Publish Date: Mon, 25 May 2020 (19:01 IST)
Updated Date: Mon, 25 May 2020 (19:02 IST)
ಕೋವಿಡ್ -19 ತಡೆಗಾಗಿ ಜಾರಿಮಾಡಿರುವ 4ನೇ ಹಂತದ ಲಾಕ್ ಡೌನ್ ಸಡಿಲಿಕೆ ನಂತರ ಆರಂಭಗೊಂಡಿದ್ದ ವಿಮಾನ ಸಂಚಾರಕ್ಕೆ ಆರಂಭದ ದಿನವೇ ವಿಘ್ನಗಳು ಎದುರಾಗಿವೆ.
ಹಲವು ಕಾರಣಗಳಿಂದಾಗಿ ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣಕ್ಕೆ ಬಂದು ಹೋಗಬೇಕಿದ್ದ 80 ವಿಮಾನಗಳ ಸಂಚಾರ ರದ್ದುಗೊಂಡಿದೆ.
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೂ 9 ವಿಮಾನಗಳ ಹಾರಾಟ ಕ್ಯಾನ್ಸಲ್ ಆಗಿವೆ. ವಿವಿಧ ರಾಜ್ಯ ಸರಕಾರಗಳ ನಿರ್ಭಂದ ಮುಂದುವರಿಕೆ, ವಿಮಾನ ನಿಲ್ದಾಣ ತೆರೆಯುವುದಕ್ಕೆ ಮುಂದೂಡಿಕೆ ಮಾಡಿದ್ದು ಸೇರಿದಂತೆ ಹಲವು ಕಾರಣಗಳಿಂದ ವಿಮಾನ ಹಾರಾಟ ರದ್ದುಗೊಂಡಂತಾಗಿದೆ.