Select Your Language

Notifications

webdunia
webdunia
webdunia
webdunia

ಕಾಲ ಮೇಲೆ ಕಾಲು ಹಾಕಿ ಕುಳಿತುಕೊಂಡರೆ ಈ ಎಲ್ಲಾ ಆರೋಗ್ಯ ಸಮಸ್ಯೆ ಕಾಡಲಿದೆಯಂತೆ!

ಕಾಲ ಮೇಲೆ ಕಾಲು ಹಾಕಿ ಕುಳಿತುಕೊಂಡರೆ ಈ ಎಲ್ಲಾ ಆರೋಗ್ಯ ಸಮಸ್ಯೆ ಕಾಡಲಿದೆಯಂತೆ!
ಬೆಂಗಳೂರು , ಬುಧವಾರ, 10 ಜನವರಿ 2018 (08:17 IST)
ಬೆಂಗಳೂರು : ಈಗೆಲ್ಲಾ ಕಾಲ್ ಮೇಲೆ ಕಾಲು ಹಾಕಿ ಕುಳಿತುಕೊಳ್ಳೋದು ಸಾಮಾನ್ಯವಾಗಿಬಿಟ್ಟಿದೆ. ಅದರಲ್ಲೂ ಮಹಿಳೆಯರಂತೂ ಅದನ್ನು ಒಂದು ಫ್ಯಾಶನ್ ಅಂತಾನೆ ಅಂದುಕೊಂಡಿದ್ದಾರೆ. ಕಾಲ ಮೇಲೆ ಕಾಲು ಹಾಕಿ ಕುಳಿತರೆ ಒಂದು ರೀತಿಯ ಸಮಾಧಾನ, ಗತ್ತು ಅಂತ ಕೆಲವರು ಅಂದುಕೊಳ್ಳುತ್ತಾರೆ. ಆದರೆ ಈ ರೀತಿ ಕುಳಿತುಕೊಳ್ಳುವುದು ಆರೋಗ್ಯಕ್ಕೆ ತುಂಬಾ ಹಾನಿಕಾರಕ.

 
ಅಧ್ಯಯನವೊಂದರ ಪ್ರಕಾರ ಮನುಷ್ಯ ತನ್ನ ಎಡಗಾಲ ಮೇಲೆ ಬಲಗಾಲು ಹಾಕಿ ಕುಳಿತರೆ ಏನೆಲ್ಲಾ ದುಷ್ಪರಿಣಾಮ ಬೀಳುತ್ತೆ ಅಂತ ತಿಳಿಸಿದೆ. ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವ ರೂಢಿ ಇದ್ದವರು ಆದಷ್ಟು ಬೇಗ ಈ ಅಭ್ಯಾಸವನ್ನು ಬಿಡಿ. ಏಕೆಂದರೆ ಈ ಅಭ್ಯಾಸದಿಂದ ಹೃದಯಕ್ಕೆ ನೇರ ಪರಿಣಾಮ ಬೀಳುತ್ತದೆಯಂತೆ. ಹೀಗೆ ಕುಳಿತುಕೊಳ್ಳುವವರಿಗೆ ರಕ್ತ ಸಂಚಾರ ಸರಾಗವಾಗಿ ನಡೆಯೊಲ್ಲ. ರಕ್ತದೊತ್ತಡ ಹೆಚ್ಚಾಗಿ ಹೃದಯಾಘಾತ ಸಂಭವಿಸುವ ಸಾಧ್ಯತೆ ಕೂಡ ಇದೆಯಂತೆ.



ಈ ರೀತಿ ಕುಳಿತುಕೊಳ್ಳುವುದರಿಂದ ಸೊಂಟದ ಸ್ನಾಯು ಸಮಸ್ಯೆ ಹೆಚ್ಚಾಗುತ್ತದೆ. ಸ್ನಾಯುಗಳು ಒಂದು ಭಾಗ ಸಂಕುಚಿತಗೊಂಡಿದ್ದರೆ ಇನ್ನೊಂದು ಕಡೆ ವಿಕಸನಗೊಂಡಿರುತ್ತೆ. ಹೀಗಾಗಿ ಸ್ನಾಯು ಸಮಸ್ಯೆ, ನರದೌರ್ಬಲ್ಯ ಬರುವ ಸಾಧ್ಯತೆ ಇದೆ. ಒಂದೇ ಕಡೆ ಹೆಚ್ಚು ವಾಲಿದಂತಹ ಅನುಭವವಾಗುವುದರಿಂದ ನರ ದೌರ್ಬಲ್ಯ ಉಂಟಾಗಿ ವಯಸ್ಸಾದ ನಂತರ ಪಾರ್ಶ್ವವಾಯು, ಲಕ್ವದಂತಹ ಕಾಯಿಲೆ ಬರಬಹುದು. ಸಾಮಾನ್ಯವಾಗಿ ಈ ಅಭ್ಯಾಸ ಇದ್ದವರಿಗೆ ಭುಜ ಹಾಗು ಕಾಲು ಮತ್ತುತೊಡೆಯ ಸಂದು ಹೆಚ್ಚು ನೋವು ಕಾಣಿಸಿಕೊಳ್ಳುತ್ತದೆ ಅಲ್ಲದೆ ಸೊಂಟದ ಎಲುಬುಗಳಲ್ಲಿ ತೀರ್ವವಾದ ನೋವು ಕಾಣಿಸಿಕೊಳ್ಳುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮುಖದ ಮೇಲಿರುವ ಮಚ್ಚೆಯನ್ನು ತೊಲಗಿಸಲು ಏನು ಮಾಡಬೇಕು ಗೊತ್ತಾ...?