Select Your Language

Notifications

webdunia
webdunia
webdunia
webdunia

ಹುಡುಗರೇ ಹಣ ಉಳಿಸಬೇಕಾ…? (ವಿಡಿಯೋ ನೋಡಿ)

ಹುಡುಗರೇ ಹಣ ಉಳಿಸಬೇಕಾ…? (ವಿಡಿಯೋ ನೋಡಿ)
ಉಡುಪಿ , ಶನಿವಾರ, 25 ನವೆಂಬರ್ 2017 (11:27 IST)
ಉಡುಪಿ: ಸಂಸಾರದ ತಾಪತ್ರಯಗಳಿಗೆ ಹೆಗಲುಕೊಟ್ಟು ದೂರದ ಊರಿನಲ್ಲಿ ಕೆಲಸ ಮಾಡಿಕೊಂಡು ಇರುವ ಹುಡುಗರಿಗೆ ಅಡುಗೆ ಮಾಡುವುದೇ ದೊಡ್ಡ ತಲೆಬಿಸಿ. ಸಂಸಾರಸ್ಥರಾದರೆ ಹೆಂಡತಿ ರುಚಿ ರುಚಿಯಾಗಿ ಅಡುಗೆ ಮಾಡುತ್ತಾಳೆ ತಿಂದುಂಡು ಮಲಗಿದರೆ ಮುಗಿಯಿತು. ಆದರೆ ಇನ್ನು ಮದುವೆಯಾಗದೇ ಇರುವ ಹುಡುಗರ ಪರಿಸ್ಥಿತಿ ತುಸು ಕಷ್ಟ ಎನ್ನಬಹುದು.


ಎರಡಂಕಿ ಸಂಬಳ ಪಡೆದುಕೊಂಡು ಹೋಟೆಲ್ ನಲ್ಲಿ ಊಟ ಮಾಡಿಕೊಂಡು ಆಮೇಲೆ ಸಾಲ ಮಾಡಿಕೊಂಡು ತಲೆ ಕೆಡಿಸಿಕೊಳ್ಳುವ ಹುಡುಗರೇ ಇರುವಾಗ ಉಡುಪಿ ಜಿಲ್ಲೆಯ ಯಡ್ತಾಡಿ ಗ್ರಾಮದ ಯೋಗೀಶ್ ಎಂ. ಶೆಟ್ಟಿ ಎಂಬುವರು ಮದುವೆಯಾಗದ ಹುಡುಗರು ಮನೆಯಲ್ಲಿಯೇ ಸರಳವಾಗಿ ಅಡುಗೆ ಮಾಡಿಕೊಂಡು ಹೇಗೆ ಹಣವನ್ನು ಉಳಿಸಬಹುದು ಜತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ತಿಳಿಸಿಕೊಟ್ಟಿದ್ದಾರೆ.


ರಜಾ ದಿನಗಳಲ್ಲಿ ಹುಡುಗರು ತಡವಾಗಿ ಎದ್ದು ಬೆಳಿಗ್ಗೆ ಹೋಟೆಲ್ ನಲ್ಲಿ ತಿಂಡಿ ತಿಂದು ಮಧ್ಯಾಹ್ನ ಪುನಃ ಊಟಕ್ಕಾಗಿ ಹೋಟೆಲ್ ಗೆ ಹೋಗುತ್ತಾರೆ. ರಾತ್ರಿ ಮತ್ತೆ ಗೆಳೆಯರೆಲ್ಲಾ ಸೇರಿಕೊಂಡು ಪಾರ್ಟಿ ಎಂದು ಹೊರಗೆ ಹೋಗುತ್ತಾರೆ. ವಾರಾಂತ್ಯದಲ್ಲಿ ರಜೆಯಲ್ಲಿ ಹುಡುಗರು ಹೊರಗಡೆ ಊಟ ಮಾಡುವುದಕ್ಕೆಂದೇ ಸುಮಾರು 2 ಸಾವಿರದ ತನಕ ಖರ್ಚುಮಾಡುತ್ತಾರೆ. ಇದರ ಬದಲು 300-400 ಹಣ ಕೊಟ್ಟು ಮೀನು/ ಕೋಳಿ ತಂದು ಮನೆಯಲ್ಲಿಯೇ ಅಡುಗೆ ಮಾಡಿಕೊಂಡರೇ ಆರೋಗ್ಯಕ್ಕೂ ಒಳ್ಳೆಯದು, ಹಣವೂ ಉಳಿತಾಯವಾಗುತ್ತದೆ ಎನ್ನುತ್ತಾರೆ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಯೋಗೀಶ್.




ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆ ದಿನ ಸ್ಲಿಮ್ ಆಗಿ ಕಾಣಿಸಿಕೊಳ್ಳಬೇಕೇ? ಹಾಗಿದ್ದರೆ ಹೀಗೆ ಮಾಡಿ!