Select Your Language

Notifications

webdunia
webdunia
webdunia
webdunia

ಮೊದಲ ಸಲ ಈ ಜಿಲ್ಲೆಯಲ್ಲಿ ಸಿಕ್ತು ಕೊರೊನಾ

ಮೊದಲ ಸಲ ಈ  ಜಿಲ್ಲೆಯಲ್ಲಿ ಸಿಕ್ತು ಕೊರೊನಾ
ರಾಮನಗರ , ಸೋಮವಾರ, 25 ಮೇ 2020 (21:03 IST)
ರಾಜ್ಯದ ಈ ಜಿಲ್ಲೆಯಲ್ಲಿ ಮೊದಲ ಸಲ ಕೊರೊನಾ ವೈರಸ್ ಕೇಸ್ ಸಿಕ್ಕಿದೆ.

ರಾಮನಗರ ಜಿಲ್ಲೆಯಲ್ಲಿ ಮೊದಲ  ಕರೋನಾ (ಕೊವಿಡ್-19) ಪ್ರಕರಣ ದಾಖಲಾಗಿದೆ. ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಿಂದ ಬಿಡುಗಡೆ ಮಾಡಿರುವ ವರದಿಯಲ್ಲಿ ಜಿಲ್ಲೆಯಲ್ಲಿ ಒಂದು ಕೊರೋನಾ ಪಾಸಿಟೀವ್ ಪ್ರಕರಣ ದೃಡಪಟ್ಟಿದೆ ಎಂದು ನಮೂದಿಸಲಾಗಿದೆ.

ಇದುವರೆಗೆ  ಜಿಲ್ಲೆಯಲ್ಲಿ ನಿಗಾಕ್ಕೆ ಒಳಗಾದವರ ಒಟ್ಟು ಸಂಖ್ಯೆ 3399 (ಹೊಸದಾಗಿ ಇಂದಿನ 66 ಸೇರಿ).  28 ದಿನಗಳ ನಿಗಾ ಅವಧಿ ಪೂರೈಸಿದವರು 1006 ಜನರಿದ್ದಾರೆ. 14 ದಿನಗಳ ನಿಗಾ ಅವಧಿ ಪೂರೈಸಿದವರು 1040 ಜನರಾಗಿದ್ದಾರೆ. ಮನೆಯಲ್ಲಿಯೇ ಪ್ರತ್ಯೇಕ ನಿಗಾದಲ್ಲಿರುವವರ 946 ಜನರಾಗಿದ್ದಾರೆ. (ಹೊಸದಾಗಿ ಇಂದಿನ 35 ಜನ).

ಜ್ವರ ತಪಾಸಣಾ ಕೇಂದ್ರದಲ್ಲಿ 26 ಜನರು ತಪಾಸಣೆಗೆ ಒಳಗಾಗಿದ್ದಾರೆ, ಒಟ್ಟಾರೆಯಾಗಿ  1479 ಮಂದಿ ತಪಾಸಣೆ ಮಾಡಿಸಿಕೊಂಡಿದ್ದಾರೆ. ಇಬ್ಬರು ಸೌಲಭ್ಯದೊಂದಿಗೆ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ನಿಗಾದಲ್ಲಿದ್ದಾರೆ. ಇನ್ಸಟ್ಯೂಷನಲ್ ಕ್ವಾರಂಟೈನ್ ಗೆ 23 ಜನ ಸೇರ್ಪಡೆಯಾಗುವುದರೊಂದಿಗೆ ಒಟ್ಟಾರೆ ಸಂಖ್ಯೆ 283 ಕ್ಕೆ ಏರಿಕೆಯಾಗಿದೆ.  




Share this Story:

Follow Webdunia kannada

ಮುಂದಿನ ಸುದ್ದಿ

ಆರಂಭದ ದಿನವೇ 80 ವಿಮಾನಗಳ ಹಾರಾಟ ಕ್ಯಾನ್ಸಲ್