Select Your Language

Notifications

webdunia
webdunia
webdunia
webdunia

ಮೂರ್ಛೆರೋಗಕ್ಕೆ ಇಲ್ಲಿದೆ ಮನೆಮದ್ದು!

ಮೂರ್ಛೆರೋಗಕ್ಕೆ ಇಲ್ಲಿದೆ ಮನೆಮದ್ದು!
ಬೆಂಗಳೂರು , ಶುಕ್ರವಾರ, 9 ಫೆಬ್ರವರಿ 2018 (07:38 IST)
ಮೂರ್ಛೆರೋಗ ಮನುಷ್ಯರಲ್ಲಿ ಕಂಡುಬರುವ ಕಾಯಿಲೆಗಳಲ್ಲಿ ಒಂದು. ಇದು ತೀರಾ ಚಿಕ್ಕಮಕ್ಕಳಲ್ಲಿ ಕಾಣಿಸಿಕೊಂಡು ಕೆಲವರ್ಷಗಲ್ಲಿ ಗುಣವಾಗುವುದುಂಟು. ಮೂರ್ಛೆರೋಗ ದೀರ್ಘಕಾಲಿಕ ಚಿಕಿತ್ಸೆಯಿಂದ ಗುಣವಾಗಿರುವ ಉದಾಹರಣೆಗಳೂ ಎಷ್ಟೋ ಇವೆ.ಶರೀರದಲ್ಲಿ ಕಂಪನ, ನೆಲದ ಮೇಲೆ ಬಿದ್ದು ಒದ್ದಾಟ, ಬಾಯಲ್ಲಿ ಬುರುಗು, ಹಲ್ಲು ಕಡಿಯುವುದು ಇತ್ಯಾದಿ ಚಿಹ್ನೆಗಳು ಮೂರ್ಛೆರೋಗದ ಲಕ್ಷಣಗಳು. ಇಂತಹ ಮೂರ್ಛೆರೋಗಕ್ಕೆ ಇಲ್ಲಿದೆ ಮನೆಮದ್ದು:

  • ಕಿತ್ತಳೆ ಹಣ್ಣಿನ ನಿರಂತರ ಸೇವನೆ ಮೂರ್ಛೆರೋಗವನ್ನು ತಗ್ಗಿಸಲು ಪೂರಕವಾಗಬಲ್ಲದು.
  • ಕಹಿ ಹೀರೇಕಾಯಿಯನ್ನು ನೀರಿನೊಂದಿಗೆ ಅರೆದು ಬಟ್ಟೆಯಿಂದ ಶೋಧಿಸಿ ಅಪಸ್ಮಾರವುಂಟಾದಾಗ ಮೂಗಿಗೆ ೩-೪ ಹನಿಗಳನ್ನು ಹಾಕಬೇಕು.
  • ಬಿಳಿ ಈರುಳ್ಳಿ ರಸವನ್ನು ರೋಗಿಯ ಮೂಗಿಗೆ ಬಿಡುವುದು.
  • ಮುತ್ತುಗದ ಬೇರನ್ನು ನೀರಿನೊಂದಿಗೆ ಅರೆದು ಮೂಗಿಗೆ ನಶ್ಯದಂತೆ ಏರಿಸುವುದು.
  • ತುಳಸಿ ರಸದಲ್ಲಿ ಸೈನ್ಧವ ಲವಣವನ್ನು ಸೇರಿಸಿ ಮೂಗಿಗೆ ಬಿಡುವುದು.
  • ವಾಯುವಿಳಂಗ, ಕರಿಮೆಣಸು, ನುಗ್ಗೆ,ಇಪ್ಪೆ ಬೀಜಗಳನ್ನು ಕುಟ್ಟಿ ಶೋಧಿಸಿ ಮೂಗಿಗೆ ಹನಿಗಳನ್ನು ಬಿಟ್ಟಲ್ಲಿ ಹಿಸ್ಟೇರಿಯಾದಿಂದ ಮೂರ್ಛೆ ಹೋದವರಿಗೆ ಉಪಶಮನ ದೊರಕುವುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಚಿಕ್ಕ ಮಕ್ಕಳು ಅಳುತ್ತಿದ್ದರೆ ಈ ರೀತಿಯಲ್ಲಿ ಸಮಾಧಾನ ಪಡಿಸಿ!