Select Your Language

Notifications

webdunia
webdunia
webdunia
webdunia

ಎಲ್ಲಾ ರೀತಿಯ ವ್ಯಾಪಾರ, ವಹಿವಾಟು ಶುರು

ಎಲ್ಲಾ ರೀತಿಯ ವ್ಯಾಪಾರ, ವಹಿವಾಟು ಶುರು
ಕಲಬುರಗಿ , ಸೋಮವಾರ, 25 ಮೇ 2020 (12:53 IST)
ಕೋವಿಡ್-19 ಸೋಂಕು ಕುರಿತು ರ್ಯಾಂಡಮ್ ಮಾದರಿ ಪರೀಕ್ಷೆಯನ್ನು ತ್ವರಿತವಾಗಿ ಮುಗಿಸಿ, ಇದೇ 31ರ ನಂತರ ವ್ಯಾಪಾರ-ವಹಿವಾಟಿಗೆ ಪೂರಕ ವಾತಾವರಣ ಕಲ್ಪಿಸಲಾಗುವುದು.

ಹೀಗಂತ ಕಲಬುರಗಿ ಜಿಲ್ಲಾಧಿಕಾರಿ ಶರತ್. ಬಿ ಹೇಳಿದ್ದಾರೆ.

ಕಲಬುರಗಿ ಜಿಲ್ಲೆಯಲ್ಲಿ ಅಂಗಡಿ-ಮುಂಗಟ್ಟು ತೆರೆಯುವ ಸಂಬಂಧ ಚರ್ಚಿಸಲು ಕರೆದಿದ್ದ ಎಫ್‍ಕೆಸಿಸಿಐ ಮತ್ತು ವಿವಿಧ ವರ್ತಕರ ಸಭೆಯಲ್ಲಿ ಮಾತನಾಡಿದರು.

ಎಫ್‍ಕೆಸಿಸಿಐ ಅಧ್ಯಕ್ಷ ಅಮರ್‍ನಾಥ್ ಪಾಟೀಲ್, ವರ್ತಕರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಬಗ್ಗೆ ಸಭೆಯ ಗಮನ ಸೆಳೆದರು. 30 ಸಾವಿರಕ್ಕೂ ಹೆಚ್ಚು ನೌಕರರು ಈ ವಲಯದಲ್ಲಿದ್ದು, ಅವರಿಗೆ ವೇತನ ನೀಡಬೇಕು. ಜೊತೆಗೆ ಸ್ಟಾಕ್ ಇರುವ ಪದಾರ್ಥ ಮುಂತಾದವು ಹಾಳಾಗುತ್ತವೆ. ಅಂಗಡಿ-ಮಳಿಗೆಗಳ ಬಾಡಿಗೆ ಪಾವತಿಸಬೇಕು ಮುಂತಾದ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಟ್ಟರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ರ್ಯಾಂಡಮ್ ಸ್ಯಾಂಪ್ಲಿಂಗ್ ಕೋವಿಡ್ ಪರೀಕ್ಷೆ ನಡೆಯುತ್ತಿರುವ ಈ ಸಂದರ್ಭದಲ್ಲಿ ತೊಂದರೆಯಾಗಬಾರದು. 31ರ ಹೊತ್ತಿಗೆ ವ್ಯಾಪಾರ ವಹಿವಾಟಿಗೆ ಮುಕ್ತ ವಾತಾವರಣ ಕಲ್ಪಿಸಲಾಗುವುದು ಎಂದು ಅವರು ಭರವಸೆ ನೀಡಿದರು.



Share this Story:

Follow Webdunia kannada

ಮುಂದಿನ ಸುದ್ದಿ

ಈದ್ಗಾಗಳಲ್ಲಿ ನಡೆಯದ ರಂಜಾನ್