Select Your Language

Notifications

webdunia
webdunia
webdunia
webdunia

ಸೌಂದರ್ಯವರ್ಧಕಗಳು ವಿಷಕಾರಿಯಾಗಬಲ್ಲವೇ?

ಸೌಂದರ್ಯವರ್ಧಕಗಳು ವಿಷಕಾರಿಯಾಗಬಲ್ಲವೇ?
ಬೆಂಗಳೂರು , ಸೋಮವಾರ, 25 ಮಾರ್ಚ್ 2019 (18:17 IST)
ನಮ್ಮ ಪೃಕೃತಿಯ ಕೊಡುಗೆಯಾದ ಸಹಜ ಸೌಂದರ್ಯವನ್ನು ಕಾಪಾಡಿಕೊಳ್ಳುವುದೂ ಸಹ ಒಂದು ರೀತಿಯ ಕಲೆಯೇ ಸರಿ. ಈಗಿನ ವಿದ್ಯಮಾನದಲ್ಲಿ ಸಹಜ ಸೌಂದರ್ಯಕ್ಕೆ ಬೆಲೆಯೇ ಇಲ್ಲದಂತಾಗಿದೆ. ಹುಟ್ಟಿದ ಪ್ರತಿಯೊಬ್ಬರಲ್ಲೂ ಒಂದು ವಿಶಿಷ್ಟ ಸೌಂದರ್ಯವಿರುತ್ತದೆ. ಕೆಲವರು ಮುಗುಳ್ನಕ್ಕರೂ ಸಾಕು ಅವರ ಚೆಲುವು ಇಮ್ಮಡಿಗೊಳ್ಳುತ್ತದೆ.

ಹಿಂದಿನ ಕಾಲದಲ್ಲಿ ಪಾಲಿಸುತ್ತಿದ್ದ ಹಣೆಗೆ ಚೆಂದದ ಬೊಟ್ಟು, ಬೆನ್ನಿನ ಮೆಲೆ ಹೆದ್ದಾರಿಯ ಹಾಗೆ ಕಾಣಿಸುತ್ತಿದ್ದ ಕೂದಲು, ಆ ಕೂದಲಿಗೆ ಹೂ, ಮೂಗಿಗೆ ನತ್ತು, ಕೊರಳಿಗೆ ಸರ, ಕೈಗೆ ಬಳೆ ಹೀಗೆ ಒಂದೇ ಎರಡೇ..ಆದರೆ ಈಗ ಕಾಲ ಬದಲಾಗಿದೆ. ಉದ್ದವಾದ ಜಡೆಯು ಕಣ್ಮರೆಯಾಗಿ ಚಿಕ್ಕದಾಗಿ ಬೇರೆ ಬೇರೆ ಶೈಲಿಯಲ್ಲಿ ಕತ್ತರಿಸಿಕೊಂಡ ಕೂದಲಿನ ವಿನ್ಯಾಸವನ್ನು ಕಾಣಬಹುದಾಗಿದೆ. ಇದೆಲ್ಲಕ್ಕಿಂತ ಹೆಚ್ಚಿನ ಬೇಸರದ ಸಂಗತಿಯೇನೆಂದರೆ ನೈಸರ್ಗಿಕದತ್ತವಾದ ಸೌಂದರ್ಯವನ್ನು ದುಡ್ಡು ಕೊಟ್ಟು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂಬುದೇ ವಿಪರ್ಯಾಸವಾಗಿದೆ.
 
ಸಾಮಾನ್ಯವಾಗಿ ಸಹಜವಾದ ಸೌಂದರ್ಯವರ್ಧಕಗಳು ಈಗ ಮರೀಚಿಕೆಗಳಾಗಿವೆ. ಏನೇ ಇದ್ದರೂ ದುಬಾರಿಯಾದ, ಚರ್ಮದ ಮೇಲೆ ಕೆಟ್ಟ ಪರಿಣಾಮವನ್ನು ಬೀರುವ, ವಿವಿಧ ವಿನ್ಯಾಸಕಾರಿಯಾದ ಸೌಂದರ್ಯವರ್ಧಕಗಳು ಮಾರುಕಟ್ಟೆಗೆ ದಿನನಿತ್ಯವೂ ಲಗ್ಗೆ ಇಡುತ್ತಿವೆ. ಹಾಗಾದರೆ ಇವೇಕೇ ನಮಗೆ ವಿಷಕಾರಿಯಾಗಬಲ್ಲವು? ಎಂದು ಹುಬ್ಬೇರಿಸುತ್ತಿದ್ದೀರಾ? ಏಕೆ ಎಂಬುದನ್ನು ಕೂಲಂಕುಷವಾಗಿ ನೋಡೋಣ ಬನ್ನಿ.. ನಿಮಗೆ ಮೇಕಪ್‌ಗೆ ಬಳಸುವ ಸೌಂದರ್ಯವರ್ಧಕಗಳ ಸಮಯಾವಧಿಗಳು ತಿಳಿದಿದೆಯೇ
 
