Select Your Language

Notifications

webdunia
webdunia
webdunia
webdunia

ಮುಂಬೈ ಮಾರಿಗೆ ಒಂದೇ ದಿನ 28 ಕೇಸ್ : ಬೆಚ್ಚಿದ ಕಲಬುರಗಿ

ಮುಂಬೈ ಮಾರಿಗೆ ಒಂದೇ ದಿನ 28 ಕೇಸ್ : ಬೆಚ್ಚಿದ ಕಲಬುರಗಿ
ಕಲಬುರಗಿ , ಬುಧವಾರ, 27 ಮೇ 2020 (16:34 IST)
ಮುಂಬೈ ಮಾರಿ ಕೊರೊನಾ ವೈರಸ್ ಗೆ ಕಲಬುರಗಿಯಲ್ಲಿ ಆತಂಕ ಹೆಚ್ಚುವಂತೆ ಮಾಡಿದೆ.

ಮಹಾರಾಷ್ಟ್ರದ ವಿವಿಧ ಭಾಗಗಳಿಂದ ಕಲಬುರಗಿಗೆ ಬಂದವರಲ್ಲಿ ಒಂದೇ ದಿನ 28 ಜನರಲ್ಲಿ ಕೋವಿಡ್ -19 ದೃಢಪಟ್ಟಿವೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.

ಹೊಸದಾಗಿ ಕೊರೊನಾ ವೈರಸ್ ಕಂಡು ಬರುತ್ತಿರುವುದು ಮಹಾರಾಷ್ಟ್ರದಿಂದ ಬಂದವರಲ್ಲೇ ಹೆಚ್ಚುತ್ತಿದೆ.
ಈ ನಡುವೆ, ಕಲಬುರಗಿ‌ ಜಿಲ್ಲೆಯಲ್ಲಿ ಇಬ್ಬರು 80 ವರ್ಷದ ಹಿರಿಯ ಜೀವಿಗಳು ಕೊರೋನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ಇದರಿಂದ ಕೊರೋನಾ‌ ಪೀಡಿತ 185 ಜನರಲ್ಲಿ 75 ಜನ ಗುಣಮುಖರಾಗಿದ್ದಾರೆ. 7 ಜನ‌ ನಿಧನ ಹೊಂದಿದ್ದು, 103 ಜನರಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ಡಿ.ಸಿ. ಶರತ್ ಬಿ. ವಿವರಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಶುರು