ಸರಳವಾಗಿ ಮಾಡಬಹುದಾದ ಸಾಂಪ್ರದಾಯಿಕ ತಿಂಡಿ ಖರ್ಜಿಕಾಯಿ...

ನಾಗಶ್ರೀ ಭಟ್
ಗುರುವಾರ, 22 ಫೆಬ್ರವರಿ 2018 (16:18 IST)
ಗಣೇಶ ಚತುರ್ಥಿ, ದೀಪಾವಳಿ, ಸಂಕ್ರಾಂತಿ ಹೀಗೆ ಎಲ್ಲಾ ಹಬ್ಬಗಳಲ್ಲೂ ಮಾಡುವ ಖರ್ಜಿಕಾಯಿ ನಮ್ಮ ಸಾಂಪ್ರದಾಯಿಕ ತಿಂಡಿಗಳಲ್ಲಿ ಒಂದಾಗಿದೆ. ಹಳೆಯ ತಿಂಡಿಗಳಲ್ಲಿರುವ ರುಚಿ ಈಗಿನ ಫಿಜಾ, ಬರ್ಗರ್‌ಗಳಲ್ಲಿರುವುದಿಲ್ಲ. ನೀವೂ ಸಹ ಹಬ್ಬಗಳಲ್ಲಿ ಸಾಂಪ್ರದಾಯಿಕ ತಿಂಡಿಯಾದ ಖರ್ಜಿಕಾಯಿಯನ್ನು ತುಂಬಾ ಸರಳವಾಗಿ ಮತ್ತು ಶೀಘ್ರವಾಗಿ ಮಾಡಿಕೊಳ್ಳಬಹುದು. ಖರ್ಜಿಕಾಯಿ ಮಾಡುವ ವಿಧಾನ ಹೇಗೆ ಎಂದು ತಿಳಿದುಕೊಳ್ಳಬೇಕಾದರೆ ಈ ಲೇಖನವನ್ನು ಓದಿ.
ಬೇಕಾಗುವ ಸಾಮಗ್ರಿಗಳು:
 
ಒಣಕೊಬ್ಬರಿ ತುರಿ - 1/2 ಕಪ್
ಸಕ್ಕರೆಪುಡಿ - 1 ಕಪ್
ಗಸಗಸೆ - 2 ಚಮಚ
ಒಣದ್ರಾಕ್ಷಿ - 1/6 ಕಪ್
ಬಾದಾಮಿ - 1/6 ಕಪ್
ಗೋಡಂಬಿ - 1/6 ಕಪ್
ಏಲಕ್ಕಿ ಪುಡಿ - 1 ಚಮಚ
ಮೈದಾಹಿಟ್ಟು - 1 ಕಪ್
ಉಪ್ಪು - ರುಚಿಗೆ
ತುಪ್ಪ - 2-3 ಚಮಚ
ಬಿಸಿ ಹಾಲು - 1/4 ಕಪ್
ಎಣ್ಣೆ - ಕರಿಯಲು
 
ಮಾಡುವ ವಿಧಾನ:
 
ಮೊದಲಿಗೆ ಒಂದು ಬೌಲ್ ತೆಗೆದುಕೊಂಡು ಅದರಲ್ಲಿ ಮೈದಾಹಿಟ್ಟು, ಕಾಯಿಸಿದ 2-3 ಚಮಚ ತುಪ್ಪ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಅಗತ್ಯವಿರುವಷ್ಟು ಬಿಸಿ ಹಾಲನ್ನು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಹಿಟ್ಟನ್ನು ರೆಡಿ ಮಾಡಿ. ಚೆನ್ನಾಗಿ ನಾದಿ ಕಲಸಿದ ಹಿಟ್ಟನ್ನು ಸುಮಾರು 30 ನಿಮಿಷ ಹಾಗೆಯೇ ಬಿಡಿ.
 
