Select Your Language

Notifications

webdunia
webdunia
webdunia
webdunia

ಮಾವಿನ ಹಣ್ಣಿನಿಂದ ಕೊರೊನಾ ಬರುತ್ತೆ ಎಂದ ಸಚಿವ

ಮಾವಿನ ಹಣ್ಣಿನಿಂದ ಕೊರೊನಾ ಬರುತ್ತೆ ಎಂದ ಸಚಿವ
ಮಂಡ್ಯ , ಶುಕ್ರವಾರ, 29 ಮೇ 2020 (12:43 IST)
ಮಾವಿನ ಹಣ್ಣು ಮತ್ತು ಕೊರೊನಾ ಕುರಿತು ಸಚಿವರೊಬ್ಬರು ನೀಡಿರುವ ಹೇಳಿಕೆ ಚರ್ಚೆಗೆ ಕಾರಣವಾಗುತ್ತಿದೆ.

ಮಾವಿನ ಹಣ್ಣಿನಿಂದ ಕೊರೊನಾ ಬರೋದಿಲ್ಲ. ಮಾವಿನ ಹಣ್ಣು ತಿನ್ನೋದ್ರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಮಂಡ್ಯದಲ್ಲಿ ಆಡಿದ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ.

ಕೆ ಆರ್ ಪೇಟೆ ತಾಲೂಕಿನ ಮರುವನಹಳ್ಳಿಯನ್ನು ಸೀಲ್ ಡೌನ್ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಸುಮಾರು 14 ಜನ ಸೇರಿ ಅಲ್ಲಿ ಮೀಟಿಂಗ್ ಮಾಡಿದ್ದರು. ಈ  ವೇಳೆ ಮಾವಿನ ಹಣ್ಣನ್ನು ಕಟ್ ಮಾಡಿ ಹಂಚಿಕೊಂಡು ತಿಂದಿದ್ದರು. ಇದರಿಂದಾಗಿ ಅವರೆಲ್ಲರಿಗೂ ಪರಸ್ಪರ ಸೋಂಕು ಹರಡಿರಬಹುದು ಎಂದು ಕ್ವಾರಂಟೈನ್ ಮಾಡಿದ್ದೇವೆ ಎಂದು ಹೇಳಿಕೆ ನೀಡಿದ್ದೆ ಅಷ್ಟೆ.

ಮಾವಿನ ಹಣ್ಣಿನಿಂದ ಕೊರೊನಾ ವೈರಸ್ ಬರಲ್ಲ. ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸಚಿವ ನಾರಾಯಣಗೌಡ ಸ್ಪಷ್ಟನೆ ನೀಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ವಾರಿಯರ್ ಮೇಲೆ ಹಲ್ಲೆ : ಮಾಂಗಲ್ಯ ಸರ ಕಳೆದುಕೊಂಡ ಆಶಾ