Webdunia - Bharat's app for daily news and videos

Install App

ಮೊಟ್ಟೆ ಪ್ರಿಯರಿಗೆ ಆಮ್ಲೆಟ್‌ ರೆಸಿಪಿ..!!

Webdunia
ಸೋಮವಾರ, 8 ಅಕ್ಟೋಬರ್ 2018 (14:07 IST)
ಗ್ರೀನ್‌ಚಿಲ್ಲಿ ಬ್ರೆಡ್ ಆಮ್ಲೆಟ್
ಬೇಕಾಗುವ ಸಾಮಗ್ರಿ: 
ಮೊಟ್ಟೆ 2
ಉಪ್ಪು, 
ಅರಿಶಿಣ ಚಿಟಿಕೆ
ಖಾರದ ಪುಡಿ ಚಿಟಿಕೆ
ಕಾಳುಮೆಣಸಿನ ಪುಡಿ ಚಿಟಿಕೆ
ಹಸಿಮೆಣಸು & ಪುದಿನಾ
ಟೊಮೆಟೊ ಕೆಚಪ್ 2 ಚಮಚ
 
ಮೊದಲು ಒಂದು ಚಿಕ್ಕ ಜಾರಿನಲ್ಲಿ ಹಸಿಮೆಣಸು, ಪುದಿನಾ ಮತ್ತು ಉಪ್ಪನ್ನು ಹಾಕಿಕೊಂಡು ರುಬ್ಬಿಕೊಳ್ಳಿ ಅದಕ್ಕೆ ನೀರನ್ನು ಹಾಕಬೇಡಿ ನಂತರ ಒಂದು ಬೌಲ್‍ನಲ್ಲಿ ಮೊಟ್ಟೆ ಒಡೆದು ಹಾಕಿ ಅದಕ್ಕೆ ಉಪ್ಪು, ಅರಿಶಿಣ, ಖಾರದ ಪುಡಿ ಮತ್ತು ಕಾಳುಮೆಣಸಿನ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಪ್ಯಾನ್ ಬಿಸಿಗಿಟ್ಟು ಅದಕ್ಕೆ ಒಂದು ಚಮಚ ಎಣ್ಣೆ ಹಾಕಿ ಮೊಟ್ಟೆಯ ಮಿಶ್ರಣವನ್ನು ಹಾಕಿ. ನಂತರ ಬ್ರೆಡ್ ತುಂಡನ್ನು ತೆಗೆದುಕೊಂಡು ಪ್ಯಾನ್‍ನಲ್ಲಿರುವ ಮೊಟ್ಟೆಯ ಮಿಶ್ರಣ(ಆಮ್ಲೆಟ್)ದ ಮೇಲೆ ಒಮ್ಮೆ ಅದ್ದಿ ಉಲ್ಟಾ ಮಾಡಿ ಮತ್ತೆ ಆಮ್ಲೆಟ್ ಮೇಲೆ ಇಡಿ. ನಂತರ ಎರಡೂ ಬದಿ ಆಮ್ಲೆಟ್ ಚೆನ್ನಾಗಿ ಬೆಂದ ನಂತರ ಖಾಲಿ ಇರುವ ಆಮ್ಲೆಟ್‍ನ ಭಾಗವನ್ನು ದೋಸೆ ಮಡಚಿದಂತೆ ಬ್ರೆಡ್ ಮೇಲೆ ಮಡಚಿ ಎರಡು ಬ್ರೆಡ್‌ನ ಒಳಭಾಗಕ್ಕೆ ಹಸಿಮೆಣಸು ಮತ್ತು ಪುದಿನಾ ಹಾಕಿ ಮಾಡಿಕೊಂಡಿರುವ ಪೇಸ್ಟ್ ಅನ್ನು ಹಾಕಿ ಅದರ ಮೇಲೆ ಟೊಮೆಟೊ ಕೆಚಪ್ 2 ಚಮಚ ಹಾಕಿದರೆ ಗ್ರೀನ್‌ಚಿಲ್ಲಿ ಬ್ರೆಡ್ ಆಮ್ಲೆಟ್ ಸವಿಯಲು ಸಿದ್ಧ.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ
Show comments