Select Your Language

Notifications

webdunia
webdunia
webdunia
webdunia

ಶಶಿಕಲಾ ನಿವಾಸದಲ್ಲಿ 1430 ಕೋಟಿ ಮೌಲ್ಯದ ಚಿನ್ನ, ವಜ್ರ, ನಗದು ಹಣ ಪತ್ತೆ

ಶಶಿಕಲಾ ನಿವಾಸದಲ್ಲಿ 1430 ಕೋಟಿ ಮೌಲ್ಯದ ಚಿನ್ನ, ವಜ್ರ, ನಗದು ಹಣ ಪತ್ತೆ
ಚೆನ್ನೈ , ಮಂಗಳವಾರ, 14 ನವೆಂಬರ್ 2017 (13:18 IST)
ಜೈಲಿನಲ್ಲಿರುವ ಎಐಎಡಿಎಂಕೆ ನಾಯಕ ವಿ.ಕೆ. ಶಶಿಕಲಾ ಮತ್ತು ಜಯಾ ಟಿವಿ ಕುಟುಂಬದ ಒಡೆತನದ ಆವರಣದಲ್ಲಿ ನಡೆದ ದಾಳಿಗಳಲ್ಲಿ 1430 ಕೋಟಿ ರೂ. ಅಘೋಷಿತ ಆಸ್ತಿ ಪತ್ತೆಯಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಮೂಲಗಳು ತಿಳಿಸಿವೆ.
ಐಟಿ ಇಲಾಖೆಯ ಶಶಿಕಲಾ ಸಂಬಂಧಿಕರು ಮತ್ತು ಜಯಾ ಟಿವಿ ಕಚೇರಿಗಳ ಮೇಲೆ ದಾಳಿ ನಡೆಸಿದಾಗ  1430 ಕೋಟಿ ಮೌಲ್ಯದ ಚಿನ್ನ, ವಜ್ರ, ನಗದು ಹಣ ಪತ್ತೆಯಾಗಿದೆ ಎಂದು ಐಟಿ ಮೂಲಗಳು ತಿಳಿಸಿವೆ.
 
ಎಐಎಡಿಎಂಕೆ ನಾಯಕನ ಸೋದರಳಿಯ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಜಯರಾಮನ್‌ನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.
 
ಶಶಿಕಲಾ ಮತ್ತು ಅವರ ಸಂಬಂಧಿಕರ ನಿವಾಸದ ಮೇಲೆ ದಾಳಿ ನಡೆಸಿದ ಸಮಯದಲ್ಲಿ ಸುಮಾರು 5 ಕೋಟಿ ರೂ. ಮೌಲ್ಯದ ನಗದು ಮತ್ತು ಆಭರಣಗಳ ಮೇಲೆ 7 ಕೋಟಿ ರೂ. ವಶಪಡಿಸಿಕೊಳ್ಳಲಾಗಿದೆ. 15 ಬ್ಯಾಂಕ್ ಲಾಕರ್‌ಗಳು ಮತ್ತು ವಜ್ರದ ಆಭರಣಗಳನ್ನು "ನಿಷೇಧಿತ ಆದೇಶ" ಅಡಿಯಲ್ಲಿ ಇರಿಸಲಾಗಿದ್ದು, ಅದನ್ನು ವಶಪಡಿಸಿಕೊಳ್ಳಲು ನಿರಾಕರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 
"ಹಲವು ದಾಖಲೆಗಳನ್ನು ಪತ್ತೆ ಹಚ್ಚಲಾಗಿದೆ ಮತ್ತು ಮೊದಲನೆಯದಾಗಿ ನಾವು ಬಹಿರಂಗಪಡಿಸದ 1,430 ಕೋಟಿ ರೂ. ಆದಾಯವನ್ನು ಪತ್ತೆ ಮಾಡಿದ್ದೇವೆ" ಎಂದು ಅನಾಮಧೇಯ ಅಧಿಕಾರಿ ಮೂಲಗಳು ತಿಳಿಸಿವೆ.
 
ವಿವರಿಸಲಾಗದ ನಗದುಗೆ ಸಂಬಂಧಿಸಿದಂತೆ ಹಲವಾರು ಕಂಪೆನಿಗಳನ್ನು ಖರೀದಿಸಿ ವ್ಯವಹಾರಗಳನ್ನು ನಡೆಸಲಾಗಿದೆ . ಶೆಲ್ ಕಂಪೆನಿಗಳ ಸಮಸ್ಯೆಯು ಪ್ರತ್ಯೇಕ ವಿಷಯವಾಗಿದೆ. ಅದರ ಬಗ್ಗೆ ಹೆಚ್ಚಿಗೆ ಹೇಳಿಕೆ ನೀಡಲು ಸಾಧ್ಯವಿಲ್ಲ ಎಂದು ಮೂಲಗಳು ತಿಳಿಸಿವೆ.
 
ಏತನ್ಮಧ್ಯೆ, ಜಯಾ ಟಿವಿ (ಮಾವಿಸ್ ಸ್ಯಾಟ್ಕಾಮ್ ಲಿಮಿಟೆಡ್) ನ ಮುಖ್ಯಸ್ಥ ವಿವೇಕ್ ಜಯರಾಮನ್ ಅವರನ್ನು ತೆರಿಗೆ ಅಧಿಕಾರಿಗಳು ಪ್ರಶ್ನಿಸಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ವಿವಾಹ ಪ್ರಸ್ತಾಪ ತಿರಸ್ಕರಿಸಿದ ಯುವತಿಯನ್ನು ಸಜೀವವಾಗಿ ದಹಿಸಿದ ಯುವಕ