Publish Date: Thu, 04 Jan 2018 (07:33 IST)
Updated Date: Thu, 04 Jan 2018 (07:40 IST)
ನವದೆಹಲಿ : ಟೀ ಇಂಡಿಯಾದ ಮಾಜಿ ಆಟಗಾರರಾದ ಸಚಿನ್ ತೆಂಡುಲ್ಕರ್ ಅವರು ಹೊಸವರ್ಷದ ಸಂಭ್ರಮಾಚರಣೆಯನ್ನು ಬಹಳ ವಿಭಿನ್ನ ರೀತಿಯಲ್ಲಿ ಆಚರಿಸಿದ್ದಾರೆ. ಅದೇನೆಂದರೆ ಅವರು ಹೊಸ ವರ್ಷದ ದಿನ ತಮ್ಮ ಗೆಳೆಯರಿಗೆ ತಾವೆ ಅಡುಗೆ ತಯಾರಿಸಿ ಬಡಿಸಿದ್ದಾರೆ.
ಅವರು ತಾವು ಅಡುಗೆ ಮಾಡುತ್ತಿರುವ ವಿಡಿಯೋವನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋ ಈಗ ವೈರಲ್ ಆಗಿದೆ. ಹೊಸ ವರ್ಷದ ದಿನದಂದು ಗೆಳೆಯರಿಗೆ ಅಡುಗೆ ತಯಾರಿಸಿದ್ದು ತಮಗೆ ಸಂತೋಷವನ್ನುಂಟುಮಾಡಿದೆ. ಹಾಗೆ ತಾನು ತಯಾರಿಸದ ಆಹಾರವನ್ನು ತಮ್ಮ ಬೆರಳಿನ ಮೂಲಕ ಟೇಸ್ಟ್ ಮಾಡುತ್ತಿರುವುದು ಕೂಡ ಖುಷಿಯನಿಸುತ್ತಿದೆ ಎಂದು ತಮ್ಮ ಟ್ವೀಟರ್ ನಲ್ಲಿ ಸಚಿನ್ ಅವರು ಬರೆದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