* ಮಸ್ಕರಾ: ಇಂದಿನ ವಿದ್ಯಮಾನದಲ್ಲಿ ಯಾರೂ ಸಹ ಮಸ್ಕರಾ ಇಲ್ಲದೆಯೇ ಕಣ್ಣಿಗೆ ಐಶೇಡೊ, ಕಾಜಲ್ ಇಲ್ಲದೆಯೇ ಹೊರಗೆ ಕಾಲಿಡುವುದಿಲ್ಲ. ಅಂತಹ ಮಸ್ಕರಾದ ಬಳಕೆಯ ಅವಧಿ ಕೇವಲ 6 ರಿಂದ 8 ವಾರಗಳಷ್ಟೇ. ಇನ್ನೂ ಸಮಯವಿದೆ ಎಂದು ಬಳಸಿದರೆ ಕಣ್ಣುಗಳು ಹಾಳಾಗುವುದರಲ್ಲಿ ಸಂಶಯವಿಲ್ಲ.
 
* ಸುಗಂಧದ್ರವ್ಯ/ಪರ್ಪ್ಯೂಮ್: ಇದನ್ನು ಕೇವಲ ಹೆಂಗಳೆಯರು ಮಾತ್ರ ಅಲ್ಲದೇ ಪುರುಷರೂ ಸಹ ಬಳಸುತ್ತಾರೆ. ಈ ಸುಗಂಧ ದ್ರವ್ಯದ ಅವಧಿ ಮುಗಿದಿದೆ ಎಂಬುದನ್ನು ಅದರ ವಾಸನೆಯಿಂದಲೇ ತಿಳಿದುಕೊಳ್ಳಬಹುದು. ಪರಿಮಳದ ಬದಲಿಗೆ ಕೆಟ್ಟ ವಾಸನೆ ಬಂದರೆ ಇದು ಬಳಸಲು ಯೋಗ್ಯವಲ್ಲ ಎಂದು ಅರ್ಥ. 
 
* ಫೇಸ್ ಮಾಸ್ಕ್: ಫೇಸ್ ಮಾಸ್ಕ್‌ನ ಅವಧಿ  1 ರಿಂದ 2 ವರ್ಷಗಳು ಮಾತ್ರ. ಈ ಫೇಸ್ ಮಾಸ್ಕ್‌ಗಳು ಅವಧಿ ಮುಗಿಯುತ್ತಿದ್ದಂತೆ ಬಣ್ಣವನ್ನು ಬದಲಿಸುತ್ತದೆ. ಅಲ್ಲದೇ ಒಣಗಿ ಹೋದಂತೆ ಕಾಣಿಸುತ್ತದೆ. ಅದರಿಂದಲೇ ಅದರ ಅವಧಿಯನ್ನು ತಿಳಿದುಕೊಳ್ಳಬಹುದು.
 
* ಐಲೈನರ್: ಲಿಕ್ವಿಡ್ ಐಲೈನರ್ 6 ತಿಂಗಳು ಇದ್ದರೆ ಪೆನ್ಸಿಲ್ ಐ ಲೈನರ್ 2 ವರ್ಷಗಳ ಕಾಲ ಇರುತ್ತದೆ. ಮತ್ತು ಪೆನ್ಸಿಲ್ ಐ ಲೈನರ್‌ಗಿಂತ ಲಿಕ್ವಿಡ್ ಐಲೈನರ್‌ನಲ್ಲಿ ಬ್ಯಾಕ್ಟೀರಿಯಾಗಳು ಹೆಚ್ಚಾಗಿ ಇರುತ್ತವೆ.
 
* ಲಿಪ್‌ಸ್ಟಿಕ್: ಇದರ ಅವಧಿ 2 ವರ್ಷಗಳು. ಅವಧಿ ನಂತರ ಇದರ ಬಣ್ಣದಲ್ಲಿ ಬದಲಾವಣೆ ಅಥವಾ ವಾಸನೆಯಲ್ಲಿ ಬದಲಾವಣೆ ಕಂಡುಬಂದರೆ ಅದರ ಪುನಃ ಬಳಕೆ ಮಾಡುವುದು ಹಾನಿಕಾರಕವಾಗಿದೆ. 
 
