Publish Date: Fri, 15 May 2020 (17:14 IST)
Updated Date: Fri, 15 May 2020 (17:16 IST)
ಹಣ್ಣುಗಳ ರಾಜ ಮಾವು… ಸದ್ಯ ಮಾವಿನ ಕಾಲ. ತರಹೇವಾರಿ ರುಚಿಯುಳ್ಳ ಮಾವು ಸವಿಯುವ ಸಮಯ. ಮ್ಯಾಂಗೋ ರುಚಿಗೆ ಮಾರುಹೋಗದವರೇ ಇಲ್ಲ. ಮಾವಿನ ತಿಂಡಿಗಳು, ಉಪ್ಪಿನಕಾಯಿ ಸೇರಿದಂತೆ ಮಾವಿನಿಂದ ತಯಾರಾಗುವ ಎಲ್ಲ ತಿನಿಸುಗಳು ಬಾಯಲ್ಲಿ ನೀರೂರಿಸುತ್ತವೆ.
ಇದೀಗ ಕೊಪ್ಪಳ ಹೆಸರಲ್ಲೇ ಮಾವು ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಕೊಪ್ಪಳ ಜಿಲ್ಲಾಡಳಿತ, ತೋಟಗಾರಿಕೆ ಇಲಾಖೆ, ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮಾರಾಟ ನಿಗಮ ಇವರ ಸಹಯೋಗದಲ್ಲಿ ನೈಸರ್ಗಿಕ ಮತ್ತು ವೈಜ್ಞಾನಿಕ ಮಾಗಿಸಿದ ಹಣ್ಣುಗಳಿಗೆ ‘ಕೊಪ್ಪಳ ಮಾವು’ ಶೀರ್ಷಿಕೆಯಡಿ ಮಾವು ಬಾಕ್ಸ್ ಮಾರಾಟಕ್ಕೆ ಚಾಲನೆ ನೀಡಲಾಯಿತು.
ಉಪ್ಪಿನಕಾಯಿ ಮಾವು ಹಾಗೂ ಹಣ್ಣಿನ ಮಾವು ಬಾಕ್ಸ್ ಗಳನ್ನು ಪ್ರತ್ಯೇಕ ವಾಗಿ ಪ್ರದರ್ಶನ ಮಾಡಿ ಉದ್ಘಾಟಿಸಲಾಯಿತು. ಉಪ್ಪಿನಕಾಯಿ ಬಾಕ್ಸ್ 2.5 ಕೆ.ಜಿ ಒಂದಕ್ಕೆ ರೂ.100 ಹಾಗೂ ಮಾವಿನ ಹಣ್ಣಿನ 2.5 ಕೆಜಿ ಬಾಕ್ಸ್ ಗೆ ರೂ.250 ಬೆಲೆ ನಿಗದಿ ಪಡಿಸಲಾಗಿದೆ. ನೇರವಾಗಿ ಗ್ರಾಹಕರ ಮನೆಗೆ ತಲುಪಲಿದೆ.