Select Your Language

Notifications

webdunia
webdunia
webdunia
webdunia

ಸಿಎಂ ವೋಟ್‌ಬ್ಯಾಂಕ್‌ಗಾಗಿ ಯಾರ್ ಬೂಟ್ ಬೇಕಾದ್ರೂ ನೆಕ್ತಾರೆ: ಅನಂತ್ ಕುಮಾರ್ ಹೆಗಡೆ

webdunia
ಬೆಳಗಾವಿ , ಶನಿವಾರ, 18 ನವೆಂಬರ್ 2017 (11:42 IST)
ಸಿಎಂ ಸಿದ್ದರಾಮಯ್ಯ ವೋಟ್‌ಬ್ಯಾಂಕ್‌ಗಾಗಿ ಯಾರ ಬೂಟ್ ಬೇಕಾದ್ರೂ ನೆಕ್ತಾರೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಮತ್ತೊಬ್ಬ ಬಿಜೆಪಿ ಶಾಸಕನಂತೆ ನಾಲಿಗೆ ಹರಿಬಿಟ್ಟಿದ್ದಾರೆ.
 
ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಮುಂಬರುವ ಚುನಾವಣೆಯಲ್ಲಿ ಜಯಗಳಿಸಲು ಮುಸ್ಲಿಮರ ಓಲೈಕೆಯಲ್ಲಿ ಮುಂದಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
 
ರಾಜ್ಯ ಸರಕಾರದ ಪರವಾಗಿ ಟಿಪ್ಪು ಜಯಂತಿ ಆಚರಿಸುವ ಸರಕಾರಕ್ಕೆ ರಾಣಿ ಕಿತ್ತೂರ್ ಚೆನ್ನಮ್ಮ, ರನ್ನ ಪಂಪ ಅವರ ಜಯಂತಿ ಆಚರಿಸಲು ನೆನಪು ಬರುತ್ತಿಲ್ಲ. ಅನೇಕ ಸಾಧಕರ ಜಯಂತಿ ಆಚರಿಸದೇ ಕೇವಲ ವೋಟ್‌ಬ್ಯಾಂಕ್‌ಗಾಗಿ ಟಿಪ್ಪು ಜಯಂತಿ ಆಚರಿಸುತ್ತಿದ್ದಾರೆ ಎಂದು ಕಿಡಿಕಾರಿದರು.
 
ಭಯೋತ್ಪಾದಕರಿಗೆ ಕರ್ನಾಟಕ ಸೇಫ್ ಜೋನ್. ನಾಲ್ಕುವರೆ ಲಕ್ಷ ಬಾಂಗ್ಲಾದೇಶ ವಲಸಿಗರು ಬೆಂಗಳೂರಿನಲ್ಲಿ ಇದ್ದಾರೆ. ಇವರು ಬೆಳಗಾವಿ, ವಿಜಯಪುರ ಹೀಗೆ ಎಲ್ಲ ಕಡೆ ಜೋಳಿಗೆ ಹಾಕಿಕೊಂಡು ಓಡಾಡುತ್ತಾರೆ ಎಂದು ಅನಂತ್ ಕುಮಾರ್ ಹೇಳಿದ್ದಾರೆ.  

ಮುಂಬರುವ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ. ಕಾಂಗ್ರೆಸ್ ಪಕ್ಷ ಶೀಘ್ರವೇ ನಿರ್ನಾಮವಾಗಲಿದೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಭವಿಷ್ಯ ನುಡಿದಿದ್ದಾರೆ.
 
 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಐಟಿ ದಾಳಿಗೆ ಶಶಿಕಲಾ ಬಣದ ಕುಮ್ಮಕ್ಕು: ಜಯಾ ಸೊಸೆ ಆರೋಪ