Select Your Language

Notifications

webdunia
webdunia
webdunia
webdunia

ಮಾವಿನಕಾಯಿ ಪಲಾವ್ ಹೀಗೆ ಮಾಡಿ

ಮಾವಿನಕಾಯಿ ಪಲಾವ್ ಹೀಗೆ ಮಾಡಿ
ಬೆಂಗಳೂರು , ಮಂಗಳವಾರ, 2 ಜೂನ್ 2020 (19:32 IST)
ಮಾವಿನಕಾಯಿ ಎಂದರೆ ಬಾಯಲ್ಲಿ ನೀರು ಬರದೇ ಇರೋದಿಲ್ಲ. ಮಾವಿನ ರಾಜ ಮಾವಿನಕಾಯಿಯನ್ನು ಬಳಸಿ ಪಲಾವ್ ಮಾಡೋ ಟಿಪ್ಸ್ ಇಲ್ಲಿದೆ.

ಏನೇನ್ ಬೇಕು?
ಮಾವಿನಕಾಯಿ 4
ಬಾಸುಮತಿ ಅಕ್ಕಿ ಮುಕ್ಕಾಲು ಕಿಲೋ
ತೆಂಗಿನ ಕಾಯಿ ತುರಿ 2 ಬಟ್ಟಲು
ಸಾಸಿವೆ
ಉದ್ದಿನಬೇಳೆ ಒಂದು ಟೀ ಚಮಚೆ
ಒಣಮೆನಸಿನಾಯಿ 6
ತುಪ್ಪ 2 ಬಟ್ಟಲು
ಗೋಡಂಬಿ ಒಂದು ಬಟ್ಟಲು
ದ್ರಾಕ್ಷಿ ಅರ್ಧ ಬಟ್ಟಲು
ಅರಿಷಿಣಪುಡಿ
ಉಪ್ಪು

ಮಾಡೋದು ಹೇಗೆ?: ಉದುರು ಅನ್ನ ಮಾಡಿ ಮಾವಿನಕಾಯಿ ಸಿಪ್ಪೆ ತೆಗೆದು ತುರಿ ಮಾಡಬೇಕು. ತುಪ್ಪ ಹಾಕಿ ಸಾಸಿವೆ, ಉದ್ದಿನಬೇಳೆ, ಮೆಣಸಿನಕಾಯಿ ಹಾಕಿ ಹುರಿದುಕೊಳ್ಳಿ. ಇದಕ್ಕೆ ಮಾವಿನ ತುರಿ ಹಾಕಿ ಮೆತ್ತಗೆ ಆಗೋವರೆಗೂ ಬೇಯಿಸಬೇಕು. ದ್ರಾಕ್ಷಿ, ಗೋಂಡಬಿ, ಅರಿಷಿನ, ಉಪ್ಪು, ತೆಂಗಿನತುರಿ ಹಾಕಿ 2 ನಿಮಿಷ ಬೇಯಿಸಬೇಕು. ಅನ್ನ ಬೆರೆಸಿ ಮತ್ತೆ ಐದು ನಿಮಿಷ ಒಲೆಯ ಮೇಲಿಟ್ಟು ಕಲಿಸಿ ಉಪಯೋಗಿಸಿ.

 

Share this Story:

Follow Webdunia kannada

ಮುಂದಿನ ಸುದ್ದಿ

ಕಣ್ಣಿನ ಸುತ್ತ ಕಪ್ಪು ನಿವಾರಣೆಗೆ ಸಿಂಪಲ್ ಮನೆ ಮದ್ದು