಬಳಿಕ ಕೆಳಗಿಳಿಸಿರಿ. ಬಳಿಕ ಗಟ್ಟಿಯಾದ ಮಿಶ್ರಣವನ್ನು ಮೂರು ಭಾಗ ಮಾಡಿ ಒಂದು ಸಣ್ಣ ಬೌಲ್‍ಗೆ ಹಾಕಿರಿ.

ಒಂದು ಭಾಗಕ್ಕೆ ಹಾಲಿನೊಂದಿಗೆ ಸೇರಿಸಿದ ಕೇಸರಿ ಸೇರಿಸಿ ಮಿಕ್ಸ್ ಮಾಡಿ – ಕೇಸರಿ ಬಣ್ಣವಾಗುತ್ತದೆ. ಇನ್ನೊಂದು ಭಾಗಕ್ಕೆ ಸಿಪ್ಪೆ ತೆಗೆದು ಬೇಯಿಸಿ ರುಬ್ಬಿದ ಪಿಸ್ತಾವನ್ನು ಮಿಕ್ಸ್ ಮಾಡಿ – ಹಸಿರು ಬಣ್ಣವಾಗುತ್ತದೆ. ಇನ್ನೊಂದು ಭಾಗಕ್ಕೆ ಬಿಳಿ ಕೊಬ್ಬರಿ ತುರಿಯ ಪೇಸ್ಟ್ ಅನ್ನು ಮಿಕ್ಸ್ ಮಾಡಿ – ಬಿಳಿ ಬಣ್ಣವಾಗುತ್ತದೆ.  ಈಗ ಒಂದು ತಟ್ಟೆಗೆ ತುಪ್ಪ ಸವರಿ. ಕೇಸರಿ, ಬಿಳಿ, ಹಸಿರು ಬಣ್ಣದ ಮಿಶ್ರಣವನ್ನು ಒಂದರ ಮೇಲೊಂದರಂತೆ ಹಾಕಿ. ಬೇಕಾದ ಆಕೃತಿಗೆ ಕಟ್ ಮಾಡಿ. ತಣ್ಣಗಾದ ಮೇಲೆ ತಟ್ಟೆಯಿಂದ ತೆಗೆದು ಸೇವಿಸಿರಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಬಜ್ಜಿ ತಿಂದ ತಕ್ಷಣ ನೀರು ಕುಡಿದ್ರೆ ಏನಾಗುತ್ತದೆ

ನಾವು ನಿದ್ರೆಗೆ ಜಾರುವ ಮುನ್ನಾ ಮಾಡಲೇ ಬಾರದ ತಪ್ಪುಗಳು

ಮೊಳಕೆ ಹುರುಳಿ ಕಾಳಿನಿಂದ ಆರೋಗ್ಯಕ್ಕಿರಲಿದೆ ಸಾಕಷ್ಟು ಪ್ರಯೋಜನ

Sankranti 2026: ಎಳ್ಳು ಬೆಲ್ಲ ಹಂಚಿಕೆ ಹಿಂದೆ ನೀವು‌ ತಿಳಿಯದಿರುವ ಅಚ್ಚರಿ ಅಂಶಗಳು

ಕುತ್ತಿಗೆ ಭಾಗದಲ್ಲಿ ಕಪ್ಪಾಗುವುದು ಸಾಮಾನ್ಯ ಈ ಕಾರಣಕ್ಕೆ

ಮುಂದಿನ ಸುದ್ದಿ
Show comments