Publish Date: Sun, 19 Nov 2017 (14:15 IST)
Updated Date: Sun, 19 Nov 2017 (14:17 IST)
ಯುವತಿಯೊಬ್ಬಳು ಒಬ್ಬನ ಜತೆ ಎಂಗೇಜ್‌ಮೆಂಟ್ ಮಾಡಿಕೊಂಡು ಮತ್ತೊಬ್ಬನ ಜೊತೆ ವಿವಾಹ ಮಾಡಿಕೊಂಡ ವಿಚಿತ್ರ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ಯಸಳೂರು ಹೋಬಳಿಯಲ್ಲಿ ನಡೆದಿದೆ.
ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿದ್ದ ಯುವಕನೊಂದಿಗೆ ಯುವತಿಗೆ ಎಂಗೇಜ್‌ಮೆಂಟ್ ಆಗಿತ್ತು. ವಿವಾಹ ದಿನಾಂಕವೂ ನಿಗದಿಯಾಗಿತ್ತು. ಆದರೆ, ಯುವತಿ ನಾಪತ್ತೆಯಾಗಿದ್ದಳು, ನಂತರ ಬೇರೆ ಯುವಕನೊಂದಿಗೆ ವಿವಾಹವಾದ ಫೋಟೋಗಳನ್ನು ಎಂಗೇಜ್‌ಮೆಂಟ್ ಮಾಡಿಕೊಂಡ ಭಾವಿ ವರನಿಗೆ ರವಾನಿಸಿದ್ದಾಳೆ
ಮಧ್ಯಪ್ರದೇಶದ ಇಂದೋರ್ ಮೂಲದ ಯುವಕನೊಂದಿಗೆ ಯುವತಿ ಸೆಪ್ಟೆಂಬರ್ 11 ರಂದೇ ಸಪ್ತಪದಿ ತುಳಿದಿದ್ದಾಳೆ. ಆದರೆ ಮಾಹಿತಿ ಗೌಪ್ಯವಾಗಿಟ್ಟಿದ್ದಳು. ಮನೆಯವರ ಒತ್ತಾಯದ ಮೇರೆಗೆ ಇಂಜಿನಿಯರ್‌ನೊಂದಿಗೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಳು ಎನ್ನಲಾಗಿದೆ.
ಯುವತಿಯ ಕಿತಾಪತಿಯಿಂದ ಇಂದು ಬೆಂಗಳೂರು ಮೂಲದ ಇಂಜಿನಿಯರ್‌ನೊಂದಿಗೆ ನಡೆಯಬೇಕಾಗಿದ್ದ ವಿವಾಹ ರದ್ದಾಗಿದೆ. ಎರಡು ಕುಟುಂಬಗಳು ಶಾಕ್‌ಗೊಳಗಾಗಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.