ಈ ಸಮಯದಲ್ಲಿ ಬಾದಾಮಿ, ದ್ರಾಕ್ಷಿ ಮತ್ತು ಗೋಡಂಬಿಯನ್ನು ಚಿಕ್ಕ ಚಿಕ್ಕ ಚೂರುಗಳನ್ನಾಗಿ ಮಾಡಿ. ನಂತರ ಇನ್ನೊಂದು ಬೌಲ್ ತೆಗೆದುಕೊಂಡು ಅದರಲ್ಲಿ ಸಕ್ಕರೆ ಪುಡಿ, ಏಲಕ್ಕಿ ಪುಡಿ, ಕೊಬ್ಬರಿ ತುರಿ, ಗಸಗಸೆ, ಬಾದಾಮಿ, ದ್ರಾಕ್ಷಿ ಮತ್ತು ಗೋಡಂಬಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಹೂರಣವನ್ನು ಸಿದ್ಧಮಾಡಿಕೊಳ್ಳಿ.
 
ಈ ಮೊದಲೇ ಕಲಸಿಟ್ಟ ಹಿಟ್ಟನ್ನು ಇನ್ನೊಮ್ಮೆ ಚೆನ್ನಾಗಿ ನಾದಿ ಮಧ್ಯಮ ಗಾತ್ರದ ಉಂಡೆಗಳನ್ನಾಗಿ ಮಾಡಿಕೊಳ್ಳಿ. ಉಂಡೆಯನ್ನು ಚಪಾತಿ ಲಟ್ಟಿಸುವಂತೆ ಸ್ವಲ್ಪ ದಪ್ಪವಾಗಿ ಲಟ್ಟಿಸಿ. ನಂತರ ನಿಮಗೆ ಬೇಕಾದ ಗಾತ್ರದ ವೃತ್ತಾಕಾರದ ಬೌಲ್ ತೆಗೆದುಕೊಂಡು ಚಪಾತಿಯನ್ನು ವೃತ್ತಾಕಾರದಲ್ಲಿ ಕಟ್ ಮಾಡಿ. ಹೀಗೆ ಕಟ್ ಮಾಡಿಕೊಂಡ ಚಪಾತಿಯ ಮಧ್ಯಭಾಗಕ್ಕೆ 1-2 ಚಮಚ ಹೂರಣವನ್ನು ಹಾಕಿ ಚಪಾತಿಯ ಅಂಚಿಗೆ ಹಾಲನ್ನು ಸವರಿ. ಈಗ ಚಪಾತಿಯ ಒಂದು ಅಂಚನ್ನು ಇನ್ನೊಂದು ಅಂಚಿಗೆ ಜೋಡಿಸಿ ಬೆರಳಿನಿಂದ ಒಂದು ತುದಿಯಿಂದ ಇನ್ನೊಂದು ತುದಿಗೆ ನಿಧಾನವಾಗಿ ಒತ್ತುತ್ತಾ ಬನ್ನಿ. ನಂತರ ಅದನ್ನು ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೆ ಕರಿದರೆ ಖರ್ಜಿಕಾಯಿ ರೆಡಿಯಾಗುತ್ತದೆ. ಖರ್ಜಿಕಾಯಿಯ ಅಚ್ಚುಗಳೂ ಸಹ ಮಾರುಕಟ್ಟೆಯಲ್ಲಿ ದೊರೆಯುವುದರಿಂದ ಅದನ್ನೂ ಬಳಸಬಹುದು. ನೀವೂ ಒಮ್ಮೆ ಖರ್ಜಿಕಾಯಿ ಮಾಡಿನೋಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಋತುಚಕ್ರದ ನೋವಿಗೆ ದಿಡೀರ್ ಮುಕ್ತಿ ಬೇಕೆಂದರೆ ಹೀಗೆ ಮಾಡಿ

ಉದ್ದಿನ ದೋಸೆ ತಿಂದು ಬೇಜಾರಾಗಿದ್ರೆ ಈ ರೀತಿ ಒಮ್ಮೆ ಟ್ರೈ ಮಾಡಿ

ಮಕ್ಕಳ ದಿನಾಚರಣೆ ಸ್ಪೆಷಲ್: ನಿಮ್ಮ ಮಕ್ಕಳು ಹೀಗಿದ್ದರೆ ಉದಾಸೀನ ಬೇಡ

ಮುಂದಿನ ಸುದ್ದಿ
Show comments