Webdunia - Bharat's app for daily news and videos

Install App

ತಲೆನೋವು ಎನ್ನುವವರು ಈ ಸುಲಭ ಮನೆ ಮದ್ದುಗಳನ್ನು ಮಾಡಿ..!!

ನಾಗಶ್ರೀ ಭಟ್
ಮಂಗಳವಾರ, 9 ಜನವರಿ 2018 (18:06 IST)
ಯಾವಾಗಲೂ ತಲೆನೋವು ಬರುತ್ತಿದ್ದರೆ ಅದಕ್ಕಾಗಿ ಪದೇ ಪದೇ ಮಾತ್ರೆಯನ್ನು ತೆಗೆದುಕೊಂಡು ಆರೋಗ್ಯವನ್ನು ಹಾಳುಮಾಡಿಕೊಳ್ಳುವ ಬದಲು ಮನೆಯಲ್ಲಿಯೇ ಕೆಲವು ಔಷಧಗಳನ್ನು ನೀವು ಒಮ್ಮೆ ಮಾಡಿ ನೋಡಬಹುದು.

ಅತಿಯಾದ ಕೆಲಸದ ಒತ್ತಡ, ಹೆಚ್ಚಾಗಿ ಕಂಪ್ಯೂಟರ್ ಮುಂದೆ ಕುಳಿತು ಮಾಡುವ ಕೆಲಸ, ಅತಿಯಾದ ಮೊಬೈಲ್ ಬಳಕೆ ಮತ್ತು ಇನ್ನಿತರ ಕಾರಣಗಳಿಂದ ಕಾಣಿಸಿಕೊಳ್ಳುವ ತಲೆ ನೋವುಗಳಿಗೆ ನೀವೇ ಔಷಧಿ ಮಾಡಿಕೊಳ್ಳಬಹುದು. ಹೇಗೆ ಮತ್ತು ಅವು ಯಾವುವು ಎಂಬುದನ್ನು ತಿಳಿದುಕೊಳ್ಳಲು ಈ ಕೆಳಗಿನ ಸಲಹೆಗಳನ್ನು ನೋಡಿ.
 
1. ಶುಂಠಿ
ಶುಂಠಿ ತಲೆಯಲ್ಲಿನ ರಕ್ತನಾಳಗಳ ಉರಿಯೂತವನ್ನು ತಗ್ಗಿಸಲು ಸಹಾಯ ಮಾಡುವುದರಿಂದ ತಲೆನೋವನ್ನು ನಿವಾರಿಸುತ್ತದೆ.
 
* ದಿನವೂ 2 ರಿಂದ 3 ಬಾರಿ 2 ಚಮಚ ಶುಂಠಿ ರಸ ಮತ್ತು 2 ಚಮಚ ನಿಂಬೆ ರಸವನ್ನು ಮಿಕ್ಸ್ ಮಾಡಿ ಕುಡಿಯಿರಿ.
* 1 ಚಮಚ ಶುಂಠಿ ಪುಡಿ ಮತ್ತು 2 ಚಮಚ ನೀರನ್ನು ಮಿಕ್ಸ್ ಮಾಡಿ ಆ ಪೇಸ್ಟ್ ಅನ್ನು ಕೆಲವು ನಿಮಿಷಗಳವರೆಗೆ ಹಣೆಗೆ ಹಚ್ಚಿಕೊಳ್ಳಿ.
* ಶುಂಠಿಯನ್ನು ಜಜ್ಜಿ ಅದನ್ನು ನೀರಿನಲ್ಲಿ ಕುದಿಸಿ ಅದರ ಆವಿಯನ್ನು ತೆಗೆದುಕೊಳ್ಳಿ.
 
2. ಪುದೀನಾ ಎಲೆ
ಮೆನ್ಥೋಲ್ ಮತ್ತು ಮೆನ್ಟೋನ್‍‌ಗಳು ಪುದೀನದ ಪ್ರಾಥಮಿಕ ಅಂಶಗಳಾಗಿವೆ. ಅವು ತಲೆನೋವನ್ನು ನಿವಾರಿಸಲು ಬಹಳ ಪರಿಣಾಮಕಾರಿಯಾಗಿದೆ.
* ಒಂದು ಹಿಡಿ ಪುದೀನದ ಎಲೆಗಳನ್ನು ತೆಗೆದುಕೊಂಡು ಅದರ ರಸವನ್ನು ತೆಗೆದು ಹಣೆಯಮೇಲೆ ಹಚ್ಚಿಕೊಳ್ಳಿ.
 