* ಕ್ರೀಂ ಅಥವಾ ಫೌಂಡೇಶನ್: ಇದು ಸಾಮಾನ್ಯವಾಗಿ 12 ರಿಂದ 18 ತಿಂಗಳವರೆಗೂ ಇರುತ್ತದೆ. ಪೌಡರ್‌ನ ಅವಧಿಯು 2 ವರ್ಷಗಳ ಕಾಲ ಇರುತ್ತದೆ. ಅವಧಿ ಮುಗಿಯುತ್ತಿದ್ದಂತೆಯೇ ಇದೂ ಸಹ ಬಣ್ಣ ಬದಲಾಯಿಸಲು ಪ್ರಾರಂಭಿಸುತ್ತದೆ ಮತ್ತು ಮುಖಕ್ಕೆ ಹಾಕಿದಾಗ ಬೂದಿ ಹಚ್ಚಿದಂತಹ ಅನುಭವವಾಗುತ್ತದೆ. 
   
    ಇಷ್ಟೇ ಅಲ್ಲದೇ ದಿನನಿತ್ಯವೂ ನಾವು ಅಡಿಯಿಂದ ಮುಡಿಯವರೆಗೂ ರಾಸಾಯನಿಕಗಳನ್ನೇ ಉಪಯೋಗಿಸುತ್ತೇವೆ. ಮೇಕಪ್ ವಸ್ತು ತಯಾರಿಕೆಯಲ್ಲಿ ಬಳಕೆ ಮಾಡುವ ಸುಮಾರು 15 ಸೌಂದರ್ಯ ವರ್ಧಕ ರಸಾಯನಿಕ ವಸ್ತುಗಳು ಆರೋಗ್ಯದ ಮೇಲೆ ಪರಿಣಾಮ ಬೀರಲಿದ್ದು, ದೇಹದ ಹಾರ್ಮೋನುಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹಾರ್ಮೋನುಗಳ ಮೇಲೆ ಬೀರುವ ಪರಿಣಾಮದಿಂದ ಹೆಣ್ಣು ಮಕ್ಕಳು ಗರ್ಭ ಧರಿಸುವ ಅವಧಿ ವ್ಯತ್ಯಾಸವಾಗುವುದಲ್ಲದೆ, 30ರ ವಯಸ್ಸಿನ ಬಳಿಕ ಮಕ್ಕಳಾಗುವ ಸಂಭವವೇ ಇಲ್ಲವಾಗಬಹುದು. ದಿನನಿತ್ಯ ಅತಿ ಹೆಚ್ಚು ಮೇಕಪ್ ಮಾಡುವ ಹೆಣ್ಣು ಮಕ್ಕಳು ಬಹುಬೇಗ ವೃದ್ಧಾಪ್ಯದ ಮುದುಕಿಯರಂತೆ ಕಾಣವಂತಾಗುತ್ತಾರೆ. ಅಲ್ಲದೆ, ದಿನನಿತ್ಯ ಬಳಸುವ ನೈಲ್ ಪಾಲಿಷ್, ಲಿಪ್​ಸ್ಟಿಕ್, ಫೇಸ್ ಕ್ರೀಮ್ ನಿಂದ 40-45ರ ಆಸುಪಾಸಿನಲ್ಲಿ ನಿಲ್ಲುವ ಋತುಚಕ್ರ ಐದಾರು ವರ್ಷ ಮೊದಲೇ ನಿಲ್ಲುವ ಸಾಧ್ಯತೆ ಇದೆ ಎಂಬ ವಿಜ್ಞಾನಿಗಳ ಸಮೀಕ್ಷೆಯನ್ನು ಇಲ್ಲಿ ನಾವು ಸ್ಮರಿಸಬಹುದು. ಆದ್ದರಂದ ಈಗಲಾದರೂ ಹೆಂಗಳೆಯರು ಎಚ್ಚೆತ್ತುಕೊಳ್ಳಬೇಕು. ಪ್ರತಿಯೊಂದು ವಸ್ತುವನ್ನು ಬಳಸುವಾಗಲೂ ಇದು ನನ್ನ ತ್ವಚೆಗೆ ಸರಿಹೊಂದುತ್ತದೆಯೇ ಎಂಬುದನ್ನು ಚರ್ಮ ತಜ್ಞರಿಂದಲೋ ಇಲ್ಲವೇ ತಿಳಿದವರಿಂದಲೋ ಕೇಳಿ ಬಳಸುವುದು ಉತ್ತಮ. 

Share this Story:

Follow Webdunia kannada

ಮುಂದಿನ ಸುದ್ದಿ

ಸ್ವಾದಿಷ್ಠ ಅಕ್ಕಿ ಸಂಡಿಗೆ