Select Your Language

Notifications

webdunia
webdunia
webdunia
webdunia

ಟೇಸ್ಟಿಯಾದ ಹಲಸಿನ ಹಣ್ಣಿನ ಪಾಯಸ

ಟೇಸ್ಟಿಯಾದ ಹಲಸಿನ ಹಣ್ಣಿನ ಪಾಯಸ
ಬೆಂಗಳೂರು , ಭಾನುವಾರ, 14 ಜನವರಿ 2018 (09:54 IST)
ಬೆಂಗಳೂರು : ಹಲಸಿನ ಹಣ್ಣು ಎಲ್ಲರಿಗೂ ಪ್ರಿಯವಾದ ಒಂದು ಹಣ್ಣು. ಇದರಿಂದ ಹಲವು ವಿಧದ ತಿಂಡಿ ತಿನಿಸುಗಳನ್ನು ಮಾಡಬಹುದು. ಅದರಲ್ಲಿ ಒಂದಾದ ಹಲಸಿನ ಹಣ್ಣಿನ ಪಾಯಸ ಮಾಡುವುದನ್ನು ಈಗ ತಿಳಿಯೋಣ.

 
ಬೇಕಾಗುವ ಸಾಮಾಗ್ರಿಗಳು : ಸಣ್ಣಗೆ ಕಟ್ ಮಾಡಿಕೊಂಡ ಹಲಸಿನ ತೊಳೆ 6, ಹುರಿದ ಚಿರೋಟಿ ರವಾ ½ ಟೇಬಲ್ ಸ್ಪೂನ್, 1 ಕಪ್ ಹಾಲು, ½ ಕಪ್ ನೀರು, 2 ಚಿಟಿಕೆ ಏಲಕ್ಕಿ ಪುಡಿ,  ½ ಕಪ್ ತೆಂಗಿನಕಾಯಿ ತುರಿ, ½ ಕಪ್ ಬೆಲ್ಲದ ಪುಡಿ, ಸ್ವಲ್ಪ ದ್ರಾಕ್ಷಿ-ಪೀಸ್ ಮಾಡಿದ  ಬಾದಾಮಿ-ಗೋಡಂಬಿ (ತುಪ್ಪದಲ್ಲಿ ಹುರಿದಿಟ್ಟುಕೊಳ್ಳಿ), ತುಪ್ಪ 2 ಟೇಬಲ್ ಸ್ಪೂನ್.

 
ಮಾಡುವ ವಿಧಾನ : ಒಂದು ಪಾತ್ರೆಯಲ್ಲಿ ತುಪ್ಪ ಬಿಸಿ ಮಾಡಿ ಅದಕ್ಕೆ ಹಲಸಿನ ಹಣ್ಣಿನ ಪೀಸ್ ಹಾಕಿ ಅದನ್ನು 4-5 ನಿಮಿಷ ಚೆನ್ನಾಗಿ ಫ್ರೈ ಮಾಡಿ ನಂತರ ಅದಕ್ಕೆ ಹಾಲು ಹಾಕಿ ಕುದಿಸಿ ನಂತರ ಅದಕ್ಕೆ ಚಿರೋಟಿ ರವೆಯನ್ನು ಹಾಕಿ ಮಿಕ್ಸ್ ಮಾಡಿ. 2 ನಿಮಿಷ ಬಿಟ್ಟು ರುಬ್ಬಿದ ತೆಂಗಿನಕಾಯಿ ತುರಿಯನ್ನುಹಾಗು ಸ್ವಲ್ಪ ನೀರು (ಬೇಕಾದಲ್ಲಿ ಮಾತ್ರ) ಅದಕ್ಕೆ ಹಾಕಿ, ಬೆಲ್ಲವನ್ನು ಹಾಕಿ ಚೆನ್ನಾಗಿ ಕೈಆಡಿಸಿ. 5 ನಿಮಿಷ ಕುದಿಸಿ. ನಂತರ ಕೆಳಗಿಳಿಸಿ ಏಲಕ್ಕಿ ಪುಡಿ, ಹುರಿದ ದ್ರಾಕ್ಷಿ,ಗೋಡಂಬಿ,ಬಾದಾಮಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದರೆ ಹಲಸಿನ ಹಣ್ಣಿನ ಪಾಯಸ ರೆಡಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಗ್ನೆನ್ಸಿ ಬಗ್ಗೆ ಬೇಡದ ಈ ಆತಂಕಗಳಿಗೆ ಗುಡ್ ಬೈ ಹೇಳಿ!