3. ಪುದೀನಾ ಎಣ್ಣೆ
 
* 3-4 ಹನಿ ಪುದೀನಾ ಎಣ್ಣೆಯನ್ನು 1 ಚಮಚ ಆಲಿವ್ ಎಣ್ಣೆ ಅಥವಾ ಬಾದಾಮಿ ಎಣ್ಣೆ ಅಥವಾ ನೀರಿನೊಂದಿಗೆ ಬೆರೆಸಿಕೊಂಡು ಹಣೆಗೆ ಮಸಾಜ್ ಮಾಡಿಕೊಳ್ಳಿ.
* ಒಂದು ಬೌಲ್ ಕುದಿಯುವ ನೀರಿಗೆ 3-4 ಹನಿ ಪುದೀನಾ ಎಣ್ಣೆಯನ್ನು ಹಾಕಿ ಅದರ ಆವಿಯಲ್ಲಿ ಉಸಿರನ್ನು ದೀರ್ಘವಾಗಿ ತೆಗೆದುಕೊಳ್ಳುತ್ತಿರಬೇಕು.
 
4. ತುಳಸಿ
ತುಳಸಿ ಉದ್ವಿಘ್ನ ಸ್ನಾಯುಗಳ ಮೂಲಕ ಉಂಟಾಗುವ ಸೌಮ್ಯವಾದ ತಲೆನೋವುಗಳಿಗೆ ಸಹಾಯಕವಾಗುವ ರೀತಿಯಲ್ಲಿ ಚಿಕಿತ್ಸೆಯನ್ನು ನೀಡುತ್ತದೆ. ಜೊತೆಗೆ, ಇದು ಶಾಂತಗೊಳಿಸುವ ಮತ್ತು ನೋವುನಿವಾರಕ ಪರಿಣಾಮಗಳನ್ನು ಹೊಂದಿದೆ.
 
* ಒಂದು ಲೋಟ ನೀರಿಗೆ 5-6 ತುಳಸಿ ಎಲೆಗಳನ್ನು ಹಾಕಿ ಕುದಿಸಿ ಅದಕ್ಕೆ ಸ್ವಲ್ಪ ಜೇನನ್ನು ಸೇರಿಸಿ ಕುಡಿಯಿರಿ.
* 7-8 ಜಜ್ಜಿದ ತುಳಸಿ ಎಲೆಗಳು ಅಥವಾ 2-3 ಹನಿ ತುಳಸಿ ಎಣ್ಣೆಯನ್ನು ಕುದಿಯುವ ನೀರಿಗೆ ಹಾಕಿ ಅದರ ಆವಿಯನ್ನು ತೆಗೆದುಕೊಳ್ಳಬೇಕು.
* 3-4 ತಾಜಾ ತುಳಸಿ ಎಲೆಗಳನ್ನು ಅಗಿಯಿರಿ ಮತ್ತು ತುಳಸಿ ಎಣ್ಣೆಗೆ ತೆಂಗಿನೆಣ್ಣೆಯನ್ನು ಮಿಕ್ಸ್ ಮಾಡಿ ಅದನ್ನು ಹಣೆಗೆ ಮಸಾಜ್ ಮಾಡಿ.
 
5. ಐಸ್ ಪ್ಯಾಕ್
ಐಸ್‌ನ ತಂಪು ಉರಿಯೂತಗಳಿಂದ ಉಂಟಾಗುವ ತಲೆನೋವನ್ನು ಕಡಿಮೆ ಮಾಡುತ್ತದೆ.
 
* ಐಸ್ ಪ್ಯಾಕ್ ಅನ್ನು ಕತ್ತಿನ ಹಿಂಭಾಗದಲ್ಲಿ ಇಟ್ಟುಕೊಂಡರೆ ಅದು ನಿಮಗೆ ಮೈಗ್ರೇನ್ ತಲೆ ನೋವಿನಿಂದ ಮುಕ್ತಿ ನೀಡುತ್ತದೆ.
* ಕೆಲವು ನಿಮಿಷಗಳವರೆಗೆ ಐಸ್ ನೀರಿನಲ್ಲಿ ಅದ್ದಿದ ಟವಲ್ ಅನ್ನು ತಲೆಯಮೇಲೆ ಇರಿಸಿಕೊಳ್ಳಿ ಮತ್ತ ಇದನ್ನು ಹಲವು ಬಾರಿ ಮಾಡಿ.
 
ಈ ಸರಳ ಉಪಾಯಗಳನ್ನು ನೀವೂ ಪ್ರಯತ್ನಿಸಿ ನೋಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ
Show comments