Publish Date: Wed, 10 Jan 2018 (08:45 IST)
Updated Date: Wed, 10 Jan 2018 (08:47 IST)
ಬೆಂಗಳೂರು: ಮಕ್ಕಳ ಬಗ್ಗೆ ಆಲೋಚನೆ ಮಾಡುತ್ತಿರುವ ದಂಪತಿ ತಮ್ಮ ಆಹಾರದಲ್ಲೂ ಬದಲಾವಣೆ ಮಾಡಿಕೊಳ್ಳುವುದು ಮುಖ್ಯ. ಮಕ್ಕಳ ಮಾಡಿಕೊಳ್ಳುವ ಆಲೋಚನೆ ಇರುವ ದಂಪತಿ ಹೇರಳವಾಗಿ ಕೆಂಪು ಬಾಳೆ ಹಣ್ಣು ಸೇವಿಸಬೇಕು ಎನ್ನುತ್ತಾರೆ ತಜ್ಞರು.
ಕೆಂಪು ಬಾಳೆಹಣ್ಣಿನಲ್ಲಿ ಫಲವಂತಿಕೆ ಹೆಚ್ಚಿಸುವ ಎಲ್ಲಾ ಅಂಶಗಳೂ ಇವೆ. ಕೇವಲ ಮಹಿಳೆಯರು ಮಾತ್ರವಲ್ಲ, ಪುರುಷರಲ್ಲೂ ಫಲವಂತಿಕೆ ಹೆಚ್ಚಿಸುವ ಸಾಮರ್ಥ್ಯ ಕೆಂಪು ಬಾಳೆಹಣ್ಣಿಗಿದೆಯಂತೆ. ಪುರುಷರಲ್ಲಿ ವೀರ್ಯಾಣು ಸಂಖ್ಯೆ ಹೆಚ್ಚಬೇಕಿದ್ದರೆ ಕೆಂಪು ಬಾಳೆ ಹಣ್ಣು ಸೇವಿಸಬಹುದು.
ಇದರಲ್ಲಿ ವಿಟಮಿನ್ ಬಿ ಮತ್ತು ಬ್ರೋಮ್ ಲೈನ್ ಅಂಶ ಹೇರಳವಾಗಿರುವ ಕಾರಣಕ್ಕೆ ವೀರ್ಯಾಣು ಹೆಚ್ಚುತ್ತದೆ ಎನ್ನುತ್ತಾರೆ ತಜ್ಞರು. ಹಾಗಾಗಿ ಪ್ರತಿನಿತ್ಯ ಕೆಂಪು ಬಾಳೆಹಣ್ಣು ಸೇವನೆ ಮಾಡುವುದು ಉತ್ತಮ. ಒಂದು ವೇಳೆ ಗರ್ಭಿಣಿಯಾದರೂ ಕೆಂಪು ಬಾಳೆ ಹಣ್ಣು ಸೇವಿಸುವುದಕ್ಕೆ ಸಮಸ್ಯೆಯಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