Select Your Language

Notifications

webdunia
webdunia
webdunia
webdunia

ಪ್ರತಿಪಕ್ಷಗಳನ್ನು ಹಣಿಯಲು ಬಿಜೆಪಿಯಿಂದ ಚುನಾವಣೆಯಲ್ಲಿ ವಾಟ್ಸಪ್ ಸಮರ

ಪ್ರತಿಪಕ್ಷಗಳನ್ನು ಹಣಿಯಲು ಬಿಜೆಪಿಯಿಂದ ಚುನಾವಣೆಯಲ್ಲಿ ವಾಟ್ಸಪ್ ಸಮರ
ಬೆಂಗಳೂರು , ಭಾನುವಾರ, 19 ನವೆಂಬರ್ 2017 (14:26 IST)
ಮುಂಬರುವ ವಿಧಾನಸಭೆ ಚುನಾವಣೆ ಆಧುನೀಕರಣಗೊಳ್ಳುತ್ತಿದೆ. ಬಿಜೆಪಿ ನಾಯಕರು ಸಾಮಾಜಿಕ ಜಾಲ ತಾಣವನ್ನು ಬಳಸಿಕೊಂಡು ಮತದಾರರನ್ನು ತಲುಪಲು ಹೊಸ ಸಮರ ಆರಂಭಿಸಿದ್ದಾರೆ.
 
ಮುಂಬರುವ ವಿಧಾನಸಭೆ ಚುನಾವಣೆಗಾಗಿ 7 ಸಾವಿರ ವಾಟ್ಸಪ್ ಗ್ರೂಪ್‌ಗಳನ್ನು ಬಳಕೆ ಮಾಡಲು ಬಿಜೆಪಿಯ ಸಾಮಾಜಿಕ ಅಂತರ್ಜಾಲ ವಿಭಾಗ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
 
ಬಿಜೆಪಿಯ ಚುನಾವಣೆ ಚಾಣಕ್ಯ ಅಮಿತ್ ಶಾ ಅವರ ಆದೇಶದ ಮೇರೆಗೆ ಸಾವಿರಾರು ವಾಟ್ಸಪ್‌ ಗ್ರೂಪ್‌ಗಳ ಬಳಕೆಗೆ ನಿರ್ಧರಿಸಲಾಗಿದ್ದು, ಪ್ರತಿಯೊಂದು ವಾಟ್ಸಪ್ ಗ್ರೂಪ್‌ನಲ್ಲಿ 250 ಜನರಿರುತ್ತಾರೆ ಎಂದು ಸೆಲ್ ಸಂಚಾಲಕ ಬಾಲಾಜಿ ಶ್ರೀನಿವಾಸ್ ತಿಳಿಸಿದ್ದಾರೆ. 
 
ವಾಟ್ಸಪ್‌ಗ್ರೂಪ್‌ಗಳಲ್ಲಿ ಪ್ರಧಾನಿ ಮೋದಿ ಸರಕಾರ ಸಾಧನೆ ಮತ್ತು ಮೋದಿಯವರ ವಿಡಿಯೋದ ಭಾಷಣಗಳ ಕ್ಲಿಪ್‌ಗಳನ್ನು ಬಿಡುಗಡೆಗೊಳಿಸಲಾಗುತ್ತಿದೆ. ಇದರಿಂದ ಒಂದೇ ಬಾರಿಗೆ 1.4 ಲಕ್ಷ ಜನರಿಗೆ ಸಂದೇಶಗಳು ರವಾನೆಯಾಗಲಿವೆ ಎಂದು ಮಾಹಿತಿ ನೀಡಿದ್ದಾರೆ.
 
ಕೇಂದ್ರ ಸರ್ಕಾರದಲ್ಲಿರುವ ನಾಯಕರು ಸಂದೇಶಗಳನ್ನು ರವಾನಿಸುತ್ತಿರುತ್ತಾರೆ. ಈ ಸಂದೇಶವನ್ನೇ ವಾಟ್ಸ್ ಅಪ್ ಗ್ರೂಪ್ ನಲ್ಲೂ ಹಂಚಿಕೆ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ 10,000 ವಾಟ್ಸ್ ಅಪ್ ಗ್ರೂಪ್ ಗಳನ್ನು ತೆರಯಲಾಗುತ್ತದೆ. ಗ್ರೂಪ್ ಗಳಲ್ಲಿ ಸಾಕಷ್ಟು ಜನರು ಸೇರ್ಪಡೆಗೊಳ್ಳುತ್ತಾರೆ ಎಂದು ಬಿಜೆಪಿಯ ಸಾಮಾಜಿಕ ಜಾಲ ತಾಣದ ಸಂಚಾಲಕ ಬಾಲಾಜಿ ಶ್ರೀನಿವಾಸ್ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಒಬ್ಬನ ಜತೆ ಎಂಗೇಜ್‌ಮೆಂಟ್, ಮತ್ತೊಬ್ಬನೊಂದಿಗೆ ವಿವಾಹ...!