Publish Date: Tue, 09 Jan 2018 (17:55 IST)
Updated Date: Tue, 09 Jan 2018 (19:50 IST)
ಬೇಕಾಗುವ ಸಾಮಾಗ್ರಿಗಳು-
ಅಂಜಲ್ (4-5 ಪೀಸ್)
ಖಾರದ ಪುಡಿ 2 ಚಮಚ
ಉಪ್ಪು 1 ಚಮಚ
1/4 ಚಮಚ ಅರಿಶಿಣ ಪುಡಿ
ನಿಂಬೆ ಹಣ್ಣಿನ ಗಾತ್ರದಷ್ಟು ಹುಣಸೆ ಹಣ್ಣು
ಸ್ವಲ್ಪ ರವೆ
ಶುಂಠಿ ಬೆಳ್ಳುಳ್ಳಿ ಪೇಸ್ಟ್ 1 ಚಮಚ
ಎಣ್ಣೆ
ಮಾಡುವ ವಿಧಾನ-
* ಅಂಜಲ್ ತುಂಡುಗಳನ್ನು ಚೆನ್ನಾಗಿ ತೊಳೆಯಿರಿ.
* ಒಂದು ಬಟ್ಟಲಿಗೆ ಅರಿಶಿಣ ಪುಡಿ, ಖಾರದ ಪುಡಿ, ಉಪ್ಪು, ಹುಣ್ಣಿಸೆ ಹಣ್ಣಿನ ರಸ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಕಲೆಸಿ. (ಮಿಶ್ರಣ ಪೇಸ್ಟ್ ರೀತಿಯಲ್ಲಿರಲಿ, ತುಂಬಾ ನೀರು ಮಾಡಬೇಡಿ).
* ಈಗ ಮೀನಿನ ತುಂಡುಗಳಿಗೆ ಆ ಖಾರದ ಮಿಶ್ರಣವನ್ನು ಲೇಪಿಸಿ 23-30 ನಿಮಿಷಗಳ ನಂತರ ತವಾವನ್ನು ಬಿಸಿ ಮಾಡಿ ಅದಕ್ಕೆ ಎರಡರಿಂದ 3 ಚಮಚ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಮೀನಿನ ತುಂಡುಗಳನ್ನು ರವೆಯಲ್ಲಿ ಅದ್ದಿ ತವಾಗೆ ಹಾಕಿ. ಕಡಿಮೆ ಉರಿಯಲ್ಲಿ 10 ನಿಮಿಷ ಬೇಯಿಸಿ, ನಂತರ ಸೌಟ್‌ನಿಂದ ಮಗುಚಿ ಹಾಕಿ ಮತ್ತೊಂದು ಬದಿಯನ್ನು 10 ನಿಮಿಷ ಬೇಯಿಸಿದರೆ ಅಂಜಲ್ ಮೀನಿನ ಫ್ರೈ ರೆಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.