Select Your Language

Notifications

webdunia
webdunia
webdunia
webdunia

ಆರೋಗ್ಯದ ವಿಷಯದಲ್ಲಿ ತುಪ್ಪದ ಪಾತ್ರ ಎಷ್ಟು ಮಹತ್ವದ್ದು ಗೊತ್ತಾ?

ಆರೋಗ್ಯದ ವಿಷಯದಲ್ಲಿ ತುಪ್ಪದ ಪಾತ್ರ ಎಷ್ಟು ಮಹತ್ವದ್ದು ಗೊತ್ತಾ?

ಅತಿಥಾ

ಬೆಂಗಳೂರು , ಬುಧವಾರ, 10 ಜನವರಿ 2018 (18:26 IST)
ಆರೋಗ್ಯದ ವಿಷಯ ಬಂದಾಗ ತುಪ್ಪ ಮಹತ್ವದ ಪಾತ್ರ ವಹಿಸುತ್ತದೆ. ತುಪ್ಪವನ್ನು ಕೇವಲ ರುಚಿ ಹೆಚ್ಚಸಲು ಅಷ್ಟೆ ಅಲ್ಲದೆ ನಮ್ಮ ಆರೋಗ್ಯದ ಸುಧಾರಣೆಗಾಗೂ ಬಳಸಬಹುದು. ಇದು ಅತಿ ಹೆಚ್ಚಿನ ಪ್ರಮಾಣದಲ್ಲಿರುವ ಕ್ಯಾಲೋರಿಗಳು, ಪೋಷಕಾಂಶಗಳು, ವೈರಸ್ಸಿನ ವಿರುದ್ಧ ಹೋರಾಡುವ ಗುಣ, ಶಿಲಿಂಧ್ರ ನಿವಾರಕ, ಬ್ಯಾಕ್ಟೀರಿಯಾ ನಿವಾರಕ ಗುಣಗಳು ಮತ್ತು ಅಂಟಿ ಆಕ್ಸಿಡೆಂಟುಗಳ ಜೊತೆಗೆ ಕೊಂಚ ಕೊಬ್ಬಿನ ತೈಲವನ್ನೂ ಹೊಂದಿದೆ.
ಜೀರ್ಣಕ್ರಿಯೆಗೆ ಉತ್ತಮ-
ತುಪ್ಪದ ಒಂದು ಪ್ರಯೋಜನವೆಂದರೆ ಇದು ಜೀರ್ಣಕ್ರಿಯೆಗೆ ಸಹಾಯ ಮಾಡುವುದಾಗಿದೆ. ಜೀರ್ಣಕ್ರಿಯೆಯ ಸಮಸ್ಯೆ ಇರುವ ಪ್ರತಿಯೊಬ್ಬರೂ ಇತರ ಎಣ್ಣೆಗಳನ್ನು ಬಳಸುವುದಕ್ಕಿಂತ ತುಪ್ಪವನ್ನು ಬಳಸಿ.
 
ಅಧಿಕ ವಿಟಮಿನ್ ಹೊಂದಿದೆ-
ತುಪ್ಪದಲ್ಲಿ ಎ,ಡಿ,ಇ,ಕೆ ಮುಂತಾದ ವಿಶೇಷ ವಿಟಮಿನ್‌ಗಳಿದ್ದು ಇವು ಶರೀರಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಒದಗಿಸುತ್ತದೆ. ನಿಮ್ಮ ಪ್ರತಿದಿನದ ವಿಟಮಿನ್‌ಗಾಗಿ ಆಹಾರದಲ್ಲಿ ತುಪ್ಪವನ್ನು ಬಳಸಿ.
 
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ-
ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ತುಪ್ಪ ಮಹತ್ವದ ಪಾತ್ರವನ್ನು ಮಾಡುತ್ತದೆ. ಬೆಳೆಯುವ ಮಕ್ಕಳಿಗೆ ನೀಡುವ ಆಹಾರದಲ್ಲಿ ತುಪ್ಪವನ್ನು ಬಳಸುವುದರಿಂದ ಅವರ ರೋಗನಿರೋಧಕ ಶಕ್ತಿ ಹೆಚ್ಚಾಗಿ ಕಾಯಿಲೆ ಬೀಳುವ ಸಂಭವ ಕಡಿಮೆ ಇರುತ್ತದೆ. ಚಿಕ್ಕ ಪ್ರಮಾಣದಲ್ಲಿ ತುಪ್ಪವನ್ನು ಚಪಾತಿ ಅಥವಾ ರೊಟ್ಟಿಗಳಿಗೆ ಸವರಿ ಅಥವಾ ಅನ್ನಕ್ಕೆ ಸೇರಿಸಿ ಸೇವಿಸಬಹುದು.
 
