Select Your Language

Notifications

webdunia
webdunia
webdunia
webdunia

ಕಣ್ಣಿನ ರೆಪ್ಪೆಗಳ ಮೇಲಿನ ಗುಳ್ಳೆಗಳು ನಿವಾರಣೆಯಾಗಲು ಹೀಗೆ ಮಾಡಿ

ಕಣ್ಣಿನ ರೆಪ್ಪೆಗಳ ಮೇಲಿನ ಗುಳ್ಳೆಗಳು ನಿವಾರಣೆಯಾಗಲು ಹೀಗೆ ಮಾಡಿ
ಬೆಂಗಳೂರು , ಗುರುವಾರ, 4 ಜನವರಿ 2018 (08:20 IST)
ಬೆಂಗಳೂರು : ಅತಿಯಾದ ಮೇಕಪ್ ವಸ್ತುಗಳನ್ನು ಬಳಸುವುದರಿಂದ ಹಾಗು ಅದನ್ನು ಸರಿಯಾಗಿ ಸ್ವಚ್ಚ ಮಾಡದೆ  ಇರುವುದರಿಂದ ಕಣ್ಣಿನಲ್ಲಿ ಗುಳ್ಳೆಗಳು, ಕಣ್ಣು ಊದಿಕೊಳ್ಳುವುದು, ಕೆಂಪಾಗುವುದು, ನೋವಾಗುವುದು., ಸರಿಯಾಗಿ ಕಾಣಿಸದಿರುವುದು ಮುಂತಾದ ಸಮಸ್ಯೆಗಳು ಉಂಟಾಗುತ್ತದೆ. ಇದನ್ನು ಮನೆಮದ್ದಿನಿಂದ ನಿವಾರಿಸಬಹುದು.

  1. ಪೇರಳೆ (ಸೀಬೆ) ಮರದ ಎಲೆ 5 ತೆಗೆದುಕೊಂಡು ಸ್ವಚ್ಚ ಮಾಡಿ ಅದಕ್ಕೆ ಸ್ವಲ್ಪ ನೀರು ಹಾಕಿ 15 ನಿಮಿಷ ಕುದಿಸಿ. ತಣ್ಣಗಾದ ಮೇಲೆ ಹತ್ತಿಯ ಬಟ್ಟೆಯಿಂದ ಅದ್ದಿ ಕಣ್ಣನ ಮೇಲೆ ಇಟ್ಟುಕೊಳ್ಳಿ. ಇದನ್ನು ದಿನಕ್ಕೆ 3-4 ಬಾರಿ ಮಾಡಿವುದರಿಂದ ಕಣ್ಣಿನ ಸಮಸ್ಯೆ ಕಡಿಮೆಯಾಗುತ್ತದೆ.
  2. ಒಂದು ಲೋಟ ನೀರಿಗೆ 3-4 ಲವಂಗ ಹಾಕಿ 15 ನಿಮಿಷ ನೆನೆಸಿಡಿ. ನಂತರ ಆ ನೀರಗೆ  ಹತ್ತಿಯ ಬಟ್ಟೆಯನ್ನು ಅದ್ದಿ ಕಣ್ಣನ ಮೇಲೆ ಇಟ್ಟುಕೊಳ್ಳಿ. ಹೀಗೆ ದಿನಕ್ಕೆ 2-3 ಬಾರಿ ಮಾಡಿದರೆ ಕಣ್ಣಿನ ಸಮಸ್ಯೆ ಮಾಯವಾಗುತ್ತದೆ.
  3. ½ ಲೋಟ ನೀರಿಗೆ 2 ಚಮಚ ಕೊತ್ತಂಬರಿ ಬೀಜಗಳನ್ನು ಹಾಕಿ 15-20 ನಿಮಿಷ ಕುದಿಸಿ. ನಂತರ ಒಂದು ಪಾತ್ರೆಗೆ ಹಾಕಿ ತಣ್ಣಗಾದ ಮೇಲೆ ಅದರಿಂದ ಮುಖವನ್ನು ತೊಳೆದುಕೊಳ್ಳಿ.  ಇದನ್ನು ಕೂಡ ದಿನಕ್ಕೆ 2-3 ಬಾರಿ ಮಾಡಿ. ಇದರಿಂದ 100% ಕಣ್ಣಿನ ಸಮಸ್ಯೆ ದೂರವಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಎಲ್ಲಾ ಬೆನ್ನು ನೋವಿಗೂ ಬಿಸಿ ನೀರಿನ ಶಾಖವೇ ಪರಿಹಾರವಲ್ಲ!