Publish Date: Sun, 18 Feb 2018 (09:24 IST)
Updated Date: Sun, 18 Feb 2018 (09:25 IST)
ಬೆಂಗಳೂರು: ಈಗಷ್ಟೇ ದ್ರಾಕ್ಷಿ ಸೀಸನ್ ಶುರುವಾಗಿದೆ. ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರೂ ದ್ರಾಕ್ಷಿ ಹಣ್ಣಿನದ್ದೇ ಹವಾ. ಈ ದ್ರಾಕ್ಷಿ ಹಣ್ಣಿನ ಆರೋಗ್ಯಕರ ಉಪಯೋಗ ಏನು ಗೊತ್ತಾ?
ಆಂಟಿಆಕ್ಸಿಡೆಂಟ್
ದ್ರಾಕ್ಷಿಯಲ್ಲಿ ಆಂಟಿ ಆಕ್ಸಿಡೆಂಟ್ ಪ್ರಮಾಣ ಸಾಕಷ್ಟಿದ್ದು, ಇದು ಕ್ಯಾನ್ಸರ್ ಮತ್ತು ಹೃದ್ರೋಗದಂತಹ ಗಂಭೀರ ಸಮಸ್ಯೆಗಳನ್ನು ದೂರ ಮಾಡುತ್ತದೆ.
ಚರ್ಮದ ಸಮಸ್ಯೆಗೆ
ಚರ್ಮ ಸುಕ್ಕುಗಟ್ಟುವಿಕೆ ಮುಂತಾದ ಚರ್ಮ ಸಂಬಂಧೀ ಸಮಸ್ಯೆಗಳನ್ನು ದ್ರಾಕ್ಷಿಯಿಂದ ದೂರ ಮಾಡಬಹುದು.
ಪೊಟೇಶಿಯಂ
ಪೊಟೇಶಿಯಂ ದೇಹದಲ್ಲಿ ಸೋಡಿಯಂ ಅಂಶ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ. ಇದರಿಂದ ಸಹಜವಾಗಿ ಕಿಡ್ನಿಗೆ ಸಂಬಂಧಿಸಿದ ಸಮಸ್ಯೆ, ರಕ್ತದೊತ್ತಡದಂತಹ ಸಮಸ್ಯೆಗಳನ್ನು ದೂರ ಮಾಡಬಹುದು.
ಮೆದುಳು
ಮೆದುಳಿಗೆ ಹೆಚ್ಚಿನ ಪ್ರಮಾಣದಲ್ಲಿ ಮತ್ತು ಸುಗಮವಾಗಿ ರಕ್ತ ಪೂರೈಕೆ ಮಾಡಲು ದ್ರಾಕ್ಷಿಯಲ್ಲಿರುವ ಅಂಶ ಸಹಕರಿಸುತ್ತದೆ. ಅಷ್ಟೇ ಅಲ್ಲ, ಮರೆಗುಳಿತನದಂತಹ ಮೆದುಳಿಗೆ ಸಂಬಂಧಿಸಿದ ಸಮಸ್ಯೆಗೂ ದ್ರಾಕ್ಷಿ ಸೇವನೆ ಉತ್ತಮ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