Select Your Language

Notifications

webdunia
webdunia
webdunia
webdunia

ಬಿಜೆಪಿ ನಾಯಕರ ಸಿಡಿಗಳನ್ನು ಬಿಡುಗಡೆ ಮಾಡ್ತೇನೆ: ಹಾರ್ದಿಕ್ ಪಟೇಲ್

webdunia
ಗಾಂಧಿನಗರ , ಭಾನುವಾರ, 19 ನವೆಂಬರ್ 2017 (12:48 IST)
ಬಿಜೆಪಿ ನಾಯಕರು ನನ್ನ ಗೌರವಕ್ಕೆ ಧಕ್ಕೆ ತರಲು ಸೆಕ್ಸ್ ಸಿಡಿ ಬಿಡುಗಡೆ ಮಾಡುತ್ತಿದ್ದಾರೆ. ನಾನು ಕೂಡಾ ಬಿಜೆಪಿ ನಾಯಕರ ಸಿಡಿ ಬಿಡುಗಡೆ ಮಾಡ್ತೇನೆ. ಆದರೆ, ಅಂತಹ ಕೀಳ ರಾಜಕೀಯ ಮಾಡಬಾರದು ಎನ್ನುವ ಕಾರಣಕ್ಕೆ ಬಿಡುಗಡೆ ಮಾಡ್ತಿಲ್ಲ ಎಂದು ಪಟಿದಾರ್ ಮೀಸಲಾತಿ ಹೋರಾಟಗಾರ ಹಾರ್ದಿಕ್ ಪಟೇಲ್ ಗುಡುಗಿದ್ದಾರೆ. 
 
ಗುಜರಾತ್‌ನಲ್ಲಿ ನಡೆಯಲಿರುವ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಸೋಲುವುದು ಖಚಿತ. ಬಿಜೆಪಿ 60 ಸೀಟುಗಳಲ್ಲಿ ಕೂಡಾ ಗೆಲುವು ಸಾಧಿಸುವುದಿಲ್ಲ ಎಂದು ಭವಿಷ್ಯ ನುಡಿದ್ದಾರೆ. 
 
ಜನರಿಂದ ನನ್ನನ್ನು ದೂರವಾಗಿಸಲು ಕೋಟಿ ಕೋಟಿ ವೆಚ್ಚ ಮಾಡಿ ತಿರುಚಿದ ಸೆಕ್ಸ್ ಸಿಡಿಗಳನ್ನು ಬಿಜೆಪಿ ಬಿಡುಗಡೆ ಮಾಡುತ್ತಿದೆ. ನಾನು ಕೂಡಾ ಬಿಜೆಪಿ ಮುಖಂಡರ ತಿರುಚಿದ ಸಿಡಿಗಳನ್ನು ಬಿಡುಗಡೆ ಮಾಡಬಹುದು.ರಾಜ್ಯದ ಜನತೆಗೆ ಸಿಡಿ ಬೇಕಾಗಿಲ್ಲ ಅಭಿ0ವೃದ್ಧಿ ಬೇಕಾಗಿದೆ ಎಂದು ತಿಳಿಸಿದ್ದಾರೆ.
 
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಗುಜರಾತ್‌ಗೆ ಭೇಟಿ ನೀಡಿದಾಗ ಬಿಜೆಪಿ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸುತ್ತಾರೆ. ಆದರೆ, ಪ್ರಧಾನಿ ಮೋದಿ ಗುಜರಾತ್‌ಗೆ ಬಂದಾಗ ಯಾರೂ ಯಾಕೆ ಪ್ರಶ್ನಿಸುವುದಿಲ್ಲ ಎಂದು ಪಟಿದಾರ್ ಮುಖಂಡ ಹಾರ್ದಿಕ್ ಪಟೇಲ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ರೈಲಿನಲ್ಲಿ ಸ್ನೇಹ, ಲಾಡ್ಜ್‌ನಲ್ಲಿ ರೇಪ್ ಎಸಗಿ ಕೈಕೊಟ್ಟ ಭೂಪ