Webdunia - Bharat's app for daily news and videos

Install App

ರುಚಿ ರುಚಿಯಾದ ಬೀಟ್ ರೂಟ್ ರಸಂ ಸವಿದಿದ್ದೀರಾ...?

Webdunia
ಶುಕ್ರವಾರ, 9 ಫೆಬ್ರವರಿ 2018 (12:43 IST)
ಬೆಂಗಳೂರು : ಬೀಟ್ ರೂಟ್ ಸಾಂಬಾರ್, ಪಲ್ಯ, ಹಲ್ವಾ ಇವೆಲ್ಲ ಮಾಮೂಲು. ಡಿಫರೆಂಟ್ ಆಗಿ, ಟೇಸ್ಟಿಯಾಗಿರೋ ಬೀಟ್ ರೂಟ್ ರಸಂ ಕೂಡ ಮಾಡಬಹುದು. ಮಾಡುವ ವಿಧಾನ ಇಲ್ಲಿದೆ.


ಬೇಕಾಗುವ ಸಾಮಗ್ರಿ : 1 ಬೌಲ್ ಹೆಚ್ಚಿದ ಬೀಟ್ ರೂಟ್, 2 ಚಮಚ ತೆಂಗಿನ ತುರಿ, 1-2 ಚಮಚ ಎಣ್ಣೆ, ಸಾಸಿವೆ, ಜೀರಿಗೆ, ಇಂಗು, ಅರಿಶಿನ, 1-2 ಹಸಿಮೆಣಸಿನಕಾಯಿ, ಬೆಳ್ಳುಳ್ಳಿ, ಕರಿಬೇವು, ಪುದೀನಾ, ಸಾಸಿವೆ, ಸಣ್ಣಗೆ ಹೆಚ್ಚಿದ ಈರುಳ್ಳಿ, ಒಂದು ಕಪ್ ಹುಣಿಸೆ ಹಣ್ಣಿನ ರಸ, ಉಪ್ಪು, ಮೆಣಸಿನ ಪುಡಿ, ಹೆಚ್ಚಿದ ಕೊತ್ತಂಬರಿ ಸೊಪ್ಪು.


ಮಾಡುವ ವಿಧಾನ : ಬೀಟ್ ರೂಟ್ ಸಿಪ್ಪೆ ತೆಗೆದು ದೊಡ್ಡದಾಗಿ ಹೆಚ್ಚಿಕೊಂಡು 10 ನಿಮಿಷ ಬೇಯಿಸಿಕೊಳ್ಳಿ. ಅದು ತಣ್ಣಗಾದ ಬಳಿಕ 2 ಚಮಚ ತೆಂಗಿನ ತುರಿ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಬಳಿಕ ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಹಾಕಿ ಕಾಯಿಸಿ, ಎಣ್ಣೆ ಬಿಸಿಯಾದ ಬಳಿಕ ಅರ್ಧ ಚಮಚ ಸಾಸಿವೆ, ಜೀರಿಗೆ ಮತ್ತು ಚಿಟಿಕೆ ಇಂಗನ್ನು ಹಾಕಿ. ಬೆಳ್ಳುಳ್ಳಿ ಎಸಳು ಮತ್ತು ಕರಿಬೇವಿನ ಎಲೆ ಹಾಕಿ.


ಅದು ಸ್ವಲ್ಪ ಕಂದು ಬಣ್ಣಕ್ಕೆ ಬಂದ ಮೇಲೆ ಹೆಚ್ಚಿದ ಈರುಳ್ಳಿ ಮತ್ತು ಎರಡು ಹಸಿಮೆಣಸಿನ ಕಾಯಿ ಹಾಕಿ. ಅದನ್ನು ಸ್ವಲ್ಪ ಹುರಿದ ಬಳಿಕ ಹುಣಸೆ ಹಣ್ಣಿನ ರಸ, ಅರಿಶಿನ ಮತ್ತು ಉಪ್ಪು ಹಾಕಿ ಮಿಕ್ಸ್ ಮಾಡಿ. 5 ನಿಮಿಷ ಕುದಿಸಿ ನಂತರ ರೆಡಿ ಮಾಡಿ ಇಟ್ಟುಕೊಂಡಿದ್ದ ಬೀಟ್ ರೂಟ್ ಪ್ಯೂರೆಯನ್ನು ಹಾಕಿ. ರಸಂ ಹದಕ್ಕೆ ಬೇಕಾಗುವಷ್ಟು ನೀರು ಬೆರೆಸಿ. 5 ನಿಮಿಷ ಕುದಿಸಿದ ಬಳಿಕ ಮೆಣಸಿನ ಪುಡಿ, ಹೆಚ್ಚಿದ ಪುದೀನಾ ಹಾಕಿ ತಿರುವಿ. ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿದರೆ ಬಿಸಿಬಿಸಿಯಾದ ಬೀಟ್ ರೂಟ್ ರಸಂ ಸಿದ್ಧ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಲಟಿಕೆ ತೆಗೆಯುವ ಅಭ್ಯಾಸವಿದೆಯಾ ಹಾಗಿದ್ರೆ ಇಂದೇ ಬಿಟ್ಟು ಬಿಡಿ

ಈ ಟೆಸ್ಟ್‌ಗಳನ್ನು ಮಾಡಿದ್ರೆ ತಿಳಿಯುತ್ತೆ ನಿಮ್ಮ ಆರೋಗ್ಯದ ಗುಟ್ಟು

ತೆಳ್ಳಗಿರೋರಿಗೆ ಕೊಲೆಸ್ಟ್ರಾಲ್ ಬರಲ್ವಾ: ನಿಜಾಂಶ ಇಲ್ಲಿದೆ

ಡ್ರ್ಯಾಗನ್ ಹಣ್ಣನ್ನು ಯಾಕೆ ಸೇವಿಸಬೇಕೆಂಬುದಕ್ಕೆ ಇಲ್ಲಿದೆ ಕೆಲ ಕಾರಣ

ಹೃದಯದ ಆರೋಗ್ಯ ಚೆನ್ನಾಗಿರಬೇಕೆಂದರೆ ಇದೊಂದನ್ನು ಸೇವಿಸಬೇಡಿ

ಮುಂದಿನ ಸುದ್ದಿ
Show comments