ಹೃದಯದ ಆರೋಗ್ಯಕ್ಕೆ ಉತ್ತಮ-
ತುಪ್ಪದಲ್ಲಿ ಆಂಟಿಆಕ್ಸಿಡೆಂಟ್, ಕಂಜ್ಯೂಗೇಟೆಡ್ ಲಿನೋಲಿಕ್ ಏಸಿಡ್ (ಸಿಎಲ್‌ಎ) ಅಧಿಕವಾಗಿದ್ದು, ಕೊಬ್ಬು ಕರಗಿಸುವ ಅಂಶಗಳಿಂದ ಹೇರಳವಾಗಿದೆ ಇದು ನಿಮ್ಮ ಹೃದಯವನ್ನು ಆರೋಗ್ಯವಾಗಿರಿಸುತ್ತದೆ.
 
ನಿಮ್ಮ ಸ್ನಾಯುಗಳಿಗೆ ಉತ್ತಮ-
ಹಿರಿಯರು ತಾವು ತಿನ್ನುವ ಆಹಾರದಲ್ಲಿ ತುಪ್ಪವನ್ನು ಬಳಸುವ ಕಾರಣವೇನೆಂದರೆ ಇದು ಸ್ನಾಯುಗಳಿಗೆ ಮತ್ತು ಕೀಲುಗಳಿಗೆ ಬೇಕಾದ ಪೋಷಕಾಂಶಗಳನ್ನು ಒದಗಿಸಿ ಅದನ್ನು ಬಲಯುತಗೊಳಿಸಲು ಸಹಾಯ ಮಾಡುತ್ತದೆ. ಮತ್ತು ಇವುಗಳಲ್ಲಿ ಉಂಟಾಗುವ ನೋವನ್ನು ಕಡಿಮೆಗೊಳಿಸುತ್ತದೆ.
 
ಸ್ಮರಣಶಕ್ತಿಗೆ ಉತ್ತಮ-
ಸ್ಮರಣಶಕ್ತಿ ಮತ್ತು ಬುದ್ದಿಮತ್ತೆ ಹೆಚ್ಚಲು ತುಪ್ಪ ನೆರವಾಗುತ್ತದೆ ಎಂದು ಬಹಳ ಹಿಂದಿನಿಂದಲೂ ಭಾರತದಲ್ಲಿ ನಂಬಿಕೊಂಡು ಬರಲಾಗಿದೆ. ಇದೇ ಕಾರಣಕ್ಕೆ ವಿದ್ಯಾರ್ಥಿಗಳಿಗೆ ತುಪ್ಪದ ತಿಂಡಿಗಳನ್ನು ಆಗಾಗ ನೀಡಲಾಗುತ್ತಿತ್ತು.
 
ಎದೆ ಉರಿಯನ್ನು ಕಡಿಮೆ ಮಾಡುತ್ತದೆ-
ಗರ್ಭಿಣಿ ಹೆಂಗಸರು ಸೇರಿದಂತೆ ಕೆಲವರು ಎದೆ ಉರಿಯ ಸಮಸ್ಯೆಯನ್ನು ಅನುಭವಿಸುತ್ತಾರೆ. ಈ ರೀತಿಯ ತೊಂದರೆಯಿಂದ ಮುಕ್ತಿ ಪಡೆಯಲು ನಿಮ್ಮ ಊಟಕ್ಕೆ ತುಪ್ಪವನ್ನು ಮಿಶ್ರ ಮಾಡಿ ತೆಗೆದುಕೊಳ್ಳಿ, ಈ ಸಮಸ್ಯೆ ಹೇಳಹೆಸರಿಲ್ಲದಂತೆ ಮಾಯವಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ವೀರ್ಯಾಣು ಸಂಖ್ಯೆ ಹೆಚ್ಚಿಸಬೇಕಾದರೆ ಈ ಬಾಳೆಹಣ್ಣು ಸೇವಿಸಿ!