Publish Date: Sat, 06 Jan 2018 (08:48 IST)
Updated Date: Sat, 06 Jan 2018 (08:53 IST)
ಬೆಂಗಳೂರು : ಹೆಚ್ಚಿನವರ ಮನೆಯಲ್ಲಿ ಜೀರಳೆಗಳ ಕಾಟ ಇದ್ದೆ ಇರುತ್ತದೆ. ಇವುಗಳು ಮನೆಯ ಮೂಲೆಯಲ್ಲಿ ಅವಿತುಕೊಂಡಿದ್ದು, ನಮಗೆ ತಿಳಿಯದ ಹಾಗೆ ನಾವು ಮಾಡಿರುವ ಅಡುಗೆ ಪದಾರ್ಥಗಳನ್ನು ತಿನ್ನುತ್ತವೆ. ಇದರಿಂದ ನಮಗೆ ಹಲವಾರು ಕಾಯಿಲೆಗಳು ಬರುತ್ತದೆ. ಆದ್ದರಿಂದ ಮನೆಯನ್ನು ಕ್ಲೀನ್ ಆಗಿಟ್ಟುಕೊಂಡು ಜೀರಳೆಗಳು ಆಗದಂತೆ ನೋಡಿಕೊಳ್ಳಿ. ಒಂದು ವೇಳೆ ಜೀರಳೆ ಆದರೆ ಈ ಕೆಳಗಿನ ಮನೆಮದ್ದನ್ನು ಬಳಸಿ ಜೀರಳೆಗಳನ್ನು ಓಡಿಸಿ.
-
ಕಂಫೊರ್ಟ್ (ಬಟ್ಟೆಗೆ ಬಳಸುವುದು) 1 ಮುಚ್ಚಳ ತೆಗೆದುಕೊಂಡು ಉಗುರು ಬೆಚ್ಚಗಿನ ನೀರಿಗೆ ಮಿಕ್ಸ್ ಮಾಡಿ ಮನೆಯ ಮೂಲೆಗೆ ಅಂದರೆ ಜೀರಳೆ ಇರುವ ಕಡೆ ಸ್ಪ್ರೇ ಮಾಡಿ. ಇದರ ವಾಸನೆಗೆ ಅವು ಹೊರಗೆ ಹೋಗುತ್ತದೆ.
-
ಕಾಫಿ ಪುಡಿಯನ್ನು ಜೀರಳೆ ಇರುವ ಕಡೆ ಸಿಂಪಡಿಸಿದರೆ ಅವು ಬರುವುದಿಲ್ಲ.
-
ಸೌತೆಕಾಯಿ ಅಂದರೆ ಜೀರಳೆಗೆ ಆಗದ ಕಾರಣ ಅದನ್ನು ಪೀಸ್ ಮಾಡಿ ಮೂಲೆಯಲ್ಲೆಲ್ಲಾ ಇಡಿ. ಇದರಿಂದ ಅವುಗಳ ಕಾಟ ತಪ್ಪುತ್ತದೆ.
-
ಬಿರಿಯಾನಿ ಎಲೆಯನ್ನು ಪುಡಿಮಾಡಿ ಮೂಲೆ ಮೂಲೆಗೂ ಸಿಂಪಡಿಸಿ. ಇದರಿಂದಲೂ ಜೀರಳೆ ಕಡಿಮೆಯಾಗುತ್ತದೆ.
-
ಬೆಳ್ಳುಳ್ಳಿ ಅಂದರೆ ಜೀರಳೆಗೆ ಆಗದ ಕಾರಣ ಬೆಳ್ಳುಳ್ಳಿ ರಸ ನೀರಲ್ಲಿ ಹಾಕಿ ಸ್ಪ್ರೇ ಮಾಡಿದರೆ ಅವು ಮನೆಯಿಂದ ಓಡಿಹೋಗುತ್ತವೆ.
ಇವುಗಳನ್ನು 3-4 ದಿನ ಮಾಡಬೇಕು. ಇದರಿಂದ ಜೀರಳೆ ಕಾಟ ತಪ್ಪುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