Webdunia - Bharat's app for daily news and videos

Install App

ಮಟನ್ ಮಸಾಲಾ ಗ್ರೇವಿ

ಅತಿಥಾ
ಮಂಗಳವಾರ, 9 ಜನವರಿ 2018 (18:35 IST)
ಬೇಕಾಗುವ ಸಾಮಾಗ್ರಿಗಳು: 
 
ಕುರಿಮಾಂಸ- ಅರ್ಧ ಕೇಜಿ (ಚಿಕ್ಕ ತುಂಡುಗಳನ್ನಾಗಿಸಿ, ಚೆನ್ನಾಗಿ ತೊಳೆದು ನೀರು ಬಸಿದಿರುವುದು) 
ಬೆಣ್ಣೆ- ಅರ್ಧ ಕಪ್ (ಉಪ್ಪಿಲ್ಲದ ಬೆಣ್ಣೆ ಉತ್ತಮ) 
ಗರಂ ಮಸಾಲಾ ಪುಡಿ- ಒಂದು ಚಿಕ್ಕ ಚಮಚ 
ಧನಿಯ ಪುಡಿ - ಒಂದು ಚಿಕ್ಕ ಚಮಚ 
ಕೆಂಪು ಮೆಣಸಿನ ಪುಡಿ - ಒಂದು ಚಿಕ್ಕ ಚಮಚ 
ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ - ಒಂದು ಚಿಕ್ಕ ಚಮಚ 
ಹಸಿಮೆಣಸು - 5 ರಿಂದ 6
ಹೆಚ್ಚಿದ ಈರುಳ್ಳಿ- 1 ಕಪ್
ಲಿಂಬೆ ರಸ- ಒಂದು ಚಿಕ್ಕ ಚಮಚ 
ಎಣ್ಣೆ ಅಗತ್ಯಕ್ಕೆ ತಕ್ಕಂತೆ
ಉಪ್ಪು
ಕೊತ್ತಂಬರಿ ಸೊಪ್ಪು
ತಯಾರಿಸುವ ವಿಧಾನ:
 
- ಒಂದು ಪಾತ್ರೆಯಲ್ಲಿ ಗರಂ ಮಸಾಲಾ ಪುಡಿ, ಧನಿಯ ಪುಡಿ, ಮೆಣಸಿನ ಪುಡಿ, ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. 
 
- ಪ್ರೆಶರ್ ಕುಕ್ಕರ್ ಅನ್ನು ಕೊಂಚ ಬಿಸಿ ಮಾಡಿ ಇದರಲ್ಲಿ ಬೆಣ್ಣೆ ಹಾಕಿ. ಬೆಣ್ಣೆ ಕರಗಿದ ಬಳಿಕ ಈರುಳ್ಳಿ ಹಾಕಿ ಮಧ್ಯಮ ಉರಿಯಲ್ಲಿ ಕಂದು ಬಣ್ಣ ಬರುವವರೆಗೆ ತಿರುವಿ. ಬಳಿಕ ಹಸಿಮೆಣಸು ಹಾಕಿ ಕೊಂಚ ಹುರಿಯಿರಿ 
 
- ಈರುಳ್ಳಿ ಬೆಂದು ಎಣ್ಣೆ ಬಿಡುವ ವೇಳೆಗೆ ಕುರಿಮಾಂಸ ಹಾಕಿ ನಿಧಾನವಾಗಿ ತಿರುವುತ್ತಾ ಹುರಿಯಿರಿ. 
 
- ಮಸಾಲೆ ಕುರಿಮಾಂಸಕ್ಕೆ ಅಂಟಿದೆ ಎಂದು ಖಚಿತವಾದ ಬಳಿಕ ಪಾತ್ರೆಯಲ್ಲಿ ಮಿಶ್ರಣ ಮಾಡಿದ್ದ ಮಸಾಲೆಯನ್ನು ಹಾಕಿ ತಿರುವಿ. 
 
- ಕುರಿಮಾಂಸ ಸರಿಸುಮಾರು ಮುಕ್ಕಾಲು ಪಾಲು ಬೆಂದಿದೆ ಅನ್ನಿಸಿದ ಬಳಿಕ ಕೊಂಚ ಉಪ್ಪು, ಲಿಂಬೆರಸ ಹಾಕಿ ಅಗತ್ಯವಿರುವಷ್ಟು ನೀರು ಸೇರಿಸಿ ಕುದಿಯಲು ಪ್ರಾರಂಭಿಸಿದ ಬಳಿಕ ಕುಕ್ಕರಿನ ಮುಚ್ಚಳ ಮುಚ್ಚಿ ಐದರಿಂದ ಆರು ಸೀಟಿ ಬರುವವರೆಗೆ ಬೇಯಿಸಿ. (ಕುರಿಮಾಂಸ ಎಳೆಯದಾಗಿದ್ದರೆ ಮಾತ್ರ, ಕೊಂಚ ಬಲಿತದ್ದು ಅನ್ನಿಸಿದರೆ ಹತ್ತು ಸೀಟಿಗಳಾದರೂ ಬೇಕು)
 
-  ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಬಿಸಿಬಿಸಿಯಾಗಿದ್ದಂತೆಯೇ ಅನ್ನ ಅಥವಾ ರೊಟ್ಟಿ, ಚಪಾತಿಗಳೊಂದಿಗೆ ಸೇವಿಸಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

ಮುಂದಿನ ಸುದ್ದಿ
Show comments